ಬೆಂಗಳೂರು –

ಸುದ್ದಿ ಸಂತೆ ಯ ಬಿಗ್ ಫಲಶೃತಿ ಶಿಕ್ಷಕರ ವರ್ಗಾವಣೆ ಕುರಿತು ಕೊನೆಗೂ ರಾಜ್ಯದ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸುದ್ದಿಸಂತೆಯು ಬಹಳ ವರ್ಷಗಳಿಂದ ವರ್ಗಾವಣೆ ಆಗದೇ ತಂದೆ, ತಾಯಿ, ಹೆಂಡತಿ, ಮಕ್ಕಳು ಒಂದು ಕಡೆ ಸೇವೆ ಸಲ್ಲಿಸುತ್ತಿರು ವ ಶಿಕ್ಷಕರು ಒಂದು ಕಡೆ ಇದ್ದು ಅಂತಹ ಶಿಕ್ಷಕರು ಮಕ್ಕಳ ಪ್ರೀತಿಯಿಂದ ವಂಚಿತರಾಗಿದ್ದಾರೆ, ನಮ್ಮ ತಂದೆ ತಾಯಿಗಳನ್ನು ವರ್ಗಾವಣೆ ಮಾಡಿ ಅಂತ ಪರಿಪರಿಯಾಗಿ ಬೇಡಿಕೊಂಡ ಪರಿಣಾಮ ಮತ್ತು ಈ ಬಗ್ಗೆ ಗ್ರಾಮೀಣ ಶಿಕ್ಷಕರ ಸಂಘ ನಿರಂತರವಾಗಿ ಸಚಿವರು,ಶಾಸಕರು, ಮುಂತಾದ ಜನಪ್ರತಿನಿದಳನ್ನು ಒತ್ತಾಯಿಸಿದ್ದರಿಂದ ಇಂದು ಶಿಕ್ಷಣ ಸಚಿವ ಎಸ್ ಸುರೇಶಕುಮಾರ ದಿಟ್ಟ ನಿರ್ದಾರ ತೆಗೆದುಕೊಂಡು ವರ್ಗಾವಣೆ ಆರಂಭಕ್ಕೆ ಹಸಿರುನಿಶಾನೆ ತೋರಿಸಿದ್ದು ರಾಜ್ಯದ ವರ್ಗಾವಣೆ ಅಪೇಕ್ಷಿತ ಶಿಕ್ಷಕರು ನಿರಾಳರಾ ಗಿದ್ದಾರೆ,
ಶಿಕ್ಷಕರ ವರ್ಗಾವಣೆ: ಮನೆಯಿಂದಲೇ ಕೌನ್ಸೆಲಿಂಗ್; ಇದು ಈ ಬಾರಿಯ ವಿಶೇಷ…
ಜೂನ್ 30ರಿಂದ ವರ್ಗಾವಣೆ ಆರಂಭ
ಹಲವು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾ ವಣೆ ಪ್ರಕ್ರಿಯೆಗೆ ಜೂನ್ 30ರಿಂದ ಅಧಿಸೂಚನೆ ಪ್ರಕಟಗೊಳ್ಳಲಿದ್ದು ಅಂದಿನಿಂದಲೇ ವರ್ಗಾವಣೆ ಆರಂಭವಾಗಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜೂನ್ 30, ಬುಧವಾರದಿಂದ ಆರಂಭಗೊಳ್ಳಲಿದೆ ಎಂದರು. ಕಡ್ಡಾಯ ವರ್ಗಾವ ಣೆಗೆ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಉಳಿದವರಿಗೂ ಅವಕಾಶ ನಿದಲಾಗುತ್ತದೆ. ಈ ಬಾರಿ ವಿಶೇಷವಾಗಿ ಶಿಕ್ಷಕರ ಕೌನ್ಸೆಲಿಂಗ್ ಆನ್ ಲೈನ್ ನಲ್ಲಿ ನಡೆಯಲಿದ್ದು, ಯಾವುದೇ ಕೇಂದ್ರಗಳಿಗೆ ಶಿಕ್ಷಕರು ಹೋಗಬೇಕಿಲ್ಲ. ಶಿಕ್ಷಣ ಮಿತ್ರ ಆಪ್ ಮೂಲಕವಾಗಿ ಮನೆಯಿಂದಲೇ ಶಿಕ್ಷಕರು ಕೌನ್ಸೆಲಿಂಗ್ ನಲ್ಲಿ ಭಾಗಿಯಾಗಬಹುದು ಎಂದರು.ಈಗಾಗಲೇ 75,000ಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದು, ಇನ್ನೂ ಹೆಚ್ಚಿನವರಿಗೂ ವರ್ಗಾವಣೆಗೆ ಅವಕಾಶ ನೀಡಲಾ ಗುವುದು.ಸ್ಥಳ ಆಯ್ಕೆ ಬಗ್ಗೆಯೂ ಕೌನ್ಸೆಲಿಂಗ್ ನಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು. ರಾಜ್ಯ ಸರ್ಕಾರಿ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರು ಗುರು ತಿಗಡಿ ಪ್ರದಾನ ಕಾರ್ಯದರ್ಶಿ ಶಂಕರ ಘಟ್ಟಿ, ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರು ಅಶೋಕ ಸಜ್ಜನ, ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ ಪ್ರದಾನ ಕಾರ್ಯದರ್ಶಿ ಮಲ್ಲಿಕಾ ರ್ಜುನ ಉಪ್ಪಿನ ಕೋಶಾದ್ಯಕ್ಷರು ಎಸ್ ಎಫ್ ಪಾಟೀಲ ಹನುಮಂತಪ್ಪ ಮೇಟಿ, ಮಲ್ಲಿಕಾರ್ಜುನ ಚರಂತಿಮಠ, ಸಂಗಮೇಶ ಖನ್ನಿನಾಯ್ಕರ, ಶರಣ ಬಸವ ಬನ್ನಿಗೋಳ ಎಂವಿ ಕುಸುಮ,ಜಿ ಟಿ ಲಕ್ಷ್ಮೀ ದೇವಮ್ಮ, ಅಕ್ಬರಲಿ ಸೋಲಾಪುರ ರಾಜೀವ ಸಿಂಗ ಹಲವಾಯಿ, ಆರ್ ನಾರಾಯಣಸ್ವಾಮಿ ಚಿಂತಾ ಮಣಿ, ನೆಲಮಂಗಲ ಮಲ್ಲಿಕಾರ್ಜುನ, ಅಶೋಕ ಬಿಸೆರೊಟ್ಟಿ, ಡಿ ಎಸ್ ಭಜಂತ್ರಿ, ಎನ್ ಎಂ ಕುಕ ನೂರ, ಆರ್ ಎಂ ಕಮ್ಮಾರ ಟಗರು ಪಂಡೀತ, ಡಾವಣಗೆರೆ ಸಿದ್ದೇಶ, ಡಾ, ಲಕ್ಷ್ಮಣ ಕೆ ಎಂ, ಮುಂತಾ ದವರು ಸ್ವಾಗತಿಸಿದರು.