13 ಸರ್ಕಾರಿ ಅಧಿಕಾರಿಗಳಿಂದ ಲೋಕಾಯುಕ್ತರು ವಶಪಡಿಸಿಕೊಂಡಿದ್ದೇಷ್ಟು ಗೊತ್ತಾ – ರಾಜ್ಯದಲ್ಲಿ ನಡೆದ ಲೋಕಾಯುಕ್ತ ದಾಳಿಯ ಕಂಪ್ಲೀಟ್ ಮಾಹಿತಿ…..

Suddi Sante Desk
13 ಸರ್ಕಾರಿ ಅಧಿಕಾರಿಗಳಿಂದ ಲೋಕಾಯುಕ್ತರು ವಶಪಡಿಸಿಕೊಂಡಿದ್ದೇಷ್ಟು ಗೊತ್ತಾ – ರಾಜ್ಯದಲ್ಲಿ ನಡೆದ ಲೋಕಾಯುಕ್ತ ದಾಳಿಯ ಕಂಪ್ಲೀಟ್ ಮಾಹಿತಿ…..

ಬೆಂಗಳೂರು

13 ಸರ್ಕಾರಿ ಅಧಿಕಾರಿಗಳಿಂದ ಲೋಕಾಯು ಕ್ತರು ವಶಪಡಿಸಿಕೊಂಡಿದ್ದೇಷ್ಟು ಗೊತ್ತಾ  ರಾಜ್ಯ ದಲ್ಲಿ ನಡೆದ ಲೋಕಾಯುಕ್ತ ದಾಳಿಯ ಕಂಪ್ಲೀಟ್ ಮಾಹಿತಿ ಹೌದುರಾಜ್ಯದಲ್ಲಿ ಮತ್ತೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮೇಲೆ ಮತ್ತೆ ದಾಳಿಯನ್ನು ಮಾಡಿದ್ದಾರೆ.ಮತ್ತೆ 13 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀ ಸರು ದಾಳಿಯನ್ನು ಮಾಡಿದ್ದು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.

ಬೆಳ್ಳಂ ಬೆಳಿಗ್ಗೆ ರಾಜ್ಯಾದ್ಯಂತ ಶೋಧ ಕಾರ್ಯಾ ಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು 13 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ ಕೋಟ್ಯಂ ತರ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿ ದ್ದಾರೆ.ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿ ರುವ ಗಂಭೀರ ಆರೋಪದಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ 13 ಸರ್ಕಾರಿ ಅಧಿಕಾರಿಗಳ ಮನೆ ಸಂಬಂಧಿಕರ ನಿವಾಸಗಳು ಸೇರಿದಂತೆ ಒಟ್ಟು 68 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋಟ್ಯಂತರ ರೂಪಾಯಿ ಮೌಲ್ಯದ ಚರ,ಸ್ಥಿರಾಸ್ತಿ ಗಳನ್ನು ಕೂಡಾ ವಶಕ್ಕೆ ಪಡೆದುಕೊಂಡಿದ್ದಾರೆ ಆರೋಪಿತರ ವಿರುದ್ಧ ಪ್ರತ್ಯೇಕವಾಗಿ 13 ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.

KPTCL ಅಭಿಯಂತರರ ಮನೆಯ ಮೇಲೆ ದಾಳಿ
ಚನ್ನಕೇಶವ ಎಚ್.ಡಿ ಕಾರ್ಯಪಾಲಕ ಅಭಿ ಯಂತರ ಕೆಪಿಟಿಸಿಎಲ್,ಚನ್ನಕೇಶವ ಅವರಿಗೆ ಸಂಬಂಧಿಸಿದ ಮನೆ ಹಾಗೂ ಇತರೆ ಏಳು ಕಡೆ ಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.11,46 ಕೋಟಿ ರೂ ಮೌಲ್ಯದ ನಿವೇಶನ,ಮನೆ, ಜಮೀನಿಗೆ ಸೇರಿದ ದಾಖಲೆ ಗಳನ್ನು ವಶಪಡಿಸಿಕೊಳ್ಳಲಾಗಿದೆ.

1.44 ಕೋಟಿ ಮೌಲ್ಯದ 3 ಕೆ.ಜಿ. ಚಿನ್ನ, 28 ಕೆ.ಜಿ. ಬೆಳ್ಳಿ, 25 ಲಕ್ಷದ ವಜ್ರ, 5 ಲಕ್ಷದ ಸೇಲ್ ಡೀಡ್ ಸೇರಿದಂತೆ 15,53 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.

KMF ಭದ್ರತಾ ಅಧಿಕಾರಿಯ ಮನೆಯ ಮೇಲೆ ದಾಳಿ
ಎಚ್.ಎಸ್.ಕೃಷ್ಣಮೂರ್ತಿ- ಮುಖ್ಯ ಕಾರ್ಯನಿ ರ್ವಾಹಕ (ಭದ್ರತೆ) ಕೆಎಂಎಫ್,ರಾಮನಗರ ಜಿಲ್ಲೆ ಕೃಷ್ಣಮೂರ್ತಿ ಅವರಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ನಿವೇಶನ, ಮನೆ ಹಾಗೂ ಜಮೀನು ದಾಖಲಾತಿ ಸೇರಿದಂತೆ 49.87 ಲಕ್ಷ ಮೌಲ್ಯದ ಸ್ಥಿರಾಸ್ತಿ ಮತ್ತು 4 ಕೋಟಿ ರೂ.ಮೌಲ್ಯದ ಚಿನ್ನ-ಬೆಳ್ಳಿ ಹಾಗು ನಗದು ಜಪ್ತಿ ಮಾಡಿದ್ದಾರೆ.

ಬೆಸ್ಕಾಂ ವ್ಯವಸ್ಥಾಪಕರ ಮನೆಯ ಮೇಲೆ ದಾಳಿ
ಟಿ.ಎನ್.ಸುಧಾಕರ್ ರೆಡ್ಡಿ- ಉಪಪ್ರಧಾನ ವ್ಯವಸ್ಥಾಪಕ,ಬೆಸ್ಕಾಂ,ಸುಧಾಕರ್ ಅವರಿಗೆ ಸಂಬಂಧಿಸಿದ ಮನೆ ಸೇರಿ ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು 5.42 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಒಟ್ಟು 5.73 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ.

ಹೆಸ್ಕಾಂ ನಿವೃತ್ತ ಕಿರಿಯ ಅಭಿಯಂತರ ಮನೆಯ ಮೇಲೆ ದಾಳಿ
ಬಸವರಾಜ್- ನಿವೃತ್ತ ಕಿರಿಯ ಅಭಿಯಂತರ, ಹೆಸ್ಕಾಂ, ಹುಬ್ಬಳ್ಳಿ ನಗರ  ಬಸವರಾಜ್‌ ಅವರಿಗೆ ಸಂಬಂಧಿಸಿದ ಪ್ರತ್ಯೇಕ ಮೂರು ಕಡೆಗಳಲ್ಲಿ ದಾಳಿ ನಡೆಸಿ 2.31 ಕೋಟಿ ಮೌಲ್ಯದ ಸ್ಥಿರಾಸ್ತಿ, 80 ಲಕ್ಷ ನಗದು, 24,84 ಲಕ್ಷದ ವಾಹನಗಳು, 18.33 ಲಕ್ಷದ 331 ಗ್ರಾಂ ಚಿನ್ನ, 18 ಲಕ್ಷದ 26 ಕೆ.ಜಿ.ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ 23 ಲಕ್ಷ ಹಣ, 10 ಲಕ್ಷದ ಮೌಲ್ಯದ ಗೃಹೋಪಯೋಗಿ ವಸ್ತು ಸೇರಿದಂತೆ ಒಟ್ಟು 4 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡ ಲಾಗಿದೆ.

ಸರ್ಕಾರಿ ಕಾಲೇಜಿನ ಉಪನ್ಯಾಸಕನ ಮನೆಯ ಮೇಲೆ ದಾಳಿ
ಮಹದೇವಸ್ವಾಮಿ ಎಂ.ಎಸ್.- ಉಪನ್ಯಾಸಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನ ಗೂಡು, ಮೈಸೂರು: ಮಹದೇವಸ್ವಾಮಿ ಅವರಿಗೆ ಸಂಬಂಧಿಸಿದ 12 ಕಡೆಗಳಲ್ಲಿ ದಾಳಿ ಮಾಡಿ 6 ಕೋಟಿ ಮೌಲ್ಯದ ನಿವೇಶನ,ಮನೆ ಹಾಗೂ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳು ಪತ್ತೆಯಾಗಿವೆ.2.33 ಕೋಟಿ ಮೌಲ್ಯದ ಚಿನ್ನಾ ಭರಣ ಸೇರಿದಂತೆ ಒಟ್ಟು 8.41 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿವೆ.

ಕೆಆರ್ ಡಿಎಲ್ ಅಭಿಯಂತರರ ಮನೆಯ ಮೇಲೆ ದಾಳಿ
ತಿಮ್ಮರಾಜಪ್ಪ- ಕಾರ್ಯಪಾಲಕ ಅಭಿಯಂತರ, ಕೆಆರ್ ಐಡಿಎಲ್, ವಿಜಯಪುರ ಮೂಲತಃ ಕೆಜಿಎಫ್‌ ನಿವಾಸಿಯಾಗಿರುವ ತಿಮ್ಮರಾಜಪ್ಪ ಪ್ರಸ್ತುತ ಕೆಆರ್‌ಐಡಿಎಲ್‌ನಲ್ಲಿ ಕಾರ್ಯಪಾಲಕ ಅಭಿಯಂತರರು. ಇವರಿಗೆ ಸಂಬಂಧಿಸಿದ ಸುಮಾರು 9 ಕಡೆಗಳಲ್ಲಿ ದಾಳಿ ನಡೆಸಿದ್ದು, ಸುಮಾರು 8 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ 1 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 9 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಸಂಬಂಧ ಕೋಲಾ ರದ ಲೋಕಾಯುಕ್ತ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ತೋಟಗಾರಿಕೆ ಉಪನಿರ್ದೇಶಕ ಮನೆಯ ಮೇಲೆ ದಾಳಿ
ಮುನೇಗೌಡ- ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ರಾಮನಗರ: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಮುನೇಗೌಡ ಅವರಿಗೆ ಸಂಬಂಧಿ ಸಿದ ಆರು ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾ ರಿಗಳು 3.58 ಲಕ್ಷದ ನಿವೇಶನ, ಮನೆ ಪತ್ರಗಳು, 1.550 ಗ್ರಾಂ ಚಿನ್ನ, 6.5 ಬೆಳ್ಳಿ ಸೇರಿದಂತೆ 5 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಚಿನ್ನಾ ಭರಣ ಮತ್ತು ನಗದು ಪತ್ತೆ

ವಿಶ್ರಾಂತ ಕುಲಪತಿ ಮನೆಯ ಮೇಲೆ ದಾಳಿ
ಹೆ.ಡಿ.ನಾರಾಯಣ ಸ್ವಾಮಿ-ವಿಶ್ರಾಂತ ಉಪ ಕುಲಪತಿ, ಕರ್ನಾಟಕ ಪಶುಪಾಲನೆ, ಬೀದರ್: ನಾರಾಯಣ ಗೌಡ ಅವರಿಗೆ ಸಂಬಂಧಿಸಿದ ಎರಡು ಕಡೆಗಳಲ್ಲಿ ದಾಳಿ ನಡೆಸಿ 5.06 ಕೋಟಿ ಮೌಲ್ಯದ ಆಸ್ತಿ ಪತ್ರ, 1.84 ಕೋಟಿ ಮೌಲ್ಯದ 448 ಗ್ರಾಂ ಚಿನ್ನ, ಒಟ್ಟು 8.90 ಕೋಟಿ ಮೌಲ್ಯದ ಆಸ್ತಿ ಪತ್ರಗಳು ದೊರಕಿವೆ.

ಹೊರಗುತ್ತಿಗೆ ಅಧಿಕಾರಿಯ ಮನೆಯ ಮೇಲೂ ದಾಳಿ
ಸುನಿಲ್ ಕುಮಾರ್- ಅಕೌಂಟ್ ಅಸ್ಟಿಸೆಂಟ್ (ಹೊರಗುತ್ತಿಗೆ) ಕಂಟ್ರೋಲರ್ ಆಫ್ ಫೈನಾನ್ಸ್, ಪಶುಪಾಲನೆ ಇಲಾಖೆ: ಸುನಿಲ್​ ಕುಮಾರ್​ ಅವರಿಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ 50 ಲಕ್ಷ ಮೌಲ್ಯದ ಕ್ರಯಪತ್ರಗಳು ಸೇರಿದಂತೆ 1.25 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಅರಣ್ಯಾಧಿಕಾರಿಯ ಮನೆಯ ಮೇಲೆ ದಾಳಿ
ಬಿ.ಮಾರುತಿ- ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸ್, ಆನೆಗುಡಿ, ಗಂಗಾವತಿ, ಕೊಪ್ಪಳ: ಮಾರುತಿ ಅವರಿಗೆ ಸೇರಿದಎರಡು ಕಡೆಗಳಲ್ಲಿ ದಾಳಿ ನಡೆಸಿ 21.39 ಲಕ್ಷ ಮೌಲ್ಯದ ಆಸ್ತಿ ಪತ್ರ ವಶಕ್ಕೆ ಪಡೆಯಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಅಧಿಕಾರಿಯ ಮನೆಯ ಮೇಲೆ ದಾಳಿ
ಚಂದ್ರಶೇಖರ್ ಹಿರೇಮನಿ- ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಳ್ಳಾರಿ: ಚಂದ್ರಶೇಖರ್ ಅವರಿಗೆ ಸೇರಿದ ಐದು ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 10.72 ಲಕ್ಷದ ಮೌಲ್ಯ ಸ್ಥಿರಾಸ್ತಿ ಹಾಗೂ ಚರಾಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಿಟಿ ಮುನಿಸಿಪಲ್ ಆಯುಕ್ತರ ಮನೆಯ ಮೇಲೆ ದಾಳಿ
ಶರಣಪ್ಪ-ಆಯುಕ್ತ, ಸಿಟಿ ಮುನಿಸಿಪಾಲ್ ಕೌನ್ಸಿಲ್, ಯಾದಗರಿ: ಶರಣಪ್ಪ ಅವರಿಗೆ ಸಂಬಂಧಿಸಿದನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ 2.05 ಕೋಟಿ ಆಸ್ತಿ ಹಾಗೂ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಭುಲಿಂಗ ಕೆ.ಮಂಕರ್ ಎಂಬುವರಿಗೆ ಸಂಬಂಧಿಸಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 1.49 ಕೋಟಿ ಮೌಲ್ಯದ ಆಸ್ತಿಗಳು ಪತ್ತೆ ಹಚ್ಚಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.