ಬೆಂಗಳೂರು –
ಸಿಬಿಎಸ್ ಸಿ 10 ನೇ ಪರೀಕ್ಷೆ ರದ್ದು ಮಾಡಿ 12 ನೇ ತರಗತಿ ಪರೀಕ್ಷೆ ಗಳನ್ನು ಮುಂದೂಡಿಕೆ ಮಾಡಿ ಕೇಂದ್ರ ಸರ್ಕಾರ ತೀರ್ಮಾನವನ್ನು ತಗೆದುಕೊಂಡ ಬೆನ್ನಲ್ಲೇ ಇತ್ತ ರಾಜ್ಯದಲ್ಲಿ ಈ ಕುರಿತು ಇನ್ನೂ ನಾವು ಯಾವುದೇ ರೀತಿಯ ತೀರ್ಮಾನವನ್ನು ತಗೆದುಕೊಂ ಡಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚು ತ್ತಿರುವ ಕಾರಣದಿಂದ ಕೇಂದ್ರ ಸರ್ಕಾರ CBSE ಯ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಯನ್ನು ರದ್ದು ಮಾಡಿದೆ. ಇದರೊಂದಿಗೆ 12ನೇ ತರಗತಿ ವಿದ್ಯಾರ್ಥಿ ಗಳ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದ್ದು ನಾವು ಇನ್ನೂ ಯಾವುದೇ ರೀತಿಯ ತೀರ್ಮಾನವನ್ನು ತಗೆದುಕೊಂಡಿಲ್ಲ ಎಂದರು

ರಾಜ್ಯದ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಲ್ಲಿ ಇನ್ನೂ ಗೊಂದಲ ಉಂಟಾಗಿದ್ದು, ಸಚಿವ ಸುರೇಶ್ ಕುಮಾ ರ್ ಸ್ಪಷ್ಟನೆ ನೀಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಮ್ಮ ರಾಜ್ಯದ SSLC ಪರೀಕ್ಷೆಗಳು ಪ್ರಾರಂ ಭ ವಾಗಬೇಕಿರುವುದು 21.6.2021 ರಿಂದ ಆದ್ದರಿಂ ದ ನಮ್ಮ ರಾಜ್ಯದಲ್ಲಿ ಸಿಬಿಎಸ್‌ಇ ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ

ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾ ರ್ ಹೇಳಿದರು