ರಾಯಚೂರು –
ಸಧ್ಯಕ್ಕೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಹೇಳುವಷ್ಟು ಕಲ್ಲಿದ್ದ ಲಿನಲ್ಲಿ ಕೊರತೆಯಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ರಾಯಚೂರಿನಲ್ಲಿ ಮಾತನಾಡಿದ ಅವರು ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಬರುತ್ತಿದೆ.ಸರಬರಾಜಿನಲ್ಲಿ ಸ್ವಲ್ಪು ಹೆಚ್ಚು ಕಡಿಮೆಯಾಗಿರ ಬಹುದು ಆದರೆ ಯಾವುದೇ ವ್ಯತ್ಯಯವಾಗಿಲ್ಲ ಎಂದರು

ಆದ್ರೆ ಕಾಂಗ್ರೆಸ್ ಆರೋಪ ಮಾಡುವಷ್ಟು ಸಮಸ್ಯೆಯಾಗು ವುದಿಲ್ಲ ಎಂದರು ಇನ್ನೂ ದೇಶಕ್ಕೆ ಪ್ರತೀದಿನ ಗರಿಷ್ಟ 3.2 ಬಿಲಿಯನ್ ಯೂನಿಟ್ಸ್ ಡಿಮ್ಯಾಂಡ್ ಮೇಲೆ ವಿದ್ಯುತ್ ಉತ್ಪಾದನೆಯಾಗುತ್ತಿದೆ ಆದ್ರೆ ಈಗ ಡಿಮ್ಯಾಂಡ್ 3.4 -3.5 ಬಿಲಿಯನ್ ಯೂನಿಟ್ಸ್ ಗೆ ಹೋಗುತ್ತಿದೆ.ಡಿಮ್ಯಾಂಡ್ ಹೆಚ್ಚಾಗಿದೆ ಆದ್ರೆ ರಷ್ಯಾದಿಂದ ಬರುತ್ತಿದ್ದ ಗ್ಯಾಸ್ ಬಂದಾಗಿದೆ ಹೈಡ್ರೋ ಪವರ್ ತಾತ್ಕಾಲಿಕವಾಗಿ ಬಂದಾಗಿದೆ ಎಂದರು
ಇನ್ನೂ ಕಲ್ಲಿದ್ದಲ ಮೇಲೆ ಹೆಚ್ಚು ಅವಲಂಬನೆಯಾಗಿರುವು ದರಿಂದ ಅಂದಿನ ಕಲ್ಲಿದ್ದಲು ಅಂದಿಗೆ ಖಾಲಿಯಾಗುತ್ತಿದೆ ನಿಯಮ ಪ್ರಕಾರ ವಿದ್ಯುತ್ ಕೇಂದ್ರಗಳಲ್ಲಿ 17 ದಿನಕ್ಕಾಗು ವಷ್ಟು ಕಲ್ಲಿದ್ದಲು ಸಂಗ್ರಹ ಇರಬೇಕು.ಆದ್ರೆ ಈಗ 8-10 ದಿನಕ್ಕೆ ಆಗುವಷ್ಟು ಮಾತ್ರ ಸಂಗ್ರಹ ಇದೆ.ಇದರಿಂದ 8-10 ದಿನ ಬಳಿಕ ಸಂಪೂರ್ಣ ಖಾಲಿಯಾಗುವುದಿಲ್ಲ ಪುನಃ ಕಳುಹಿಸುತ್ತೆವೆ.ರಾಜ್ಯದಲ್ಲಿ ಅಂದಾಜು ಪ್ರತಿ ದಿನ 2 ಮಿಲಿ ಯನ್ ಟನ್ ಖರ್ಚಾಗುತ್ತಿದೆ ಅಷ್ಟನ್ನು ಗಣಿಗಳಿಂದ ಸರಬ ರಾಜು ಮಾಡುತ್ತೇವೆ ಎಂದರು.ಇನ್ನೂ ಕಾಂಗ್ರೆಸ್ 10 ವರ್ಷ ದಲ್ಲಿ ರಾಜ್ಯಕ್ಕೆ ಕೊಟ್ಟ ಕಲ್ಲಿದ್ದಲಿಗಿಂದ ಒಂದೂವರೆ ಪಟ್ಟು ಹೆಚ್ಚು ಕೊಟ್ಟಿದ್ದೇವೆ.ಸಿಂಗರೇಣಿ ಕೋಲ್ ಫೀಲ್ಡ್ ನಿಂದ ಬರುವ ಕಲ್ಲಿದ್ದಲನ್ನ ಪ್ರತೀದಿನ 7 ರಿಂದ 9-10 ಕ್ಕೆ ಏರಿಸಿ ದ್ದೇವೆ.ಮಹಾನದಿ ಕೋಲ್ ಫೀಲ್ಡ್ಸ್ ನಿಂದ ಹಾಗೂ ಡಬ್ಲ್ಯೂ ಸಿ ಎಲ್ ನಿಂದ ರೋಡ್ ಕಂ ರೇಲ್ ಮೂಲಕ ಆಫರ್ ಮಾಡಿದ್ದೇವೆ.ಇದರೊಂದಿಗೆ ಕರ್ನಾಟಕ ಸರ್ಕಾರ ಇದರಲ್ಲಿ ಕೆಲವೊಂದಿಷ್ಟನ್ನ ಲಿಫ್ಟ್ ಮಾಡಿಲ್ಲ ಅಗತ್ಯವಿದ್ದಲ್ಲಿ ಮಾತ್ರ ಲಿಫ್ಟ್ ಮಾಡಿಕೊಂಡಿದ್ದಾರೆ ಎಂದರು.

ಹಾಗೇ ಕರ್ನಾಟಕ ಸರ್ಕಾರಕ್ಕೆ ರೇಕ್ ಹೆಚ್ಚಿಸಿಕೊಳ್ಳಲು ಸಲಹೆ ಕೊಟ್ಟಿದ್ದೇನೆ ಅವರು ಅದನ್ನು ಮಾಡುತ್ತಿದ್ದಾರೆ ಮೂರ್ನಾಲ್ಕು ಕೋಲ್ ಬ್ಲಾಕ್ ಕೊಟ್ಟಿದ್ದೇವೆ ಜೊತೆಗೆ ಕಲ್ಲಿದ್ದಲು ಹಂಚಿಕೆಯನ್ನು ಜಾಸ್ತಿ ಮಾಡಿದ್ದೇವೆ ಎಂದು ಸಚಿವರು ಹೇಳಿದರು.ಇದರೊಂದಿಗೆ ಇನ್ನೂ ಬೇರೆ ಮೂಲ ಗಳಿಂದ ವಿದ್ಯುತ್ ಸಿಗುತ್ತಿರುವುದರಿಂದ ಕೋಲ್ ಬಳಕೆ ಬಂದ ಮ ಮಾಡಲಾಗಿದೆ ಎಂದು ರಾಜ್ಯದ ಇಂಧನ ಸಚಿವ ಸುನಿಲ್ ಕುಮಾರ್ ಈಗಾಗಲೇ ಹೇಳಿದ್ದಾರೆ.ಸದ್ಯಕ್ಕೆ ಕರ್ನಾ ಟಕಕ್ಕೆ ಯಾವುದೇ ರೀತಿ ಕಲ್ಲಿದ್ದಲು ಕೊರತೆಯಾಗಿಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿದರು.