ಬೆಂಗಳೂರು –
ಸೆಕ್ಸ್ ಸಿಡಿ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಹಸ್ತಾಂತರ ಮಾಡಿದ ಬೆನ್ನಲ್ಲೇ ತನಿಖೆ ಚುರುಕು ಕೊಂಡಿದೆ. ಈ ಒಂದು ಕೇಸ್ ನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ತನಿಖೆಗೆ ವಹಿಸಿದ ಬೆನ್ನಲ್ಲೇ ಈಗ ಮಹತ್ವದ ಸುಳಿವು ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಹೌದು ರಾಸಲೀಲೆ ಸಿಡಿ ಪ್ರಕರಣದ ತನಿಖೆ ಆರಂಭದಲ್ಲಿ ನಾಲ್ಕು ಖಾಸಗಿ ಚಾನೆಲ್ ಗಳ ವರದಿಗಾರರನ್ನು ತನಿಖಾಧಿಕಾರಿಗಳು ವಶಕ್ಕೆ ತಗೆದುಕೊಂಡಿದ್ದಾರೆ. ಸಿಡಿಯ ಮೂಲಕ್ಕೆ ಕೈಹಾಕಿದ್ದು ವಿಶೇಷ ತನಿಖಾ ತಂಡವು ಈ ಸಂಬಂಧ ನಾಲ್ಕು ಜನ ವರದಿಗಾರರನ್ನು ಹಾಗೇ ಮತ್ತೊಬ್ಬರನ್ನು ವಶಕ್ಕೆ ತಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಸರಕಾರದ ಆದೇಶದ ಮೇರೆಗೆ ಶುಕ್ರವಾರ ಏಳು ಮಂದಿ ಅಧಿಕಾರಿಗಳ ನೇತ್ರತ್ವದಲ್ಲಿ ವಿಶೇಷ ತನಿಖಾ ತಂಡದ ರಚನೆಯಾಗಿದ್ದು, ಕೂಡಲೇ ಕಾರ್ಯ ಪ್ರವೃತ್ತವಾಗಿರುವ ಟೀಮ್ ನಾಲ್ಕು ಖಾಸಗಿ ಚಾನಲ್ ಗಳ ವರದಿಗಾರರನ್ನು ವಶಕ್ಕೆ ತಗೆದುಕೊಂಡಿರುವ ಎಸ್ ಐಟಿ ಅಧಿಕಾರಿಗಳು ವಿಚಾರಣೆಯನ್ನು ಮಾಡ್ತಾ ಇದ್ದಾರೆ. ಪ್ರಮುಖ ಆರೋಪಿಗಳನ್ನು ವಶಕ್ಕೆ ತಗೆದುಕೊಂಡು ವಿಚಾರಣೆ ಮಾಡ್ತಾ ಇದ್ದಾರೆ. ಭವಿತ, ಲಕ್ಷ್ಮೀಪತಿ, ಆಕಾಶ, ಅಭಿಷೇಕ ಹೀಗೆ ನಾಲ್ಕು ಜನರನ್ನು ವಶಕ್ಕೆ ತಗೆದುಕೊಂಡಿರುವ ಅಧಿಕಾರಿಗಳು ಡ್ರೀಲ್ ಮಾಡ್ತಾ ಇದ್ದಾರೆ.ಇನ್ನೂ ನಾಪತ್ತೆಯಾಗಿರುವ ಎರಡು ಚಾನಲ್ ಗಳ ಇಬ್ಬರು ವರದಿಗಾರರನ್ನು ಎಸ್ ಐಟಿ ಟೀಮ್ ನವರು ಹುಡುಕತಾ ಇದ್ದಾರೆ. ಇದು ಒಂದೆಡೆಯಾದರೆ ಇನ್ನೂ ಇತ್ತ ಸಿಡಿ ಹರಿಬಿಟ್ಟು ಮೊದಲು ದೂರು ನೀಡಿ ನಂತರ ಉಲ್ಟಾ ಹೊಡೆದ ದಿನೇಶ್ ಕಲ್ಲಹಳ್ಳಿಗೆ ಈ ಸಿಡಿ ನೀಡಿದ ವ್ಯಕ್ತಿಯನ್ನು ಎಸ್‌ಐಟಿ ಪೊಲಿಸರು ಈಗಾಗಲೇ ವಶಕ್ಕೆ ತಗೆದು ಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಇಂದಲ್ಲ ನಾಳೆ ದಿನೇಶ್ ಕಲ್ಲಹಳ್ಳಿ ಅವರನ್ನು ವಿಚಾರಣೆಯ ಮಾಡಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ, ಎಸ್‌ಐಟಿ ತನಿಖೆ ಸುಲಭವಾಗಲಿ ಎಂಬ ಉದ್ದೇಶದಿಂದ ಹಾಗೂ ತಮ್ಮ ಹೆಸರಿಗೆ ಅಂಟಿರುವ ಕಳಂಕ ಅಳಿಸಿಕೊಳ್ಳುವ ಪ್ರಯತ್ನವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೋಮವಾರ ದೂರು ಸಲ್ಲಿಸುವ ಸಾಧ್ಯತೆ ಇದೆ. ಇನ್ನೂ ಈ ಪ್ರಕರಣದ ಹಿಂದೆ ಮಾಜಿ ಸಚಿವರ ಹೆಸರಿಗೆ ಮಸಿ ಬಳಿಯುವ ಹುನ್ನಾರವಿದ್ದು, ಇದರಲ್ಲಿ ಒಂಬತ್ತು ಜನರ ಕೈವಾಡವಿದೆ ಎಂದು ಬಾಲಚಂದ್ರ ಜಾರಕಿಹೊಳಿ ಆರೋಪಿಸಿದ್ದಾರೆ. ಈ ಪ್ರಕರಣ ಬೇಧಿಸಲು ರಚಿಸಲಾಗಿರುವ ಎಸ್‌ಐಟಿ ತಂಡವು ಹೆಚ್ಚುವರಿ ಆಯುಕ್ತ ಸೌಮೇಂದು ಮುಖರ್ಜಿ (ಮುಖ್ಯಸ್ಥ), ಸಂದೀಪ್ ಪಾಟೀಲ್, ರವಿಕುಮಾರ್, ಅನುಚೇತ್, ಧರ್ಮೇಂದ್ರ, ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಮಾರುತಿ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು.ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣದ ಮೂಲಕ್ಕೆ ಕೈಹಾಕಿರುವ ವಿಶೇಷ ತನಿಖಾ ತಂಡವು ಈ ಸಂಬಂಧ ನಾಲ್ಕು ಜನ ವರದಿಗಾರರು ಹಾಗೇ ಇನ್ನೊರ್ವನನ್ನು ವಶಕ್ಕೆ ತಗೆದುಕೊಂಡು ವಿಚಾರಣೆಗೆ ಗುರಿಪಡಿಸಿದೆ. ಒಟ್ಟಾರೆ ಸರಕಾರದ ಆದೇಶದ ಮೇರೆಗೆ ಶುಕ್ರವಾರ ಏಳು ಮಂದಿ ಅಧಿಕಾರಿಗಳ ವಿಶೇಷ ತನಿಖಾ ತಂಡದ ರಚನೆಯಾಗಿದ್ದು ಕಾರ್ಯ ಪ್ರವತ್ತರಾಗಿರುವ ಅಧಿಕಾರಿಗಳ ಟೀಮ್ ಮೊದಲು ಸಿಡಿ ಹರಿಬಿಟ್ಟು ಮೊದಲು ದೂರು ನೀಡಿ ನಂತರ ಉಲ್ಟಾ ಹೊಡೆದ ದಿನೇಶ್ ಕಲ್ಲಹಳ್ಳಿಗೆ ಈ ಸಿಡಿ ನೀಡಿದ ವ್ಯಕ್ತಿಯನ್ನು ಎಸ್‌ಐಟಿ ಪೊಲಿಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗುತ್ತಿದ್ದು ಏನೇ ಆಗಲಿ ಈವರೆಗೆ ಸೆಕ್ಸ್ ಸಿಡಿ ವಿಚಾರ ಕುರಿತಂತೆ ಸಿಡಿಯಲ್ಲಿನ ಯುವತಿಯ ಗುರುತು ಮಾಹಿತಿ ಸಿಗದಿದ್ದರೂ ಈ ಒಂದು ಪ್ರಕರಣದಲ್ಲಿ ಈಗಾಗಲೇ ವಿಶೇಷ ತನಿಖಾ ತಂಡವು ಐದು ಜನರನ್ನು ವಶಕ್ಕೆ ತಗೆದುಕೊಂಡಿದ್ದು ಡ್ರೀಲ್ ಮಾಡುತ್ತಾ ಇದ್ದಾರೆ.