ಬೆಂಗಳೂರು –
ಸಿಡಿ ವಿಚಾರದಲ್ಲಿ ಯುವತಿ ದೂರು ಕೊಡುತ್ತಿದ್ದಂತೆ ಇತ್ತ ರಮೇಶ್ ಜಾರಕಿಹೊಳಿ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಂತಹ ಸರ್ಕಾರವನ್ನೇ ತೆಗೆದಿದ್ದೇನೆ. ಇದ್ಯಾವ ಲೆಕ್ಕ. ಇನ್ನೂ ಇಂತಹ 10 ಸಿಡಿಗಳು ಬಂದರೂ ಅದನ್ನು ಎದುರಿ ಸಲು ಸಿದ್ಧವಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಿಡಿ ಯುವತಿ ಪೊಲೀಸರಿಗೆ ದೂರು ನೀಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಡಿ ಯುವತಿ ಸಂತ್ರಸ್ಥೆ ಎನ್ನುವುದೇ ಆಗಿದ್ದರೆ ಆಕೆ ಏಕೆ ಈ ಮೊದಲೇ ದೂರು ನೀಡಲಿಲ್ಲ. ಈಗ ದೂರು ನೀಡಿರುವುದರ ಹಿಂದೆ ಮಹಾ ಷಡ್ಯಂತ್ರವೇ ಅಡ ಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು ಯುವತಿ ವಕೀಲರ ಮೂಲಕ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಅವರು, ನಾನು ಎಲ್ಲದಲ್ಲೂ ಸಿದ್ಧವಾಗಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ ಎಂದರು

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗಿಂತ ಮುಂಚೆ ನಾನು ದೂರು ನೀಡಿದ್ದೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಮೊದಲು ತನಿಖೆ ನಡೆಸಲಿ ಎಂದು ಒತ್ತಾಯಿಸಿದರು

ಈ ಸಂಬಂಧ ನಾನು ಸಹ ವಕೀಲರನ್ನು ಭೇಟಿಯಾ ಗುತ್ತಿದ್ದು, ಇಂತಹ ಹತ್ತು ವಿಡಿಯೋ ಬೇಕಾದರೂ ಬಿಡಲಿ. ಇದರಲ್ಲಿ ಹೆದರುವ ಪ್ರಶ್ನೆಯೇ ಇಲ್ಲವೇ ಇಲ್ಲ ನಾಳೆಯಿಂದ ನಮ್ಮ ಆಟ ಶುರುವಾಗುತ್ತೆ ಎಂದು ಮಾಜಿ ಸಚಿವ ಹೇಳಿದರು