ಚಾಮರಾಜನಗರ –
ಸಾಮಾನ್ಯವಾಗಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಕೈಯಲ್ಲೊಂದು ಆಧಾರ್ ಕಾರ್ಡ್ ಹಿಡಿದುಕೊಂಡು ಬಂದು ಲಸಿಕಾ ಕೇಂದ್ರಕ್ಕೆ ಬರೊದನ್ನ ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಂದು ಕೇಂದ್ರಕ್ಕೆ ವ್ಯಕ್ತಿ ಯೊಬ್ಬ ಮಚ್ಚು ಹಿಡಿದುಕೊಂಡು ಬಂದಿದ್ದಾನೆ.

ಹೌದು ಇಂತಹದೊಂದು ಘಟನೆ ಚಾಮರಾಜನಗರ ದಲ್ಲಿ ಕಂಡು ಬಂದಿದೆ. ಜಿಲ್ಲೆಯ ಗುಂಡ್ಲುಪೇಟೆ ಬರಗಿ ಕಾಲೋನಿಯಲ್ಲಿ ಇದು ಕಂಡು ಬಂದಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಅಂಗವಿಕಲರಿಗೆ ಆರೋಗ್ಯ ಇಲಾಖೆ ವ್ಯಾಕ್ಸಿನ್ ಹಾಕಲು ಮುಂದಾಗಿ ದೆ.

ಲಸಿಕೆ ಹಾಕಲು ಮುಂದಾದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಂಗವಿಕಲನೊಬ್ಬ ಮಚ್ಚು ತೋರಿಸಿ ಹೆದರಿಸಿದ್ದಾನೆ.ಮನಿಯಪ್ಪ ಎಂಬ ಅಂಗವಿಕಲ ಮಚ್ಚು ಹಿಡಿದು ಗಲಾಟೆ ಮಾಡಿದ್ದಾನೆ.ನಂತರ ಸ್ಥಳದಲ್ಲಿದ್ದ ಅಂಗವಿಕಲನ ಅಜ್ಜಿ ಬಂದು ಮಚ್ಚು ಕಿತ್ತು ಬೀಸಾಡಿದ್ದಾಳೆ.

ಈ ಒಂದು ದೃಶ್ಯ ಮೊಬೈಲ್ ನಲ್ಲಿ ಸ್ಥಳದಲ್ಲಿ ಇದ್ದವ ರು ಚಿತ್ರಿಕರಣ ಮಾಡಿದ್ದು ಸೆರೆಯಾಗಿದ್ದು ಸಾಮಾಜಿ ಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.ಬರಗಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೋಹನ್ ಸಮ್ಮು ಖದಲ್ಲೇ ಮಚ್ಚು ಹಿಡಿದು ಬಂದಿದ್ದಾನೆ ಅಂಗವಿಕಲ.

ವರದಿ ಅನ್ನಪೂರ್ಣೇಶ್ವರಿ ರಾಚಯ್ಯನವರ ಸುದ್ದಿ ಸಂತೆ ನ್ಯೂಸ್ ಡೆಸ್ಕ್ ಧಾರವಾಡ.