ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಬೆಂಗಳೂರು ಚಲೋ ಹಿನ್ನಲೆಯಲ್ಲಿ ವೆಬ್ ನಾರ್ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಳೆದ ಒಂದು ತಿಂಗಳಿನಿಂದ ಈ ಒಂದು ಆಂದೋಲನ ರಾಜ್ಯಾದ್ಯಂತ ಜೋರಾಗು ತ್ತಿದ್ದು ಬೆಂಗಳೂರು ಚಲೋ ಗೆ ರಾಜ್ಯದ ಗ್ರಾಮೀಣ ಶಿಕ್ಷಕರ ಸಂಘದ ಧ್ವನಿಯಾಗಿ ರಾಜ್ಯಾಧ್ಯಕ್ಷರಾದ ಅಶೋಕ್ M ಸಜ್ಜನ್ ಪಾಲ್ಗೊಂಡು ಬೆಂಬಲ ನೀಡಿದರು
ಇವರ ಮಾರ್ಗದರ್ಶನ ನಡೆದ ಈ ಒಂದು ಸಭೆ ಯಲ್ಲಿ ಸಮಗ್ರವಾಗಿ ಚರ್ಚೆ ಮಾಡಲಾಯಿತು ಹಾಗೇ ಸಲಹೆ ಸೂಚನೆಗಳನ್ನು ನೀಡಲಾಯಿತು.ಸಮಸ್ತ ವರ್ಗಾವಣೆ ಆಪೇಕ್ಷಿತರಿಗೆ ಬೆಂಬಲ ನೀಡಲಾಯಿತು ಅವರ ನಿಲುವನ್ನು ನಿರೀಕ್ಷಿಸಲು ರಾಜ್ಯದ ಸಮಸ್ತ ಗ್ರಾಮೀಣ ಸಂಘಟನೆಯ ತಾಲೂಕು,ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಗ್ರಾಮೀಣ ಶಿಕ್ಷಕರು,ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಪೇಕ್ಷಿತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ವರ್ಗಾವಣೆ ಪ್ರಕ್ರಿಯೆಯ ವೆಬಿನರ್ ಸಭೆಗೆ 1000 ಶಿಕ್ಷಕರ ಗಡಿಯಂಚಿನಲ್ಲಿ ಸೇರಿ ಬೆಂಗಳೂರು ಚಲೋ ಗೆ ತಮ್ಮೆಲ್ಲರ ಅಭೂತ ಪೂರ್ವ ಬೆಂಬಲ ನೀಡಲು ಎಲ್ಲರೂ ತೀರ್ಮಾನವನ್ನು ತಗೆದುಕೊಂಡರು. ಬೆಂಗಳೂರು ಚಲೋ ಗೆ ದೈಹಿಕವಾಗಿ ಭಾಗವಹಿ ಸುತ್ತೆವೆಂದು ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘಕ್ಕೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ಗೆ ಬೆಂಬಲ ನೀಡಲಾಯಿತು ವರ್ಗಾವಣೆ ಗಾಗಿ ಬೆಂಗಳೂರು ಚಲೋ ಕಾರ್ಯಕ್ರಮದ ಸಿದ್ಧತೆ ಗಾಗಿ 42ನೇ ವೆಬಿನರ್ ಸಭೆಯನ್ನು ಆಯೋಜಿಸಲು ಶಿವಕುಮಾರ್ ಕಟ್ಟಿಮನಿ,ರಘುನಂದನ್ ಪವಾಡೆಪ್ಪ ಕಾಂಬ್ಳೆ, ಶರಣಬಸವ ಬನ್ನಿಗೋಳ್,ಆರ್. ನಾರಾ ಯಣ ಸ್ವಾಮಿ ಚಿಂತಾಮಣಿ,ಲಕ್ಕಮ್ಮನವರ, ರವರು ಯಶಸ್ವಿಯಾಗಿ ಸಂಘಟಿಸಿದ್ದರು.ಕರ್ನಾಟಕದ ಮೂಲೆ ಮೂಲೆಗಳಿಂದ ಬಿಡುವುಮಾಡಿಕೊಂಡು ಸಭೆಗೆ ಶಿಕ್ಷಕರು ಸೇರಿದ್ದು ಕಂಡು ಬಂದಿತು.