ಆಸ್ಸಾಂ –
ಸದಾ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಕುಟುಂಬದವರೊಂದಿಗೆ ಸಮಯವನ್ನು ಕಳೆ ಯುವ ನಿಟ್ಟಿನಲ್ಲಿ ಸರ್ಕಾರಿ ನೌಕರರಿಗೆ ಮತ್ತು ಜನಪ್ರತಿನಿಧಿಗಳಿಗೆ ಆಸ್ಸಾಂ ಸರ್ಕಾರ ರಜೆಯನ್ನು ಘೋಷಣೆ ಮಾಡಿದೆ.ಹೌದು ಕುಟುಂಬದೊಂದಿಗೆ ಕಾಲ ಕಳೆಯುವ ಉದ್ದೇಶದಿಂದಾಗಿ ನೌಕರರು, ಶಾಸಕರಿಗೆ ರಜೆ ಘೋಷಿಸಲಾಗಿದೆ.
ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಅಸ್ಸಾಂ ಸರ್ಕಾರ ನೌಕರರು ಶಾಸಕರು ಹಾಗೂ ಸಚಿವರುಗಳಿಗೆ ಎರಡು ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.ಮಾತೃ – ಪಿತೃ ವಂದನಾ ಯೋಜನೆ ಅಡಿಯಲ್ಲಿ ಈ ಒಂದು ರಜೆಯನ್ನು ಘೋಷಿಸಲಾಗಿದೆ. ಫೆಬ್ರವರಿ 9 ಹಾಗೂ 10 ರಂದು ರಜೆ ಇರಲಿದೆ.ಜೊತೆಗೆ ಫೆಬ್ರವರಿ 11 ಎರಡನೇ ಶನಿವಾರವಾಗಿದ್ದು ಫೆಬ್ರವರಿ 12 ಭಾನುವಾರವಾಗಿರುವುದರಿಂದ ಒಟ್ಟು ನಾಲ್ಕು ದಿನಗಳ ಕಾಲ ರಜೆ ಸಿಕ್ಕಂತಾಗಲಿದೆ.
ಸುದ್ದಿ ಸಂತೆ ನ್ಯೂಸ್ ಆಸ್ಸಾಂ…..