ಡಯಟ್ ಮೇಲೆ ದಾಳಿ ಮೂವರು ನೌಕರರಿಗೆ ತಲ್ವಾರ್ ಏಟು ಆತಂಕ ಮೂಡಿಸಿದ ಆಗಂತುಕನ ದಾಳಿ

Suddi Sante Desk

ಮಂಗಳೂರು –

ಶಿಕ್ಷಣ ಇಲಾಖೆಯ ಮೂವರು ಮಹಿಳಾ ನೌಕರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ – ಶಿಕ್ಷಕಿ ಯೊಬ್ಬ ರಿಗೆ ಗಿಪ್ಟ್ ಕೊಡುವ ನೆಪದಲ್ಲಿ ಎಂಟ್ರಿ ಕೊಟ್ಟು ಅಟ್ಯಾಕ್ ಮಾಡಿದ್ದಾನೆ.ಹೌದು ಇಂಥಹದೊಂದು ಘಟನೆ ಮಂಗಳೂರಿನ ಡಯಟ್ ನಲ್ಲಿ ನಡೆದಿದೆ. ನಗರದ ಜೈಲು ರಸ್ತೆಯಲ್ಲಿರುವ ಡಯಟ್ ಶಿಕ್ಷಣ ಸಂಸ್ಥೆಗೆ ಯುವಕನೊಬ್ಬ ಎಂಟ್ರಿ ಕೊಟ್ಟು ಶಿಕ್ಷಕಿ ಯೊಬ್ಬರನ್ನು ವಿಚಾರಣೆ ಮಾಡಿದ್ದಾರೆ.ಅವರು ಇಲ್ಲಿ ಇಲ್ಲ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.ಇದನ್ನು ಕೇಳಿದ ಆ ಯುವಕ ಡಯಟ್ ಒಳಗೆ ಪ್ರವೇಶ ಮಾಡಿದ್ದಾನೆ.ನೋಡತೇನಿ ಅವರಿಗೆ ನಾನು ಗಿಪ್ಟ್ ಕೊಡಬೇಕು ಎಂದಿದ್ದಾರೆ.ಶಿಕ್ಷಣ ಸಂಸ್ಥೆಯೊಳಗೆ ಬಂದ ಆಗಂತುಕ ನೋರ್ವನು ಏಕಾಎಕಿಯಾಗಿ ಅಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗೆ ತಲ್ವಾರ್ ನಿಂದ ದಾಳಿ ಮಾಡಿದ್ದಾರೆ.

30-35 ವಯಸ್ಸಿನ ಈ ಒಂದು ಯುವಕ ಏಕಾಎಕಿ ಯಾಗಿ ಪ್ರವೇಶ ಮಾಡಿ ಒಳಗಡೆ ಬಂದು ಮತ್ತೆ ಯಾರೋ ಒಂದು ಹೆಸರನ್ನು ಹೇಳಿ ಈ ಹೆಸರಿನ ಶಿಕ್ಷಕಿ ಯವರು ಇಲ್ಲಿ ಇದ್ದಾರೆ ಎಂದು ವಿಚಾರಣೆ ಮಾಡಿದ್ದಾನೆ.ನಾನು ಕೂಡಾ ಅವರ ಕೈಯಲ್ಲಿ ಕಲಿತ ವನು ಎಂದಿದ್ದಾನೆ.ಇದೇಲ್ಲವನ್ನು ಕೇಳಿ ಡಯಟ್ ನಲ್ಲಿರುವ ಮಹಿಳಾ ಸಿಬ್ಬಂದಿಗಳು ಯುವಕನಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿಲ್ಲ ಇದರಿಂದ ಕೋಪಗೊಂಡ ಯುವಕ ಏಕಾಎಕಿಯಾಗಿ ತಲ್ವಾರ್ ನಿಂದ ಸಿಕ್ಕ ಸಿಕ್ಕವರ ಮೇಲೆ ದಾಳಿಯನ್ನು ಮಾಡಿದ್ದು ಮೂವರು ಮಹಿಳಾ ನೌಕರರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು ಇನ್ನೂ ಸಧ್ಯ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇನ್ನೂ ಇತ್ತ ತೀವ್ರವಾಗಿ ಗಾಯಗೊಂಡಿರುವ ಮೂವರು ಮಹಿಳಾ ನೌಕರರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಡಯಟ್‌ ಒಳಗೆ ಬಂದಿದ್ದ ವ್ಯಕ್ತಿಯೋರ್ವ ಶಿಕ್ಷಕಿಯೊಬ್ಬರ ಹೆಸರು ಕೇಳಿದ್ದಾನೆ.ಆದರೆ ಯಾರೂ ಅನ್ನೋದು ಅಲ್ಲಿದ್ದ ಸಿಬ್ಬಂದಿಗೆ ಗೊತ್ತೇ ಆಗಲಿಲ್ಲ. ಆ ಬಳಿಕ ಅವರಿಗೆ ಒಂದು ಗಿಫ್ಟ್‌ ನೀಡಬೇಕು ಎಂದು ಹೇಳಿ ತನ್ನ ಬಳಿಯಲ್ಲಿದ್ದ ಮಚ್ಚನ್ನು ಸಿಬ್ಬಂದಿಗಳ ಮೇಲೆ ಬೀಸಿದ್ದಾನೆ.ಘಟನೆಯಲ್ಲಿ ಸಿಬ್ಬಂದಿಗಳಾದ ನಿರ್ಮಲಾ,ರೀನಾ ರಾಯ್‌ ಹಾಗೂ ಗುಣವತಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಮೂವರು ಕೂಡ ಡಯಟ್‌ನಲ್ಲಿ ಎಫ್‌ಡಿಎ, ಸ್ಟೆನ್ನೋಗ್ರಾಫರ್‌ ಮತ್ತು ಡಿ ಗ್ರೂಪ್‌ ನೌಕರರಾಗಿ ದ್ದಾರೆ.

ಘಟನೆಯ ಬೆನ್ನಲ್ಲೇ ಸಮೀಪದಲ್ಲಿದ್ದ ಜೈಲು ಸಿಬ್ಬಂದಿಗಳು ಅಪರಿಚಿತ ವ್ಯಕ್ತಿಯನ್ನು ಸೆರೆ ಹಿಡಿದಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಆತ ಯಾರೂ,ಯಾವ ಉದ್ದೇಶಕ್ಕಾಗಿ ಹೀಗೆ ಮಾಡಿದ್ದೇನೆ ಅನ್ನೋ ಬಗ್ಗೆ ಬಾಯ್ಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌ ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಗಾಯಗೊಂಡಿರುವ ಮಹಿಳಾ ಸಿಬ್ಬಂದಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೂವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.