ಚಿತ್ರದುರ್ಗ –
ಖಾಸಗಿ ವೈದ್ಯನ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಯಿಂದ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ. ಹೌದು ನಗರದಲ್ಲಿ ಮಹಿಳೆಯೊಬ್ಬರು ಖಾಸಗಿ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.

ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಒಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಜಿಲ್ಲೆಯ ಹಿರಿಯೂರು ನಗರದ ಬೆಂಗಳೂರು ರಸ್ತೆಯಲ್ಲಿರುವ ಕೋಡಿಹಳ್ಳಿ ರಂಗನಾಥಪುರ, ಪಿಟ್ಲಾಲಿ ಬಸ್ ನಿಲ್ದಾಣ ಪಕ್ಕದಲ್ಲಿ ನಡೆಸಿದೆ.

ಸಧ್ಯ ಈಗ ಬೆಳಕಿಗೆ ಬಂದಿದೆ. ಮಹಿಳೆ ಖಾಸಗಿ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಇದೀಗ ವೀಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿಲ್ಲ.

ಹಲ್ಲೆಗೊಳಗಾದ ಡಾ.ಗಜಾನನ ಖಾಸಗಿ ವೈದ್ಯ ಎಂದು ಗುರುತಿಸಲಾಗಿದೆ. ಈತನು ನಗರದ ಬೆಂಗಳೂರು ರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಖಾಸಗಿ ಕ್ಲಿನಿಕ್ ಇಟ್ಟುಕೊಂಡು ಕೆಲಸ ನಿರ್ವಹಿಸುತಿ ದ್ದನು.ಹಲ್ಲೆ ಮಾಡಿರುವ ಮಹಿಳೆಯ ಹೆಸರು ಸಹ ತಿಳಿದು ಬಂದಿಲ್ಲ. ಆದರೆ ನೀನು ನಿನ್ನ ಹೆಂಡ್ತಿ ಮಕ್ಕ ಳು ಮಾತ್ರ ಚೆನ್ನಾಗಿರಬೇಕು, ನಾವೇನು ಬೀದಿ ಬೀಕರಿಗಳಾ ನನ್ನ ಜೀವನ ನಾನು ಚೆನ್ನಾಗಿ ಇಟ್ಕೊಂ ಡ್ರೆ ನಿನ್ನ ಹೆಂಡ್ತಿ ನನ್ ಬಗ್ಗೆ ಕಂಪ್ಲೀಟ್ ಕೊಡ್ತಾಳಾ ಎನ್ನುವ ಮಹಿಳೆಯ ಮಾತುಗಳು ವೀಡಿಯೋದಲ್ಲಿ ಕೇಳಿಸಿಕೊಳ್ಳಬಹುದು.
ಡಾ. ಗಾಜಾನನ ತಪ್ಪಾಯ್ತು ಎಂದು ಬೇಡಿಕೊಂಡರು ಮಹಿಳೆ ಬಿಟ್ಟಿಲ್ಲ, ಪುರುಷರಿಬ್ಬರು ಸಹ ಆತನ ಮೇಲೆ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದ್ದು ವೀಡಿಯೋದಲ್ಲಿ ಕಾಣಬಹುದಾಗಿದೆ. ಖಾಸಗಿ ವೈದ್ಯನು ಮಾನ, ಮರ್ಯಾದೆಗೆ ಅಂಜಿ ಕ್ಲಿನಿಕ್ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.