ತುಮಕೂರು –
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು ತಿಪಟೂರು ನಗರದಲ್ಲಿರುವ ಶಿಕ್ಷಣ ಸಚಿವ ನಾಗೇಶ್ರ ಮನೆಗೆ NSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಹಲವರು ಮುತ್ತಿಗೆ ಹಾಕಲು ಯತ್ನಿಸಿದ್ದರು.ಈ ಕುರಿತು ತುರ್ತುಗೋಷ್ಠಿ ನಡೆಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್ ಕೆಲ ಕಾರ್ಯಕರ್ತರು ನಾಗೇಶ್ರ ಮನೆಗೆ ನುಗ್ಗಿ ದ್ದಾರೆ.ಅಷ್ಟೇ ಅಲ್ಲ ನನಗೆ ಬಂದ ಮಾಹಿತಿ ಪ್ರಕಾರ ಅವರು ನಾಗೇಶ್ ಮನೆಗೆ ಬೆಂಕಿ ಹಾಕಲು ಕೂಡಾ ಮುಂದಾಗಿದ್ದರು ಎಂದರು
ಈಗಾಗಲೇ 15 ಜನರರು ಮತ್ತು 2 ವಾಹನವನ್ನು ಪೊಲೀ ಸರು ವಶಕ್ಕೆ ಪಡೆದಿದ್ದಾರೆ.ಈ ರೀತಿಯ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲ್ಲ.ಬೆಂಗಳೂರಿಂದ ಐವರು ದಾವಣಗೆರೆ ಯಿಂದ ಮೂವರು,ಹಾಸನದಿಂದ ಒಬ್ಬರು, ತುಮಕೂರಿ ನಿಂದ ಒಬ್ಬರು ಎಸ್ ಎಸ್ ಯುವ ಮುಖಂಡರು ಪ್ರೀ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ.ಅವರಿಗೆಲ್ಲ ಈಗ ಪೊಲೀಸರು ಕಾನೂನಿನ ಪಾಠ ಮಾಡ್ತಾರೆ.ಇದು ಕಾಂಗ್ರೆಸ್ ಮುಖಂಡರ ಕೈವಾಡ.ದಾವಣಗೆರೆಯ ಎನ್ ಎಸ್ ಯು ಉಪಾಧ್ಯಕ್ಷ ಫೈಲ್ವಾನ್ ಅಲಿ ರೆಹಮಾನ್ ಎಂಬಾತ ಬಂದಿ ದ್ದಾನೆ.ಮೊದಲೇ ಸಂಚು ರೂಪಿಸಿಕೊಂಡು ಬಂದಿದ್ದಾರೆ. ಯಾರೆಲ್ಲಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಹೇಳಿದರು.