ಆಗಸ್ಟ್ ತಿಂಗಳ ಬ್ಯಾಂಕ್ ರಜೆಯ ಕಂಪ್ಲೀಟ್ ಮಾಹಿತಿ…..

Suddi Sante Desk

ಬೆಂಗಳೂರು –

ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಆಗಸ್ಟ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಆಗಸ್ಟ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ,ಲಾಕ್ ಡೌನ್ ಮುಗಿದಿದ್ದು, ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ.ಆದರೆ,ಬ್ಯಾಂಕ್ ಗಳು ಎಂದಿ ನಂತೆ ಕಾರ್ಯ ನಿರ್ವಹಿಸಲಿವೆ.ಜುಲೈ ತಿಂಗಳಲ್ಲಿ 15 ರಜೆಗಳು ದೇಶದ 9 ವಿವಿಧ ರಾಜ್ಯಗಳಿಗೆ ಸೀಮಿತ ವಾಗಿತ್ತು.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟ ಕದಲ್ಲಿ ಮಾತ್ರ ಜುಲೈ ತಿಂಗಳಂತೆ ಆಗಸ್ಟ್ ತಿಂಗಳ ಲ್ಲೂ ಕಡಿಮೆ ರಜೆ ದಿನಗಳು ಸಿಗುತ್ತವೆ.

ದಿನವಿರಲಿದೆ.ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿ ಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಆಗಸ್ಟ್ 2021ರಲ್ಲಿ ಬ್ಯಾಂಕ್ ರಜಾ ದಿನ ವಿವರ

ಆಗಸ್ಟ್ 13, 2021 ಶುಕ್ರವಾರ Patriot’s Day ದೇಶದ ವಿವಿಧೆಡೆ
ಆಗಸ್ಟ್ 16 ಸೋಮವಾರ ಪಾರ್ಸೆ ಹೊಸ ದಿನ ದೇಶದ ವಿವಿಧೆಡೆ
ಆಗಸ್ಟ್ 20 ಶುಕ್ರವಾರ ಮೊಹರಂ/ಮೊದಲ ಓಣಂ ಕರ್ನಾಟಕ, ಕೇರಳ ಹಾಗೂ ಹಲವು ರಾಜ್ಯಗಳು
ಆಗಸ್ಟ್ 21 ಶನಿವಾರ ತಿರು ಓಣಂ ಕೇರಳ
ಆಗಸ್ಟ್ 23 ಸೋಮವಾರ ಶ್ರೀನಾರಾಯಣ ಗುರು ಜಯಂತಿ ಕೇರಳ
ಆಗಸ್ಟ್ 30 ಸೋಮವಾರ ಕೃಷ್ಣ ಜಯಂತಿ ಭಾರತದ ಕೆಲವೆಡೆ
ಆಗಸ್ಟ್ 31 ಮಂಗಳವಾರ ಕೃಷ್ಣ ಜನ್ಮಾಷ್ಟಮಿ ಭಾರತದ ಕೆಲವೆಡೆ
ಮೇಲ್ಕಂಡ ದಿನಾಂಕಗಳಲ್ಲದೆ, ಆಗಸ್ಟ್ 1 (ಭಾನುವಾರ), ಆಗಸ್ಟ್ 14 (2ನೇ ಶನಿವಾರ), ಆಗಸ್ಟ್ 8 (ಭಾನುವಾರ), ಆಗಸ್ಟ್ 15 (ಭಾನುವಾರ), ಆಗಸ್ಟ್ 22 (ಭಾನುವಾರ), ಆಗಸ್ಟ್ 28 (4ನೇ ಶನಿವಾರ), ಆಗಸ್ಟ್ 29 (ಭಾನುವಾರ) ರಂದು ರಜೆ ಇರಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.