ಬೆಂಗಳೂರು –
ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ ಸಮಿತಿಗೆ ಈಗಾಗಲೇ ರಾಜ್ಯ ಸರ್ಕಾರ ಸಿಬ್ಬಂದಿ ಅಧಿಕಾರಿಗಳು ಕಚೇರಿ ಸೇರಿದಂತೆ ಕಾರ್ಯ ಚಟುವಟಿಕೆಗಳಿಗಾಗಿ ಬೇಕಾದ ಎಲ್ಲಾ ವ್ಯವಸ್ಥೆ ಯನ್ನು ಮಾಡಿ ಆದೇಶವನ್ನು ಮಾಡಿದೆ.
ಅಲ್ಲದೇ ಸಮಿತಿಗೆ ವರದಿ ನೀಡಲು ಕಾಲ ಮೀತಿಯನ್ನು ಕೂಡಾ ನೀಡಿದ್ದು ಇದೇಲ್ಲದರ ನಡುವೆ ಈಗಾಗಲೇ ಈ ಒಂದು ಸಮಿತಿಯೂ ಕೂಡಾ ವರದಿ ಸಿದ್ದ ಮಾಡುವ ನಿಟ್ಟಿನಲ್ಲಿ ಕೆಲ ವೊಂದಿಷ್ಟು ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದೆ.ಇನ್ನೂ ಸಧ್ಯ ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ,ಸಾಮೂಹಿಕ ವಿಧಾನಸಭಾ ಚುನಾವಣೆಗಳು ತಾಲ್ಲೂಕು ಜಿಲ್ಲಾ ಪಂಚಾಯತ ಸೇರಿದಂತೆ ಸಾಲು ಸಾಲು ಚುನಾ ವಣೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಸಮಿತಿ ವರದಿ ಸಿದ್ದತೆ ಕುರಿತಂತೆ ಬಿಡುವಿಲ್ಲದೇ ಕಾರ್ಯ ವನ್ನು ಕೈಗೆತ್ತಿಕೊಂಡಿದೆ.
ಹೀಗಾಗಿ ಕಾಲಮಿತಿಯಲ್ಲೇ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಇದಕ್ಕೆ ರಾಜ್ಯ ಸರ್ಕಾರವು ಕೂಡಾ ಸ್ಪಂದನೆ ನೀಡಿ ಮಧ್ಯಂತರ ವರದಿಯನ್ನು ತಗೆದುಕೊಂಡು ಜಾರಿಗೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಇದ್ದಾರೆ.ಇತ್ತ ರಾಜ್ಯ ಸರ್ಕಾರವು ಕೂಡಾ ಮುಂದಿನ ಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡು ರಾಜ್ಯದ ಸರ್ಕಾರಿ ನೌಕರರಿಗೆ ಈ ಮೂಲಕ ತನ್ನದೇಯಾದ ಗಿಪ್ಟ್ ನೀಡಲು ಮುಂದಾಗಿದೆ
ಇದರ ನಡುವೆ ಮುಂದಿನ ತಿಂಗಳಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಂತರ ಬಜೆಟ್ ನ್ನು ಘೋಷಣೆ ಮಾಡಲಿದ್ದು ಇವರು ಕೂಡಾ ಮುಂದಿನ ಚುನಾವಣೆಯನ್ನು ಮುಂದಿ ಟ್ಟುಕೊಂಡು ಈ ಒಂದು ಬಜೆಟ್ ನ್ನು ಘೋಷಣೆ ಮಾಡುತ್ತಿದ್ದು ಹೀಗಾಗಿ ಒಂದು ಕಡೆ 7ನೇ ವೇತನ ಆಯೋಗದ ವರದಿ ಮತ್ತೊಂದು ಕಡೆಗೆ ಬಜೆಟ್ ಮಂಡನೆ ಹೀಗಾಗಿ ಏನೇನು ಮಾಡ್ತಾರೆ ರಾಜ್ಯದ ಮುಖ್ಯಮಂತ್ರಿ ಏನು ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..