ಹಂಪಿ –
ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಎನ್.ಆರ್.ಪುರುಷೋತ್ತಮ ಅವರಿಗೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ.

ಜನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ ಹೆಬ್ಬಾಲೆ ಕೆ.ನಾಗೇಶ ಅವರ ಮಾರ್ಗದರ್ಶನದಲ್ಲಿ ಜನಪದ ಗೀತೆಗಳ “ಸಾಂಸ್ಕೃತಿಕ ಅಧ್ಯಯನ” ಚನ್ನರಾಯಪಟ್ಟಣ ತಾಲೂಕು ಅನುಲಕ್ಷಿಸಿ ಎಂಬ ಮಹಾಪ್ರಬಂಧ ಮಂಡಿಸಿದ್ದರು.

ನಿನ್ನೆ ಏಪ್ರೀಲ್ 09 ರಂದು ನಡೆದ ಕನ್ನಡ ವಿ.ವಿ.ಯ ನುಡಿಹಬ್ಬದಲ್ಲಿ ಕುಲಪತಿ ಡಾ.ಸ.ಚಿ.ರಮೇಶ ಅವರು ಪದವಿ ಪ್ರದಾನ ಮಾಡಿ ಗೌರವಿಸಿದರು.ಇನ್ನೂ ನಾನೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದು ಪದವಿ ಸಿಕ್ಕಿದ್ದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ ಎನ್ನುತ್ತಾ ಖುಷಿಪಟ್ಟರು