ಜಗಳೂರು –
ಪಿಎಂ ಕಿಸಾನ್ ಯೋಜನೆಯಿಂದ ಅನೇಕರು ಅಕ್ರಮವಾಗಿ ಆರ್ಥಿಕ ಲಾಭ ಪಡೆಯುತ್ತಿರುವುದನ್ನು ತಪ್ಪಿಸಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ ಎಂದು ಸಂಕಲ್ಪ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕೆ.ಸೋಮಶೇಖರ್ ಹೇಳಿದರು.ತಾಲೂಕಿನ ಮರೇನಹಳ್ಳಿಯಲ್ಲಿ ಇತ್ತೀಚೆಗೆ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಮಕ್ಕಳಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ಜಾಗೃತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಿಎಂ ಕಿಸಾನ್ ಯೋಜನೆ ಅನೇಕ ಅನರ್ಹರ ಖಾತೆ ತಲುಪುತ್ತಿದೆ.ಇಂತಹ ಅಕ್ರಮ ತಡೆಗಟ್ಟಲು ಹಾಗೂ ರೈತರ ಅರ್ಹತೆ ಸಾಬೀತುಪಡಿಸಲು ಇಕೆವೈಸಿ ಪ್ರಕ್ರಿಯೆ ಕಡ್ಡಾಯ ಗೊಳಿಸಲಾಗಿದೆ.ಇದು ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.ಅಕ್ರಮ,ಅನರ್ಹ, ವಂಚನೆ ತಡೆಗಟ್ಟುತ್ತದೆ ಎಂದು ಹೇಳಿದರು.
ರೈತರ ಆದಾಯ ಹೆಚ್ಚಿಸುವ ಮತ್ತು ಆರ್ಥಿಕ ಸಬಲರನ್ನಾಗಿಸುವ ಸಲುವಾಗಿ ಮೋದಿ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭಿಸಿದೆ. ಅರ್ಹ ರೈತರಿಗೆ ಪ್ರತಿ ವರ್ಷ 6000 ರೂ. ನೀಡಲಾಗುತ್ತದೆ. ಇದರಿಂದ ಕೃಷಿಕರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗಲಿದೆ. ಆದರೆ, ಇದರ ಸದ್ಬಳಕೆ ಆಗಬೇಕು ಎಂದು ಹೇಳಿದರು.ಇದಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗ ಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಯೋಜನೆ,ಇಕೆವೈಸಿ ಬಗ್ಗೆ ಅರಿವು ಮೂಡಿ ಸಲಾಯಿತು.