NPS ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಸಿಹಿ ಸುದ್ದಿ – ಕುತೂಹಲ ಕೆರಳಿಸಿದೆ ಆಯನೂರು ಮಂಜುನಾಥ್ ಹೇಳಿಕೆ…..

Suddi Sante Desk
NPS ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಸಿಹಿ ಸುದ್ದಿ –  ಕುತೂಹಲ ಕೆರಳಿಸಿದೆ ಆಯನೂರು ಮಂಜುನಾಥ್ ಹೇಳಿಕೆ…..

ಬೆಂಗಳೂರು

NPS ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಸಿಹಿ ಸುದ್ದಿ ಹೀಗೊಂದು ಪ್ರಶ್ನೆ  ಕುತೂಹಲ ಮೂಡಿಸಿದೆ ಆಯನೂರು ಮಂಜುನಾಥ್ ಅವರ ಹೇಳಿಕೆ ಹೌದು ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸು ವಂತೆ ಎನ್ ಪಿ ಎಸ್ ನೌಕರರು ಹೋರಾಟ ನಡೆಸುತ್ತಿದ್ದು ಈ ಬಾರಿಯ ಬಜೆಟ್ ನಲ್ಲಿ ಅವರಿಗೆ ಸಿಹಿ ಸುದ್ದಿ ಸಿಗಲಿದೆಯಾ ಎಂಬ ಕುತೂಹಲ ಬಜೆಟ್ ಮಂಡನೆ ಬೆನ್ನಲ್ಲೇ ಮೂಡಿದೆ

ಇದಕ್ಕೆ ಪುಷ್ಟಿ ನೀಡುವಂತೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇಂತಹದೊಂದು ಸುಳಿವು ನೀಡಿದ್ದಾರೆ ತಾವು ಎನ್‌ಪಿಎಸ್ ನೌಕರರ ಬೇಡಿಕೆ ಪೊಲೀಸ್ ಇಲಾಖೆಯಲ್ಲಿನ ವೇತನ ತಾರತಮ್ಯ ನಿವಾರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದೆ ಎಂದರು.

ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.ಹಳೆ ಪಿಂಚಣಿ ವ್ಯವಸ್ಥೆ ಜಾರಿ ಗೊಳಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಸುಮಾರು ಮೂರು ಲಕ್ಷ ಮಂದಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು ನಿವೃತ್ತಿ ಬಳಿಕ ನೌಕರರು ನೆಮ್ಮದಿಯ ಹಾಗೂ ಗೌರವಯುತ ಜೀವನ ನಡೆಸಲು ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಬರುವುದು ಅಗತ್ಯ ಎಂಬ ವಿಚಾರವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.