ಬೆಂಗಳೂರು –
2005 ರಿಂದ 2013 ರವರೆಗೆ ರಾಜ್ಯದಲ್ಲಿ ಉನ್ನತಿ ಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟಿಜಿಟಿ ಅಂದರೆ ಗ್ರೇಡ್ 2 ಶಿಕ್ಷಕರನ್ನು ಸರ್ಕಾರದ ಮರು ಆದೇಶದಂತೆ ಸರ್ಕಾರಿ ಪ್ರೌಢಶಾಲೆಗಳಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಒತ್ತಾಯ ಮಾಡಿದ್ದರು.
ಆ ಶಿಕ್ಷಕ ಬಂಧುಗಳ ಸಮಸ್ಯೆ ಅರಿತು ಧ್ವನಿ ಎತ್ತಿದ ರಾಜ್ಯಾಧ್ಯಕ್ಷರ ಮನವಿಗೆ ಶಿಕ್ಷಣ ಸಚಿವರು ಸ್ಪಂದಿಸಿದ್ದಾರೆ ಈ ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ