ಶಾಲಾ ಆರಂಭದ ಹಿನ್ನೆಲೆ ರಾಜ್ಯದ ಮಕ್ಕಳಿಗೆ ಶುಭ ಸುದ್ದಿ ನೀಡಿದ ಮುಖ್ಯಮಂತ್ರಿ – ಇದಪ್ಪಾ ನಿಜವಾದ ಮಕ್ಕಳ ಜವಾಬ್ದಾರಿ…..

Suddi Sante Desk

ಮೈಸೂರು –

ಕರೋನ ಮೂರನೇ ಅಲೆಯ ಆತಂಕದ ನಡುವೆ ಯೂ ಈಗಾಗಲೇ ರಾಜ್ಯದಲ್ಲಿ ಶಾಲೆ ಆರಂಭಕ್ಕೆ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ.ಈ ಒಂದು ಘೋಷಣೆಯ ನಡುವೆಯೂ ನಾಡ ದೊರೆ ಬಸವರಾಜ ಬೊಮ್ಮಾಯಿ ನಾಡಿನ ಮಕ್ಕಳಿಗೆ ಶುಭ ಸುದ್ದಿ ಯೊಂದನ್ನು ನೀಡಿದ್ದಾರೆ. ಹೌದು ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ನಿರ್ಧರಿಸಲಾ ಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು

ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಜೊತೆ ಕೋವಿಡ್ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮ ಹಾಗೂ ಶಾಲೆಗಳಲ್ಲಿ ಶಿಬಿರ ಆಯೋಜಿಸಿ 16 ವರ್ಷದೊಳ ಗಿನ ಎಲ್ಲಾ ಮಕ್ಕಳನ್ನು ತಪಾಸಣೆಗೆ ಒಳಪಡಿಸ ಬೇಕು 15 ದಿನಗಳ ಬಳಿಕ ಮತ್ತೊಮ್ಮೆ ತಪಾಸಣೆ ನಡೆಸಬೇಕು.ಆರೋಗ್ಯ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆಗಳು ಜೊತೆಗೂಡಿ ಈ ಕಾರ್ಯ ನಡೆಸಬೇಕು ಎಂದರು.

ಇನ್ನೂ ಪ್ರಮುಖವಾಗಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರದ ಕಿಟ್‌ ನೀಡಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಮವಹಿಸಬೇಕು ಎಂದರು‌.

ಇದರ ನಡುವೆ ಈ ಒಂದು ಯೋಜನೆ ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಈ ಯೋಜನೆ ಕೈಗೆತ್ತಿಕೊಂ ಡಿದ್ದು ಯಶಸ್ವಿಯಾಗಿದೆ.ಮೂರನೇ ಅಲೆಯಿಂದ ರಕ್ಷಿಸಲು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಪರಿಣತರು ಕೂಡ ಸಲಹೆ ನೀಡಿ ದ್ದಾರೆ ಎಂದು ಹೇಳಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.