ಚಿಕ್ಕಮಗಳೂರು –
ನಿನ್ನೆಯಷ್ಟೇ ಮದುವೆಗೆ ಬಂದ ಮೂವರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣವೊಂದು ಮಂಗಳೂರಿನಲ್ಲಿ ನಡೆದಿತ್ತು. ಈ ಒಂದು ಪ್ರಕರಣದ ಬೆನ್ನಲ್ಲೇ ಇಂದು ಮತ್ತೊಂದು ಇಂಥದೊಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಒಂದೇ ಕುಟುಂಬದ ಮೂವರು ಸಹೋದರರು ಸೇರಿ ಐದು ಜನ ಯುವಕರು ನೀರು ಪಾಲಾಗಿದ್ದಾರೆ.
ಮೂವರು ಅಣ್ಣ ತಮ್ಮಂದಿರೊಂದಿಗೆ ಇನ್ನೂ ಇಬ್ಬರು ನೀರುಪಾಲಾಗಿದ್ದಾರೆ.ದೀಪಕ್, ದಿಲೀಪ್, ಸುದೀಪ್ ಸಹೋದರರೇ ನೀರಿನಲ್ಲಿ ಮುಳುಗಿ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.ಈ ಮೂವರು ಸಹೋದರರು ಕೃಷ್ಣಮೂರ್ತಿ ಮತ್ತು ಕುಸುಮ ದಂಪತಿ ಮಕ್ಕಳಾಗಿದ್ದಾರೆ.ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟಿದ್ದು ಕಂಡು ಬಂದಿತು.ಇನ್ನೂ ಇವರೆಲ್ಲರೂ ಮದುವೆ ಸಮಾರಂಭಕ್ಕೆ ಬಂದಿದ್ದರು.ಮದುವೆಗೆ ಬಂದಿದ್ದ ಮೂವರು ಯುವಕರು ನೀರು ಪಾಲಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹಂಚರವಳ್ಳಿ ಗ್ರಾಮದ ಯುವಕರಾಗಿದ್ದಾರೆ.ಇನ್ನೂ ಮೂವರ ಯುವಕರೊಂದಿಗೆ ಸ್ಥಳೀಯ ಇನ್ನಿಬ್ಬರು ಯುವಕರು ಸಾವನ್ನಪ್ಪಿದ್ದಾರೆ.ಇದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.ದಿಲೀಪ್, ಸಂದೀಪ್, ರಘು ಮೃತದೇಹ ಪತ್ತೆಯಾಗಿವೆ.ಇನ್ನು ಇಬ್ಬರು ಯುವಕರ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ.ದೀಪಕ್, ಸುದೀಪ್ ಮೃತದೇಹಕ್ಕಾಗಿ ಶೋಧ ಮಾಡಲಾಗುತ್ತಿದೆ.