ಔಷಧಿ ತರುವ ನೆಪದಲ್ಲಿ ಬಂದ್ರು – ಗೋತ್ತಿಲ್ಲದಂತೆ 20 ಸಾವಿರ ಕದ್ದು ತಗೊಂಡು ಹೋದ್ರು

Suddi Sante Desk

ಬಳ್ಳಾರಿ-

ಈ ಬಾಲಕಿಗೆ ಇನ್ನೂ ಹತ್ತು ಹನ್ನೇರಡು ವಯಸ್ಸು. ಚಿಕ್ಕ ವಯಸ್ಸಿನಲ್ಲಿ ಓದಿ ವಿದ್ಯಾಭ್ಯಾಸ ಮಾಡುತ್ತಾ ಕಲಿಯಬೇಕಾದ ಬಾಲಕಿ ಮಾಡ್ತಾ ಇರೋದು ನಾಚಿಗೇಡಿನ ಕೆಲಸ. ಈ ಬಾಲಕಿ ಮಾಡಿದ್ದನ್ನು ನಿವೇನಾದ್ರೂ ನೋಡಿದ್ರೆ ಛೀ ಥೂ ಅನ್ನುತ್ತಿರಾ. ಇಂಥಹ ಕೆಲಸವನ್ನು ಬಾಲ್ಯದಲ್ಲಿಯೇ ಬಾಲಕಿ ಮಾಡ್ತಾ ಇದ್ದಾಳೆಂದರೆ ನಂಬಲು ಸಾಧ್ಯವಾಗೊದಿಲ್ಲ.

ಬಾಲ್ಯದಲ್ಲಿಯೇ ಏನು ಮಾಡಬೇಕು ಅದನ್ನು ಮಾಡದೇ ಮಾಡಬಾರದನ್ನು ಈ ಬಾಲಕಿ ಮಾಡ್ತಾ ಇದ್ದಾಳೆ. ಹೌದು ಇದಕ್ಕೇ ಬಳ್ಳಾರಿಯ ಅಪೋಲೊ ಮೆಡಿಕಲ್ ಶಾಪ್ ಸಾಕ್ಷಿಯಾಗಿದೆ. ಸಂಡೂರು ಪಟ್ಟಣದಲ್ಲಿನ ಅಪೋಲೊ ಮೆಡಿಕಲ್ ಶಾಪ್ ಗೆ ವ್ಯಕ್ತಿಯೊಬ್ಬರು ಔಷಧಿಯನ್ನು ತಗೆದುಕೊಳ್ಳಲು ಬರುತ್ತಾರೆ. ಇದೇ ಸಮಯದಲ್ಲಿಯೇ ತಾಯಿ ಅಣ್ಣನೊಂದಿಗೆ ಹತ್ತು ವರುಷದ ಬಾಲಕಿಯೂ ಕೂಡಾ ಬರುತ್ತಾಳೆ. ವ್ಯಕ್ತಿಯೊಬ್ಬರೊಂದಿಗೆ ಕೌಂಟರ್ ನತ್ತ ತೆರಳಿದ ಈ ಬಾಲಕಿ ಅವರ ಹಿಂದೆ ಹೋಗಿ ಅವರಿಗೆ ಹತ್ತಿಕೊಂಡು ನಿಲ್ಲುತ್ತಾಳೆ.

ಅತ್ತ ಬಾಲಕಿಯ ಅಣ್ಣ ತಾಯಿ ಬೇರೆ ಔಷಧಿಯನ್ನು ವಿಚಾರಣೆ ಮಾಡ್ತಾರೆ ಇತ್ತ ಬಾಲಕಿ ವ್ಯಕ್ತಿಯೊಬ್ಬರಿಗೆ ಹತ್ತಿಕೊಂಡು ನಿಂತು ಅವರಿಗೆ ಗೋತ್ತಿಲ್ಲದ ಹಾಗೇ ಹಿಂದಿನ ಜೇಬಿನಲ್ಲಿರುವ ಪರ್ಸನ್ನು ತಗೆದುಕೊಂಡು ಎಸ್ಕೇಫ್ ಆಗುತ್ತಾಳೆ.ಇಪ್ಪತ್ತು ಸಾವಿರ ರೂಪಾಯಿ ಪರ್ಸ್ ನಲ್ಲಿದ್ದು ಅದನ್ನು ವ್ಯಕ್ತಿಯೊಬ್ಬರಿಗೆ ಗೊತ್ತಿಲ್ಲದಂತೆ ಕಳ್ಳತನ ಮಾಡಿಕೊಂಡು ಬಾಲಕಿ ಮೆಡಿಕಲ್ ಶಾಫ್ ನಿಂದ ಹೊರಗೆ ಹೋಗುತ್ತಾಳೆ.

ಇನ್ನೂ ಅತ್ತ ಅವರ ತಾಯಿ ಕೂಡಾ ಒಂದೇರೆಡು ವಸ್ತುಗಳ ದರವನ್ನು ಕೇಳಿ ಬಾಲಕಿ ಹೋಗುತ್ತಿದ್ದಂತೆ ಮಗನೊಂದಿಗೆ ಹೋಗುತ್ತಾರೆ. ಇನ್ನೂ ಈ ಕುರಿತಂತೆ ವ್ಯಕ್ತಿ ಕೆಲ ಸಮಯದ ನಂತರ ತಮ್ಮ ಪರ್ಸ್ ನೋಡಿಕೊಂಡಾಗ ನಂತರ ಸಿಸಿ ಟಿವಿ ಪರಿಶೀಲನೆ ಮಾಡಿದಾಗ ತಮ್ಮ ಪರ್ಸ್ ಕಳ್ಳತನ ವಾಗಿದ್ದು ಕಂಡು ಬರುತ್ತದೆ. ಈ ಕುರಿತಂತೆ ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಇತ್ತ ಪರ್ಸ್ ಕಿತ್ತುಕೊಂಡು ಹೋಗಿರುವ ಖತರ್ನಾಕ್ ಬಾಲಕಿಯ ಬಂಧನಕ್ಕೇ ಪೊಲೀಸರು ಬಲೆ ಬೀಸಿದ್ದಾರೆ. ಇವೆಲ್ಲದರ ನಡುವೆ ಹೆತ್ತ ತಾಯಿಯೇ ಇಂಥಹ ಕೆಲಸವನ್ನು ಮುಗ್ದ ಬಾಲಿಕಿಯ ಕೈಯಿಂದ ಮಾಡಿಸಿದ್ದು ನಿಜಕ್ಕೂ ವಿಷಾದದ ಸಂಗತಿ. ಏನೇ ಆಗಲಿ ಎಲ್ಲೇ ಹೋದ್ರೆ ನೀವು ಸ್ವಲ್ಪು ಹುಷಾರಾಗಿರಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.