ಧಾರವಾಡ –
ಧಾರವಾಡದಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಐದು ಜನರು. ಧಾರವಾಡದ ಜನ್ನತ್ ನಗರದ ಇರಾನಿ ಕಾಲೋನಿಯ ಜಾಫರ್ ಇರಾನಿ ಯ ಮೂವರು ಮಕ್ಕಳು ಇನ್ನಿಬ್ಬರಾದ ಅಲಿ ಮತ್ತು ಬಿಲಾಲ ಸೇರಿ ಒಟ್ಟು ಐದು ಜನರು ಒಟ್ಟಿಗೆ ನಿಂತುಕೊಂಡಿದ್ದರು. ಇದರಲ್ಲಿ ಜಾಫರ್ ಇರಾನಿಯ ಮೂರು ಮಕ್ಕಳು ಮತ್ತು ಅಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಬಿಲಾಲನನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಪ್ರಕರಣವೊಂದರಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಪೊಲೀಸರು ಆರೋಪಿಗಳ ಪೊನ್ ಟ್ರೇಸ್ ಮಾಡಿಕೊಂಡು ಬಂಧಿಸಲು ಧಾರವಾಡಗೆ ಬಂದಿದ್ದರು. ಈ ಒಂದು ಸಮಯದಲ್ಲಿ ಆರೋಪಿಗಳ ಸ್ಥಳವನ್ನು ಸಂಗಮ ವೃತ್ತದಲ್ಲಿ ತೋರಿಸಿದಾಗ ಅವರನ್ನು ಹುಡುಕುತ್ತಾ ಬೆಂಗಳೂರಿನ ಪೊಲೀಸರು ಬಂದಿದ್ದಾರೆ. ತಾವು ಹುಡುಕುತ್ತಿದ್ದ ಆರೋಪಿಗಳು ಏಕಾಎಕಿಯಾಗಿ ಕಾಣುತ್ತಿದ್ದಂತೆ ಕಾರು ಇಳಿದು ಬಂಧನಕ್ಕೇ ಮುಂದಾಗಿದ್ದಾರೆ. ಅತ್ತ ಈ ಪೊಲೀಸರ ಮೇಲೆಯೇ ಅವರು ಅಟ್ಯಾಕ್ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಪೊಲೀಸ್ರು ತಪ್ಪು ಮಾಡಿದ್ರಾ
ಹೌದು ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಧಾರವಾಡಗೆ ಬಂದ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಪೊಲೀಸರು ತಪ್ಪು ಮಾಡಿದ್ದಾರೆ. ಹಲ್ಲೆಯ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಎಡವಟ್ಟು ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಆರೋಪಿಗಳನ್ನು ಬಂಧಿಸಲು ರಾಜ್ಯದ ಎಲ್ಲಾ ಪೊಲೀಸರಿಗೂ ಎಲ್ಲಾ ಕಡೆಗೆ ಹೋಗುವ ಅಧಿಕಾರವಿದೆ ಸ್ವತಂತ್ರವಿದೆ . ಆದರೆ ಧಾರವಾಡದಲ್ಲಿನ ಪ್ರಕರಣವನ್ನು ನೋಡಿದ್ರೆ ಪೊಲೀಸರು ಯಾಕೋ ಎಡವಟ್ಟು ಮಾಡಿಕೊಂಡಂತೆ ಕಾಣುತ್ತಿದೆ. ಹೌದು ಸಾಮಾನ್ಯ ಕಳ್ಳರಂತೆ ಕಳ್ಳತನದ ಪ್ರಕರಣದಲ್ಲಿ ನಾಲ್ಕು ಜನ ಪೊಲೀಸರು ಸೇರಿಕೊಂಡು ಐದು ಜನರನ್ನು ಪೊನ್ ಟ್ರೇಸ್ ಮಾಡಿಕೊಂಡು ಬಂಧಿಸಲು ಬಂದ್ದಿದಾರೆ. ಒಂದು ಸ್ಥಳೀಯ ಮತ್ತೊಂದು ಐದು ಜನರು ಹೀಗಾಗಿ ಏಕಾಎಕಿಯಾಗಿ ಬಂಧಿಸಲು ನಗರಕ್ಕೇ ಬಂದ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಎಷ್ಟೇ ಮುಂಜಾಗೃತೆ ಇದ್ದರೂ ಎಡವಟ್ಟು ಮಾಡಿಕೊಂಡಿದ್ದಾರೆ. ಎನ್ನೊದಕ್ಕೇ ಈ ವಿಡಿಯೋ ಸಾಕ್ಷಿಯಾಗಿದೆ.
ಈ ಒಂದು ಪ್ರಕಣವನ್ನು ನೋಡ್ತಾ ಇದ್ದಾರೆ ನಿಜಕ್ಕೂ ಕೂಡಾ ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ತಗೆದುಕೊಳ್ಳದೇ ಏಕಾಎಕಿಯಾಗಿ ಆರೋಪಿಗಳ ಫೊನ್ ಟ್ರೇಸ್ ಮಾಡಿಕೊಂಡು ಬಂಧನ ಮಾಡಲು ಬಂದಿದ್ದಾರೆ. ಈ ಒಂದು ಸಮಯದಲ್ಲಿ ಮೊದಲು ನಾಲ್ಕು ಜನರನ್ನು ಪೊಲೀಸರು ಹಿಡಿದುಕೊಂಡಿದ್ದಾರೆ ಗಟ್ಟಿಯಾಗಿ ಹಿಡಿದುಕೊಂಡ ಸಮಯದಲ್ಲಿ ಏಕಾಏಕಿಯಾಗಿ ಹಿಂದಿನಿಂದ ಬಂದ ಯುವನೊಬ್ಬ ನಾಲ್ಕು ಜನರೊಂದಿಗೆ ನಿಂತುಕೊಂಡಿದ್ದ ಗುಂಪಿಗೆ ಅಟ್ಯಾಕ್ ಮಾಡುತ್ತಿದ್ದಂತೆ ಗದ್ದಲ ಉಂಟಾಗಿದೆ ನಾಲ್ಕು ಜನರನ್ನು ಹಿಡಿದುಕೊಂಡಿದ್ದ ಪೊಲೀಸರು ನೆಲಕ್ಕೆ ಬೀಳುತ್ತಿದ್ದಂತೆ ಎಲ್ಲರೂ ಸೇರಿಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ.ಇದೇ ಬೆಂಗಳೂರಿನ ಪೊಲೀಸರು ಮಾಡಿಕೊಂಡ ದೊಡ್ಡ ಎಡವಟ್ಟು.
ಇರಾನಿ ಯುವಕರು ಮರಳಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಸಧ್ಯ ಇಬ್ಬರು ಪೊಲೀಸರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೇಲ್ಲವನ್ನು ನೋಡ್ತಾ ಇದ್ದರೇ ನಿಜಕ್ಕೂ ಕೂಡಾ ಬೆಂಗಳೂರಿನ ಪೊಲೀಸರು ಎಡವಟ್ಟು ಮಾಡಿಕೊಂಡಿದ್ದು ವಿಷಯ ತಿಳಿದ ಎಸಿಪಿ ಶ್ರೀಮತಿ ಅನುಷಾ ಮತ್ತು ಶಹರ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೇ ಹೋಗಿ ದೊಡ್ಡ ಪ್ರಮಾಣದ ಘಟನೆಗೆ ಬ್ರೇಕ್ ಹಾಕಿ ಪರಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪರಾರಿಯಾಗಿದ್ದ ಐವರಲ್ಲಿ ಒರ್ವ ಸಿಕ್ಕಿಬಿದ್ದಿದ್ದು ಇನ್ನೂ ನಾಲ್ಕು ಜನರು ಪಾರಾಗಿದ್ದಾರೆ.