ಹಾಡಹಗಲೇ ಕಾಂಗ್ರೆಸ್ ಮುಖಂಡನ ಬರ್ಭರ ಕೊಲೆ – ಪೊಲೀಸ್ ಠಾಣೆ ಎದುರು ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಲೆ…..

Suddi Sante Desk

ಚಿಕ್ಕಬಳ್ಳಾಪುರ –

ಕಾಂಗ್ರೆಸ್ ಮುಖಂಡನೋರ್ವನನ್ನ ದುಷ್ಕರ್ಮಿಗಳು ಲಾಂಗುಗಳಿಂದ ಮನಸೊ ಇಚ್ಚೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ನಗರ ಪೊಲೀಸ್ ಠಾಣೆ ಬಳಿ ಈ ಒಂದು ಘಟನೆ ನಡೆದಿದೆ. ಶಿಡ್ಲಘಟ್ಟ ನಗರದ 43 ವರ್ಷದ ಅಮ್ಜದ್ ಖಾನ್ ಕೊಲೆಯಾದ ಕಾಂಗ್ರೆಸ್ ಮುಖಂಡನಾಗಿದ್ದು.

ಬೈಕ್ ನಲ್ಲಿ ಅಮ್ಜದ್ ತೆರಳುತ್ತಿದ್ದ ವೇಳೆ ಓಮ್ನಿಯಲ್ಲಿ ಹಿಂಬಾಲಿಸಿದ ಅಪರಿಚಿತರು ಹಾಡಹಗಲೇ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆಮಾಡಿ ಪರಾರಿಯಾಗಿದ್ದಾರೆ

ಮೃತ ಅಮ್ಜದ್ ಸ್ಥಳೀಯ ಕಾಂಗ್ರೆಸ್ ಮುಖಂಡ ನಾಗಿದ್ದು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬಾಗಿ ಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು.

ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಮೃತದೇಹ ವನ್ನ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾ ನಿಸಿದ್ದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿ ದ್ದಾರೆ.ಇನ್ನು ಹಾಡಹಗಲೇ ಬರ್ಬರ ಕೊಲೆ ಯಾದ ಘಟನೆಯಿಂದ ಶಿಡ್ಲಘಟ್ಟ ಜನತೆ ಬೆಚ್ಚಿ ಬಿದ್ದಿದ್ದು ಈ ಕುರಿತು ಪ್ರಕರಣ ದಾಖಲು ಮಾಡಿ ಕೊಂಡು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ‌‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.