ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು BJP ಯ ST ಸಮಾಜದ ಮುನ್ನಡೆ ಸಮಾವೇಶ – ಪ್ರಹ್ಲಾದ್ ಜೋಶಿ ಗೆ ಬರುಪರಾಕ್ ಹೇಳಿದ್ರು ಪರಿಶಿಷ್ಠ ಸಮಾಜದದವರು….. ಸಾರ್ಥಕವಾ ಯಿತು ಮಣಿಕಂಠ ಶ್ಯಾಗೋಟಿ ಸುತ್ತಾಟ
ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡದ ಮುನ್ನಡೆ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ನಗರದ ಗೋಕುಲ ಗಾರ್ಡನ್ ನಲ್ಲಿ ಆಯೋಜನೆ ಮಾಡಿದ್ದ ಈ ಒಂದು ಸಮಾವೇಶವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಮಾಜಿ ಸಚಿವ ಶ್ರೀರಾಮಲು ಸೇರಿದಂತೆ ಹಲವು ಗಣ್ಯರು ಉದ್ಘಾಟನೆಯನ್ನು ಮಾಡಿದರು.ಇದೇ ವೇಳೆ ಸಮಾವೇಶದಲ್ಲಿ ಪಾಲ್ಗೊಂಡ ನಾಯಕರು ಭಾಗವಹಿಸಿ ನೆರೆದಿದ್ದ ನೆಚ್ಚಿನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಕೇಂದ್ರ ಸರ್ಕಾರವು ಎಸ್ ಟಿ ಸಮಾಜಕ್ಕೆ ಮಾಡಿರುವ ಕೆಲಸ ಕಾರ್ಯಗಳನ್ನು ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕ್ಷೇತ್ರದಲ್ಲಿ ಮಾಡಿರುವ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ತಿಳಿಸಿದರು.
ವಾಲ್ಮೀಕಿ ಸಮುದಾಯ ಈ ದೇಶದ ಅತ್ಯಂತ ಶ್ರೇಷ್ಠ ಸಮುದಾಯ.ಮಹರ್ಷಿ ವಾಲ್ಮೀಕಿ ಹಿಂದೂಗಳ ಪವಿತ್ರ ಗ್ರಂಥ ರಾಮಾಯಣವನ್ನು ರಚಿಸಿರುವ ಮಹಾಜ್ಞಾನಿ.ಅಂತಹ ಮೇಧಾವಿಯ ಧರ್ಮ ಮಾರ್ಗವನ್ನು ಪಾಲಿಸಿಕೊಂಡು ಬಂದಿ ರುವ ಈ ಸಮುದಾಯ ಸದಾ ನಮ್ಮ ಬಿಜೆಪಿ ಪಕ್ಷಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಾ ಬಂದಿದೆ ಪ್ರಧಾನಿ ನರೇಂದ್ರ ಮೋದಿ ಯವರು ಜಾತಿ ಧರ್ಮಗಳ ಭೇದ ಭಾವವಿಲ್ಲದೆ ಸರ್ವರಿಗೂ ಸಮಪಾಲನ್ನು ನೀಡುತ್ತಾ ಬಂದಿ ದ್ದಾರೆ ದೇಶವಾಸಿಗಳ ಉನ್ನತಿಗೆ ಹಗಲು ರಾತ್ರಿ ಶ್ರಮಿಸುತ್ತಿರುವ ಮೋದಿ ಸರ್ಕಾರ ಯೋಜನೆಗ ಳನ್ನು ರೂಪಿಸುವುದರ ಜೊತೆಗೆ ಕಾರ್ಯರೂಪಕ್ಕೆ ತಂದಿದೆ.
ದೇಶದ ರಕ್ಷಣಾ ವ್ಯವಸ್ಥೆಯಲ್ಲೂ ಕೂಡ ದೊಡ್ಡ ಮಟ್ಟದ ಬದಲಾವಣೆಯಾಗಿದೆ.ಈ ಹಿಂದೆ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಿ ದೇಶದ ಶಾಂತಿಯನ್ನು ಕದಡುತಿತ್ತು.ಆದರೆ ಈಗ ಅವೆಲ್ಲದಕ್ಕೂ ಪೂರ್ಣವಿರಾಮ ಬಿದ್ದಿದೆ. ನಮ್ಮ ದೇಶ ಈಗ ವಿಶ್ವದಲ್ಲೇ 5 ನೇ ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ.
ಮುಂಬರುವ ದಿನಗಳಲ್ಲಿ ಭಾರತ ತನ್ನ ಈ ವೇಗವನ್ನು ವೃದ್ಧಿಸಿ 3 ನೇ ಬಲಿಷ್ಠ ಆರ್ಥಿಕತೆ ಯನ್ನು ಹೊಂದಿರುವ ದೇಶವಾಗಿ ಹೊರಹೊ ಮ್ಮಬೇಕಾದಲ್ಲಿ ನರೇಂದ್ರ ಮೋದಿಯವರನ್ನು ನಾವು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡ. ಬೇಕು. ಹೀಗಾಗಿ ನೆರೆದಿದ್ದ ಎಲ್ಲರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲವನ್ನು ನೀಡು ವಂತೆ ಪ್ರಹ್ಲಾದ್ ಜೋಶಿಯವರು ಕೋರಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀರಾಮಲು,ಶಾಸಕರಾದ ಅರವಿಂದ ಬೆಲ್ಲದ,ಎಮ್ ಆರ್ ಪಾಟೀಲ್,ಮಹೇಶ್ ತೆಂಗಿನಕಾಯಿ,ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ರಾದ ಹನುಮಂತ ಬಂಗಾರು,ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ,ಮಾಜಿ ಸಚಿವ ರಾದ ಶಂಕರ ಪಾಟೀಲ ಮುನೇನಕೊಪ್ಪ,ಶ್ರೀಮತಿ ಸೀಮಾ ಮಸೂತಿ ,ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಛಬ್ಬಿ ,
ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷರಾದ ಪುಂಡಲೀಕ ತಳವಾರ, ಧಾರವಾಡ ಗ್ರಾಮೀಣ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಲಕ್ಷ್ಮಣ ಮ್ಯಾಗಿನಮನಿ, ರಾಜ್ಯ ಎಸ್ ಟಿ ಮೋರ್ಚಾದ ಕೋಶಾಧ್ಯಕ್ಷರಾದ ಮಣಿಕಂಠ ಶ್ಯಾಗೋಟಿ, ಹು-ಧಾ ಮಹಾಪೌರ ರಾದ ಶ್ರೀಮತಿ ವೀಣಾ ಭರದ್ವಾಡ,
ಜಿಲ್ಲಾಧ್ಯಕ್ಷ ರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ ಹಾಗು ವಾಲ್ಮೀಕಿ ಸಮುದಾಯದ ಪ್ರಮುಖರು, ಜಿಲ್ಲಾ ಎಸ್ ಟಿ ಮೋರ್ಚಾದ ಮುಖಂಡರು, ಪಕ್ಷದ ಪ್ರಮುಖರು ಕಾರ್ಯಕ ರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..