ಬಾಗಲಕೋಟ –
ಸಂಕ್ರಾಂತಿ ನಂತರ ನನ್ನ ಪಾತ್ರ ಬೇರೆ ಇದೆ ಮುಂದೆ ಕಾಣಿಸುತ್ತೆ ಹಿಗೇಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಕೂಡಲಸಂಗಮದಲ್ಲಿ ಮಾತನಾಡಿದ ಅವರು ಸಂಕ್ರಾಂತಿ ನಂತರ ನನ್ನ ಪಾತ್ರ ಬೇರೆ ಇದೆ ಮುಂದೆ ಕಾಣಿಸುತ್ತೆ ಎನ್ನುತ್ತಾ ಮತ್ತೊಂದು ಬಾಂಬ್ ಹಾಕಿದರು.ಕಾಲ ಕಾಲಕ್ಕೆ ಏನೆಲ್ಲ ಬದಲಾವಣೆ ಆಗಬೇಕೋ ಅದೇಲ್ಲಾ ಆಗುತ್ತದೆ ಯಾವುದು ಶಾಶ್ವತವಲ್ಲ ರಾಜಕಾರಣದಲ್ಲಿ ಯಾರೋ ಏರ್ತಾರೆ ಯಾರೋ ಇಳಿತಾರೆ ಯಾವ ಸ್ಥಾನವೂ ಶಾಶ್ವತವಲ್ಲವೆಂದರು.
ಇನ್ನೂ ಸಂಕ್ರಮಣ ಕಾಲದಲ್ಲಿ ಸೂರ್ಯ ಪಥ ಬದಲಿಸುತ್ತಾನೆ. ಸಾಕಷ್ಟು ಬೆಳವಣಿಗಳು ಸಾಮಾಜಿಕವಾಗಿ ರಾಜಕೀಯವಾಗಿ ನೈಸರ್ಗಿಕವಾಗಿ ಆಗುತ್ತವೆಂದರು. ನಾನು ಈ ಹಿಂದೆ ಇಷ್ಟೇ ಹೇಳಿದಿನಿ ಸಿಎಮ್ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ ಸಂಕ್ರಮಣ ಕಾಲದ ಬದಲಾವಣೆ ಕಾದು ನೋಡಿ ಎಂದರು.
ಇನ್ನೂ ಯುವರಾಜ ಯಾದವ್ ವಂಚನೆ ಪ್ರಕರಣ ಕುರಿತಂತೆ ಮಾತನಾಡಿ ಯುವರಾಜನಂತ ಎಜೆಂಟರು ಬೆಂಗಳೂರಲ್ಲಿ ದೆಹಲಿಯಲ್ಲಿ ಬಹಳ ಜನರಿದ್ದಾರೆ ದುರ್ದೈವ ಅಂದರೆ ನಾವು ಶಾಸಕರು ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗೋಕೆ ಎಜೆಂಟ್ ರನ್ನು ಕರೆದುಕೊಂಡು ಹೋಗಬೇಕಾ? ಇದು ಇವತ್ತಿನ ರಾಜಕಾರಣದ ಪರಿಸ್ಥಿತಿ ಎಂದರು.
ನಮಗೆ ಮುಕ್ತ ಸ್ವಾತಂತ್ರ್ಯ ಇದೆ,ನಾವ್ ಹುಚ್ಚರಾ? ನೇರವಾಗಿ ಅಮಿತ್ ಶಾ ಹಾಗೂ ಪ್ರಧಾನಿಯವರನ್ನು ಭೇಟಿಯಾಗ್ತೀವಿ.ನಮ್ ಕಡೆಗೂ ಬಹಳ ಜನ ಎಜೆಂಟ್ರು ಬಂದಿದ್ದರು. ನಿಮ್ಮನ್ನು ಮಂತ್ರಿ ಮಾಡ್ತೀವಿ ಅಂತ ಎಜೆಂಟ್ರು ಬಂದಿದ್ರು.ನಾ ಪಾರ್ಟಿ ಕಟ್ಟದಾವ ನನಗೇನು ಭೇಟಿ ಮಾಡಿಸ್ತಿಯಾ ಹೋಗಲೆ ಅಂದಿದ್ದೆ. ಇಂತಹ ಎಜೆಂಟ್ರು ಬೆಂಗಳೂರಲ್ಲಿ ಬಹಳ ಜನರಿದ್ದಾರೆ. ಆದರೆ ಯುವರಾಜ ನನ್ನನ್ನು ಭೇಟಿಯಾಗಿಲ್ಲ ಎಂದರು.