CM ಗೆ 24 ಗಂಟೆಗಳ ಗಡುವು ನೀಡಿದ ಬಸನಗೌಡ ಪಾಟೀಲ ಯತ್ನಾಳ್ – 24 ಗಂಟೆಯಲ್ಲಿ ಮೀಸಲಾತಿ ಕೊಡ್ತಿರೋ ಇಲ್ಲವೋ ಹೇಳಿ ಡೇಡ್ ಲೈನ್ ನೀಡಿದ ಬಿಜೆಪಿ ಶಾಸಕರು

Suddi Sante Desk
CM ಗೆ 24 ಗಂಟೆಗಳ ಗಡುವು ನೀಡಿದ ಬಸನಗೌಡ ಪಾಟೀಲ ಯತ್ನಾಳ್ – 24 ಗಂಟೆಯಲ್ಲಿ ಮೀಸಲಾತಿ ಕೊಡ್ತಿರೋ ಇಲ್ಲವೋ ಹೇಳಿ ಡೇಡ್ ಲೈನ್ ನೀಡಿದ ಬಿಜೆಪಿ ಶಾಸಕರು

ಬೆಳಗಾವಿ

ಮೀಸಲಾತಿಯನ್ನು ಕೊಡ್ತಿರೋ ಇಲ್ಲವೋ ಎನು ಎಂಬೊದನ್ನು 24 ಗಂಟೆಯಲ್ಲಿ ಹೇಳಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮುಖ್ಯ ಮಂತ್ರಿಗೆ ಹೇಳಿದ್ದಾರೆ.ಈ ಕುರಿತಂತೆ ಬೆಳಗಾವಿ ಯಲ್ಲಿ ಮಾತನಾಡಿದ ಅವರು 24 ಗಂಟೆಯಲ್ಲಿ ಈ ಒಂದು ವಿಚಾರ ಕುರಿತಂತೆ 24 ಗಂಟೆಗಳ ಕಾಲ ಡೆಡ್ ಲೈನ್ ನೀಡಿ ಅಂತಿಮ ಗಡುವನ್ನು ಸಿಎಂ ಬಸವರಾಜ ಬೋಮ್ಮಾಯಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ್ದಾರೆ.

ಬೆಳಗಾವಿ ಗಾಂಧಿ‌ಭವನದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಭೆಯಲ್ಲಿ ಮಾತನಾಡಿದ ಅವರು ಬೋಮ್ಮಾಯಿ ಅವರು ಸಿಎಂ ಆದಾಗಿ ನಿಂದ ಈವರೆಗೂ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ ನಮ್ಮ ಸಮಾಜಕ್ಕೆ ಹಿಂದುಳಿದ ಆಯೋಗ ವರದಿ ತರಿಸುತ್ತಾರೆ.ಆ ವರದಿ ಕೊಡುವ ಪುಣ್ಯಾತ್ಮ ಬರೀ ನೆಪ ಹೇಳುತ್ತಾರೆ.

ಪಂಚಮಸಾಲಿಗಳಿಗೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ ಶಿಕಾರಿಪುರ ರಾಜಾ ಎಲ್ಲರೂ ಇದ್ದಾರೆ ನನಗೆ ಏನು ಮಾಡ್ತಾರೆ ಪಕ್ಷದಿಂದ ಉಚ್ಛಾಟನೆ ಮಾಡ್ತಾರೆ ಅಷ್ಟೇ ಮಾಡಲಿ ಎಂದು ಸವಾಲು ಹಾಕಿದರು.ಸಿಎಂ ಅವರು ತಾಯಿ ಆಣೆ ಮಾಡಿ ಇಂತಹ ಕೆಲಸ ಮಾಡುತ್ತಾರೆ ತಾಯಿ‌ ಆಣೆ ಮಾಡೊ ಹುಚ್ಚರಲ್ಲಿ ತೆಗೆದರು ಸರ್ಕಾರದ ಮಂತ್ರಿಗೆ 2 ಡಿ ಅಂದ್ರೆ ಗೊತ್ತಿಲ್ಲ ನಮ್ಮ ಸಮಾಜದ ಮಂತ್ರಿಗೆ ಅಧಿಕಾರ ಬೇಕಿದೆ ಎಂದು ಪರೋಕ್ಷ ವಾಗಿ ನಿರಾಣಿಗೆ ಟಾಂಗ್ ನೀಡಿದರು.

ಇನ್ನೂ ಸಿಎಂ ಬೋಮ್ಮಾಯಿ ಅವರೇ ಮೀಸ ಲಾತಿ ಕೊಡುವುದಿಲ್ಲ ಅನ್ನೋದನ್ನ ಹೇಳಿ ಬಿಡಿ ಎನ್ನುತ್ತಾ ವಾಗ್ದಾಳಿ ನಡೆಸಿದರು.ನಮಗೆ ಟಿಕೆಟ್ ಕೊಡಲಿಕ್ಕಿಲ್ಲ ಅಷ್ಟೇ ನನಗೆ ಎರಡ್ಮೂರು ದಿನದಲ್ಲಿ ನನಗೆ ಕಾಲ್ ಮಾಡ್ತಾರೆ ಸಿಎಂ ಬಸವರಾಜ ಬೊಮ್ಮಾಯಿ ಅವರು 24 ಗಂಟೆಯಲ್ಲಿ ಸ್ಪಷ್ಟ ನಿರ್ಧಾರವನ್ನು ತಿಳಿಸಲಿ ಎಂದರು.ಪಂಚಮ ಸಾಲಿ ಸಮಾಜಕ್ಕೆ ಮೀಸಲಾತಿ ಕೊಡ್ತಿರೋ ಇಲ್ಲವೋ ಅನ್ನೋದನ್ನ ಸ್ಪಷ್ಟ ಪಡಸ್ರಿ ಮೀಸಲಾತಿ ಕೊಡ್ತಿರೋ ಇಲ್ಲವೋ ಸಿಎಂ ಬೋಮ್ಮಾಯಿ ಸ್ಪಷ್ಟಪಡಿಸಬೇಕು ಆಗ ಹೆಗಡೆಗೆ ನೀವು ಹೇಳಿ ಬಿಟ್ಟಿದಿರಿ.

 

 

ವರದಿ ಕೊಡಬೇಡಾ ಅಂತಾ ಮೇ 23 ರ ವರೆಗೂ ಮುಖ್ಯಮಂತ್ರಿ ಆಗಿ ಇರಬೇಕು ಅಂತಾ ಇದ್ದಿರಿ. ಸಿಎಂ ಅವರು ಇಡಿ ಸಮಾಜಕ್ಕೆ ಮೋಸ ಮಾಡಿ ದ್ದಿರಿ ನಮ್ಮಲ್ಲಿಯೇ ಜಗಳಾ ಹಚ್ಚಲು ಪ್ರಯತ್ನ ಮಾಡಿದ್ರಿ ನಮಗೆ ಹೇಳಿದ್ರಿ 2 ಡಿ ಕೊಡ್ತಿನಿ ಉದ್ಯೋಗ ಶಿಕ್ಷಣ ಸಮಾನವಾಗಿ ಕೊಡ್ತಿವಿ ಅಂತಾ ಹೇಳಿದ್ರಿ ಎನ್ನುತ್ತಾ ಸಿಎಂ ಬೋಮ್ಮಾಯಿ, ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದರು.

ನಾವು ಯಾರಿಗೂ ಧಮ್ಕಿ ಹಾಕಿಲ್ಲ ನಾವು ಧಮ್ಕಿ ಹಾಕಿದ್ರೆ ನೀವು ಸುವರ್ಣ ಸೌಧದಲ್ಲಿ ನಿಮಗೆ ಉಚ್ಚಿ ಹೋಯಲು ಆಗ್ತಿರಲಿಲ್ಲ ನಾವು ಮತ್ತೊ ಬ್ಬರಿಗೆ ವಿರೋಧ ಮಾಡಿದ್ವಿ ಇಲ್ಲ ನನ್ನ ಮೇಲೆ 27 ಕೇಸ್ ಇದ್ದವು ಅವೆಲ್ಲವೂ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖುಲಾಷೆ ಆಗಿವೆ.ನಾವು ಯಾರಿಗೂ ಅಂಜಿಲ್ಲ ನಾನು ರಾಜಕಾರಣದಲ್ಲಿ ಎಲ್ಲವೂ ಆಗಿರುವೆ ಎನ್ನತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು.ನಾನು ನಮ್ಮ ಸಿದ್ಧೇಶ್ವರ ಸ್ವಾಮೀಜಿಗಳು ಅನಾರೋಗ್ಯದ ಕಾರಣಕ್ಕೆ ಸುಮ್ಮನಾಗಿದ್ದೇ ಸಿಎಂ ಬಸವರಾಜ ಬೋಮ್ಮಾಯಿ ಅವರಿಗೆ ಅಂತಿಮ ಗಡುವು ಕೊಟ್ಟರು ಯತ್ನಾಳ ಅವರು.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.