ಬೀದರ್ –
ವಿಶ್ವಗುರು ಬಸವಣ್ಣನವರ ಬಗ್ಗೆ ದೇಶ ವಿದೇಶಗಳಲ್ಲಿ ಇವರ ಬಗ್ಗೆ ಗೊತ್ತು. ಅದರಲ್ಲೂ ಕರ್ಮಭೂಮಿ ಬಸವಕಲ್ಯಾಣ ಇತಿಹಾಸವಂತೂ ಇಡೀ ಜಗತ್ತಿಗೆ ಗೊತ್ತು.ದೇಶ ವಿದೇಶಗಳಲ್ಲಿ ಜನರಿಗೆ ಬಸವಣ್ಣನವರ ಇತಿಹಾಸ ಗೊತ್ತು ಆದರೆ ನಮ್ಮ ಸಚಿವರಿಗೆ ಮಾತ್ರ ಬಸವಣ್ಣನವರ ಇತಿಹಾಸದ ಬಗ್ಗೆ ಗೊತ್ತಿಲ್ಲವಂತೆ ಕಾಣುತ್ತಿದೆ.

ಹೌದು ಬೀದರ್ ಮತ್ತು ಯಾದಗಿರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಭು ಚವ್ಹಾಣಗೆ ಅವರಿಗೆ ವಿಶ್ವವೇ ಗುರುತಿಸಿರುವ ಬಸವಣ್ಣನವರ ಇತಿಹಾಸ ಗೊತ್ತಿಲ್ಲವಂತೆ ಕಾಣುತ್ತಿದೆ.ಇತಿಹಾಸ ಬಗ್ಗೆ ಹೇಗೆ ಮಾಹಿತಿ ನೀಡಿದ್ದಾರೆ ಸಚಿವರು ಅಂದರೆ ನಾವು ಹೇಳೊದಕ್ಕಿಂತ ನೀವು ಈ ಕೆಳಗಿನ ವಿಡಿಯೋ ನೋಡಿದ್ರೆ ನಿಮಗೂ ಗೊತ್ತಾಗುತ್ತದೆ.
ಒಂದು ಸಾರಿ ಹಜಾರ್ ವರ್ಷ, ಮತ್ತೊಮ್ಮೆ ಸಾವಿರ ಸಾಲೋಂಕೆ ಬಾದ್.ನಹಿ ಬಾರೋಸಾ ಸಾಲೋಂಕೋ ಬಾದ್. ಓ ಬಿ ನಹಿ .ನವ್ ಸಾಲೋಂಕೋ ಬಾದ್.ಎಂದು ಹೇಳುತ್ತಾರೆ ಹೀಗೆ ಹಗುರವಾಗಿ ಬಸವಣ್ಣನ ಇತಿಹಾಸ ಗೊತ್ತಿಲ್ಲದೇ ಮಾತನಾಡಿದ್ದಾರೆ ಸಚಿವರು ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರ ಮಾತುಗಳಿವು.

ಬಸವಣ್ಣನವರ ಇತಿಹಾಸ ಬಗ್ಗೆ ಮಾಹಿತಿ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲ ಜಾಲತಾಣದಲ್ಲಿ ವೈರಲ್ ಆಗಿದೆ. ಇತಿಹಾಸ ಗೊತ್ತಿಲ್ಲದೇ ಸಚಿವರಾದರಾ ಪ್ರಭು ಚವ್ಹಾಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ಹೀಗೆ ಹಗುರವಾಗಿ ಬಸವಣ್ಣನವರ ಬಗ್ಗೆ ಹೀಗೆ ಮಾತನಾಡಿದ ಸಚಿವರ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೀದರ್ ನಲ್ಲಿ ಮಾತನಾಡಿದ ವಿಡಿಯೋ ಈಗ ವೈರಲ್ ಆಗಿದೆ.

ಸದಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುವ ಪ್ರಭು ಚವ್ಹಾಣ ಸಾಹೇಬ್ರು ಇನ್ನಾದರೂ ಸುಧಾರಿಸೊದು ಅವಶ್ಯಕತೆ ಇದೆ.