ಬೆಳಗಾವಿ –
ರಾಜ್ಯದಲ್ಲಿ ಹೊಸ ವರುಷದ ಆಚರಣೆ ಮಾಡುವ ಬಗ್ಗೆ ಮತ್ತು ಕರೊನಾದ ಹಿನ್ನಲೆಯಲ್ಲಿ ರಾತ್ರಿ ಕರ್ಪ್ಯೂ ಬಗ್ಗೆ ಇನ್ನೂ ಯಾವುದೇ ತಿರ್ಮಾನವನ್ನು ಕೈಗೊಂಡಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.ಬೆಳಗಾವಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಧ್ಯ ಕರೊನಾ ಪರಸ್ಥಿತಿ ಕಡಿಮೆಯಾಗುತ್ತಿದೆ ಹೀಗಾಗಿ ಶೀಘ್ರದಲ್ಲಿಯೇ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ರಾಜ್ಯದಲ್ಲಿನ ಪರಸ್ಥಿತಿಯನ್ನು ಪಡೆದುಕೊಳ್ಳುತ್ತೇನೆ. ಹಾಗೇ ಹೊಸ ವರುಷದ ಆಚರಣೆ ಮಾಡಬೇಕಾ ಬೇಡ ಎಂಬ ಬಗ್ಗೆಯೂ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಇನ್ನೂ ಕರ್ನಾಟಕ ಬಂದ್ ಗೆ ರಾಜ್ಯದ ಜನರು ಯಾವುದೇ ಸಹಕಾರವನ್ನು ಕೊಟ್ಟಿಲ್ಲ . ಎಲ್ಲಾ ಜಿಲ್ಲೆಗಳಲ್ಲಿ ಜನ ಜೀವನ, ಬಸ್ ಸಂಚಾರ ಯತಾಸ್ಥಿತಿಯಲ್ಲಿದೆ ಕೆಲವೆಡೆ ಒತ್ತಾಯ ಪೂರ್ವಕವಾಗಿ ಬಂದ ಮಾಡುತ್ತಿರುವವರ ವಿರುದ್ಧ ಪೊಲೀಸರಿಗೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ ಪೊಲೀಸ್ ಮತ್ತು ಸಾರಿಗೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಈ ಮಧ್ಯೆ ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ವಸ್ತು ನಿಷ್ಠ ವರದಿ ತೋರಿಸಿವೆ ನೈಟ್ ಕರ್ಫ್ಯೂ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಆರೋಗ್ಯ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಹಿಂದಿನ ಭಾರಿ ಕಾಂಗ್ರೆಸ್ ಪಕ್ಷದ ಗವರ್ನರ್ ಅದಕ್ಕೆ ಅವಕಾಶ ನೀಡಿಲ್ಲ ಈ ಭಾರಿ ಅದನ್ನು ಜಾರಿಗೆ ತರುವ ಗುರಿ ಹೊಂದಿದ್ದೇವೆ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಬಾರದು ಎಂಬ ಉದ್ದೇಶ ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ನಿಷೇಧದ ಬಗ್ಗೆಯೂ ಕಾಯಿದೆ ಜಾರಿಗೆ ತರುತೇವೆ ಎಂದರು. ಇನ್ನೂ ಡ್ರಗ್ಸ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಿದ್ದೇವೆ ಕಳೆದ 10 ವರ್ಷದಲ್ಲಿ ಎಷ್ಟು ಡ್ರಗ್ ಸಿಜ್ ಆಗಿದ್ದು ಕೇವಲ 10 ತಿಂಗಳಲ್ಲಿ ಡ್ರಗ್ಸ್ ಸಿಜ್ ಮಾಡಿದ್ದೇವೆ ಡ್ರಗ್ಸ್ ವಿರುದ್ಧ ಸಮರ ಮುಂದುವರೆಯಲಿದೆ ಹೊಸ ಹೊಸ ವಿಧಾನದಲ್ಲಿ ಕೊರಿಯರ್, ಡಾರ್ಕ್ ನೆಟ್ ಮೂಲಕ ಡ್ರಗ್ ಬರುತ್ತಿದೆ ಅದರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಅದರಲ್ಲಿ ಶಾಮಿಲ್ ಆದ ಅಧಿಕಾರಿಗಳ ಮೇಲೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.