ಬೆಂಗಳೂರು –
ಮುಂದಿನ ವರ್ಷದಿಂದ ಸಮವಸ್ತ್ರ ಗೊಂದಲ ಇಲ್ಲದಂತೆ ಕಾನೂನು ತರುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೈಕೋರ್ಟ್ ತೀರ್ಪು ಆಧರಿಸಿ ವಿಶೇಷ ಕಾನೂನು ಮುಂದಿನ ವರ್ಷದಿಂದ ಕಾನೂನು ಜಾರಿ ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದ ಸಮಿತಿಯನ್ನು ಶೀಘ್ರದಲ್ಲೇ ರಚಿಸು ತ್ತೇವೆ ಎಂದರು.ಇನ್ನೂ ವಿದ್ಯಾರ್ಥಿಗಳು ಕಾಲೇಜಿಗೆ ಸಮ ವಸ್ತ್ರ ಧರಿಸಿ ಬರಬೇಕು.ಸಮವಸ್ತ್ರ ಇಲ್ಲದೆ ಯಾರಿಗೂ ಕಾಲೇಜಿಗೆ ಅವಕಾಶ ಇಲ್ಲ.ಹಿಜಬ್,ಕೇಸರಿ ಶಾಲು ಯಾವು ದಕ್ಕೂ ಅವಕಾಶ ಇಲ್ಲ. ಹೈಕೋರ್ಟ್ ಆದೇಶ ಎಲ್ಲರೂ ಪಾಲನೆ ಮಾಡಲೇಬೇಕು ಎಂದು ಸೂಚನೆ ನೀಡಿದರು.
ಇನ್ನೂ ಪೂರ್ವ ಸಿದ್ಧತೆ ಪರೀಕ್ಷೆ ಬೇಕಿದರೆ ಮತ್ತೆ ಬರೆಯ ಬಹುದು.ಆದರೆ ಪಬ್ಲಿಕ್ ಪರೀಕ್ಷೆ ನಿಯಮ ಮೀರಿದರೆ ಬರೆಯಲು ಸಾಧ್ಯವಿಲ್ಲ.ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಶಾಲೆಗೆ ಬರಬೇಕು ಎಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.