ವಿಜಯಪುರ –
ಹಾವು ಕಡಿತದಿಂದ ಬಾಲಕನೊರ್ವ ಸಾವಿಗೀಡಾದ ಘಟನೆ ಇಂಡಿ ತಾಲ್ಲೂಕಿನ ಹಡಲ ಸಂಗ ಎಲ್ ಟಿ ನಂ6ರ ಗ್ರಾಮದಲ್ಲಿ ನಡೆದಿದೆ. ಹತ್ತು ವರ್ಷದ ಕುಮಾರ್ ಪ್ರೇಮ ಉಮೇಶ ಜಾಧವ್ ಹಾವು ಕಡಿತದಿಂದ ಮೃತರಾದ ಬಾಲಕ ನಾಗಿದ್ದು ವಿಷಪೂರಿತ ಹಾವು ಕಡಿತದಿಂದ ಮರಣ ಹೊಂದಿದ್ದಾನೆ.
ಇನ್ನೂ ಈ ಒಂದು ಸುದ್ದಿ ಯನ್ನು ತಿಳಿದ ಜೆಡಿಎಸ್ ಪಕ್ಷದ ಬಿ ಡಿ ಪಾಟೀಲ್ ಮತ್ತು ಆಪ್ತರು ಮೃತ ಬಾಲಕನ ಮನೆಗೆ ತೆರಳಿ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು ಸಂಬಂದಿಸಿದ ಇಲಾಖೆ ಮೃತ ಕುಟುಂಬಕ್ಕೆ ಸುಮಾರು 10ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ತಡ ಮಾಡದೇ ಸಂಬಂದಿಸಿದ ಇಲಾಖೆ ಮೃತ ಕುಟುಂಬಕ್ಕೆ 10ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಸಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಒತ್ತಾಯವನ್ನು ಮಾಡಿದರು.
ಸುದ್ದಿ ಸಂತೆ ನ್ಯೂಸ್ ಇಂಡಿ…..