ಬೆಂಗಳೂರು –
?? ಸೇವಾ ನಿರತ ಪದವಿಧರ ಶಿಕ್ಷಕರ ಸಮಸ್ಯೆಗಳಿಗೆ ದಾರಿದೀಪವಾಗಬೇಕಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ನಾಯಕರು ಹಾಗೂ ನೌಕರರ ಸಂಘದ ರಾಜ್ಯ ನಾಯಕರು ಮೌನವಾಗಿರುವದರ ಹಿಂದಿನ ಅಸಲಿ ಕಥೆ ಏನು?

?ಸೇವಾ ನಿರತ ಪದವಿಧರರಿಗೆ ನಿಮ್ಮಿಂದ ನ್ಯಾಯ ಕೊಡಿಸೋಕೆ ಸಾಧ್ಯ ಇಲ್ಲವಾ?. ಹಾಗಿದ್ದರೆ ಶಿಕ್ಷಕರ ಚುನಾವಣೆಯಲ್ಲಿ ತಾವು ಆಡಿದ ಮಾತುಗಳು ಎಲ್ಲಿ ಹೋದವು?
?ಮಾನ್ಯ ಸಂಘಟನಾ ನಾಯಕರೇ ಸದ್ದಿಲ್ಲದೇ ಸರಕಾರ 15000 GPT ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತಿದೆ. ಆದರೂ ನಾಯಕರಾದವರು ತಾವು ಮನವಿ ಕೊಡ್ತಾನೆ ಇದ್ದೀರಿ.ಏನು ಸ್ವಾಮಿ ಇದರ ಕಥೆ?.
?ನಮ್ಮ ಶಿಕ್ಷಕರು ಎಂಥ ಕಠಿಣ ಪರೀಕ್ಷೆ ಎದುರಿಸುವದಕ್ಕೆ ಸಿದ್ದರಿದ್ದಾರೆ. ಕೊನೆ ಪಕ್ಷ 15000 ಹುದ್ದೆಗಳು ನೇಮಕಾ ತಿಗೂ ಮುಂಚೆನೇ ಸೇವಾ ನಿರತ ಪದವಿಧರ ಶಿಕ್ಷಕರಿಗೆ ಪರೀಕ್ಷೆ ಮಾಡಿ 6-8 ಕ್ಕೆ ಬಡ್ತಿ ಪ್ರಕ್ರಿಯೆ ಮುಗಿದ ಮೇಲೆ ಹೊಸ GPT ಹುದ್ದೆ ನೇಮಕ ಮಾಡಿಕೊಳ್ಳುವದಕ್ಕೆ ಒತ್ತಡ ಹಾಕಿ.ಅದೂ ಸಾಧ್ಯವಾಗದಿದ್ದರೆ ನಾಳೆಯಿಂದಾನೆ ನಿಮ್ಮ ರಾಜ್ಯ ಸಂಘದಿಂದ C&R ನಿಯಮ ಇತ್ಯರ್ಥವಾಗದಿದ್ದರೆ 6-8 ಕ್ಕೆ ತರಗತಿ ಬೋಧನೆ ಬಹಿಷ್ಕಾರದ ನಿರ್ಣಯ ಕೈಗೊಳ್ಳಿ.
?ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕಿಂತ ರಾಜ್ಯದ ಎಲ್ಲಾ ಶಿಕ್ಷಕರು ರಾಜ್ಯ ನೌಕರರ ಸಂಘದ ರಾಜ್ಯಧ್ಯಕರಾದ ಮಾನ್ಯ ಷಡಕ್ಷರಿ ಸಾಹೇಬರ ಮೇಲೆ ನಂಬಿಕೆ ಇಟ್ಟಿದ್ದಾರೆ ಅವರೇ ಹೇಳಿದಂತೆ ಬೆಂಗಳೂರಿನಲ್ಲಿ ಶಿಕ್ಷಕರ ಸಮಸ್ಯೆಗಳ ಕುರಿತು ಚರ್ಚಾ ಕಾರ್ಯಕ್ರಮ ಹಮ್ಮಿಕೊಂಡಾಗ ಅವರ ಮೇಲಿನ ಅಭಿಮಾನದಿಂದ ರಾಜ್ಯದ ಮೂಲೆಮೂಲೆಯಿಂದಾನೂ ಶಿಕ್ಷಕರು ತಮ್ಮ ಸ್ವಂತ ಖರ್ಚು ಮಾಡಿಕೊಂಡು ಹೋಗಿ ಪಾಲ್ಗೊಂಡರು.ಅಲ್ಲಿ ಕೊಟ್ಟ ಮಾತಿನ ಪ್ರಕಾರ PST ಶಿಕ್ಷಕರ ಸಮಸ್ಯೆ 21 ದಿನದಲ್ಲಿ ಪರಿಹಾರ ಮಾಡದಿದ್ದರೆ ಹೋರಾ ಟಕ್ಕೆ ಕರೆ ಕೊಡ್ತೀನಿ ಅನ್ನೋ ಮಾತು ಹೇಳಿದ್ದರು ಇವಾಗ ಎಷ್ಟು ತಿಂಗಳುಗಳು ಆದವು?ರಾಜ್ಯ ಶಿಕ್ಷಕರಿಗೆ ಇದು ಯಕ್ಷ ಪ್ರಶ್ನೆಯಾಗಿದೆ.

?ಮಾನ್ಯರೇ ಶಿಕ್ಷಕರು ನಿಮ್ಮ ಮೇಲೆ ಬೆಟ್ಟದಷ್ಟು ವಿಶ್ವಾಸ ಇಟ್ಟಿದ್ದಾರೆ. ಅಲ್ಲದೆ ತುಂಬಾ ಅಭಿಮಾನವನ್ನು ಹೊಂದಿ ದ್ದಾರೆ. ಆ ಅಭಿಮಾನ,ಪ್ರೀತಿ ಹಾಗೆ ಉಳಿಯಬೇಕಾದರೆ ತಾವು ಕೊಟ್ಟ ಮಾತಿನಂತೆ PST ಶಿಕ್ಷಕರ ಸಮಸ್ಯೆ ಇತ್ಯಾರ್ಥ ವಾಗದೆ 15000 ಹೊಸ ನೇಮಕಾತಿ ಮಾಡಿಕೊಳ್ಳುವದಕ್ಕೆ ಅವಕಾಶ ಮಾಡಿಕೊಡಬೇಡಿ.ಕೊಟ್ಟ ಮಾತಿನಂತೆ ಹೋರಾಟ ಕೈಗೊಳ್ಳಿ.ಶಿಕ್ಷಕರನ್ನು ಮಾನಸಿಕವಾಗಿ ಕುಗ್ಗದ ಹಾಗೆ ನೋಡಿಕೊಳ್ಳಿ.
ಆನಂದ ಭೀ ಕೆಂಭಾವಿ ಸ ಶಿ HPS ಹಿರೇಮಸಳಿ ಹಾಗೂ ನಿರ್ದೇಶಕರು KSPSTA ಇಂಡಿ