ಬೆಂಗಳೂರು –
ಬೇಸಿಗೆ ರಜೆ ಬಳಿಕ ರಾಜ್ಯ ಸರ್ಕಾರ ಮೇ 16ರಿಂದ ಶಾಲೆಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು ಜಿಲ್ಲೆಯ ಕೆಲವು ಶಾಲೆಗಳಿಗೆ ಬಾಗಿಲು ತೆರೆಯುವ ಭಾಗ್ಯ ವಿಲ್ಲ.ನೂರಾರು ಜನರಿಗೆ ವಿದ್ಯೆ ಕಲಿಸಿದ್ದ ಕೊಠಡಿಗಳು ಶೂನ್ಯ ವಿದ್ಯಾರ್ಥಿಗಳ ಸಂಖ್ಯೆಯಿಂದ ಖಾಲಿ ಖಾಲಿ ಇರುವಂತೆ ಆಗಿದೆ
ಸರ್ಕಾರಗಳು ಜಾರಿಗೆ ತಂದ ವಿವಿಧ ಯೋಜನೆಗಳು ಫಲಪ್ರದವಾಗುತ್ತಿಲ್ಲ.ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಪ್ರಯೋಜನ ಇಲ್ಲದಂತಾಗಿದೆ.ವಿದ್ಯಾರ್ಥಿಗಳಿಲ್ಲದೇ ಪ್ರತಿವರ್ಷವೂ ಪ್ರಾಥ ಮಿಕ ಶಾಲೆಗಳು ಸಾಲು ಸಾಲಾಗಿ ಬಾಗಿಲು ಮುಚ್ಚುತ್ತಿವೆ.
ಇದಕ್ಕರೆ ತಾಜಾ ಉದಾಹರಣೆ ವಿದ್ಯಾರ್ಥಿಗಳಿಲ್ಲದೇ ಈಗಾಗಲೇ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 2010ರಿಂದ ಇದುವರೆಗೆ 5 ತಾಲೂಕಿನ ಬರೋಬ್ಬರಿ 37 ಸರ್ಕಾರಿ ಶಾಲೆ ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.ಪ್ರಸಕ್ತ ವರ್ಷ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಮೂರು ಶಾಲೆಗಳು ಬಾಗಿಲು ಹಾಕುತ್ತಿವೆ.ಜಿಲ್ಲೆ ಕೇಂದ್ರವಾದ ಕಾರವಾರ ತಾಲೂ ಕಿನಲ್ಲಿ 2 ಹಾಗೂ ಪಕ್ಕದ ಅಂಕೋಲದಲ್ಲಿ 1 ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗದೇ ಮುಚ್ಚಲಾಗಿದೆ. ಈ ಶೈಕ್ಷಣಿಕ ಜಿಲ್ಲೆಯಲ್ಲಿ 5ಕ್ಕಿಂತ ಕಡಿಮೆ ಇರುವ 38 ಶಾಲೆಗಳು ಹಾಗೂ 10ಕ್ಕಿಂತ ಮಕ್ಕಳು ಕಡಿಮೆ ಇರುವ 95 ಶಾಲೆಗಳು ಇವೆ. ಕನ್ನಡ ಶಾಲೆಗಳಲ್ಲಿನ ನಿರಾಸಕ್ತಿಯಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಗಳು ಬಂದ್ ಆಗುವ ಸಾಧ್ಯತೆ ಯೂ ಇದೆ.
ಕಾರವಾರ 21,ಅಂಕೋಲಾ 5,ಕುಮಟಾ 4, ಹೊನ್ನಾವರ 8 ಒಟ್ಟು 38 ಶಾಲೆಗಳಲ್ಲಿ 5 ವಿದ್ಯಾರ್ಥಿಗಳಿಗಿಂತ ಕಡಿಮೆ ಸಂಖ್ಯೆಯಿದೆ. ಕಾರವಾರ 24, ಅಂಕೋಲಾ,ಕುಮಟಾ ತಲಾ 15, ಹೊನ್ನಾವರ 23, ಭಟ್ಕಳದಲ್ಲಿ 18 ಶಾಲೆಗಳಲ್ಲಿ 10ಕ್ಕಿಂತ ವಿದ್ಯಾರ್ಥಿಗಳು ಕಡಿಮೆಯಿದ್ದಾರೆ.ಕನ್ನಡ ಶಾಲೆಗ ಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಯಾಗುತ್ತಿದ್ದು ತಾತ್ಕಾಲಿಕವಾಗಿ ಶಾಲೆಗಳು ಬಾಗಿಲು ಹಾಕುತ್ತಿವೆ ಹೀಗಾಗಿ ಸರ್ಕಾರಿ ಶಾಲೆ ಶಿಕ್ಷಕರತ್ತ ಸಚಿವರು ಗಮನ ಹರಿಸೋದು ಅವಶ್ಯಕತೆ ಇದೆ ಮೊದಲು ಈ ಒಂದು ಕಾರ್ಯವನ್ನು ಸಚಿವರು ಮಾಡಲಿ