ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಕಾರ್ಯಗಾರ ಆರಂಭ – ಅನಾವರಣಗೊಳ್ಳಲಿದೆ ಐದು ಜಿಲ್ಲೆಗಳ ಶಿಕ್ಷಕರ ಪ್ರತಿಭೆ…..

Suddi Sante Desk
ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಕಾರ್ಯಗಾರ ಆರಂಭ – ಅನಾವರಣಗೊಳ್ಳಲಿದೆ ಐದು ಜಿಲ್ಲೆಗಳ ಶಿಕ್ಷಕರ ಪ್ರತಿಭೆ…..

ಧಾರವಾಡ

ಚಿತ್ರಕಲೆಗೆ ವಿಶ್ವಭಾಷೆಯ ಹಿರಿಮೆ ಇದೆ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಕಾರ್ಯಗಾರದ ಉದ್ಘಾಟನೆ ಒಂದು ಕಾಲದ ಬದುಕಿನ ವಿಧಾನ ತಿಳಿಸುವಲ್ಲಿ ಚಿತ್ರಕಲೆ ಪ್ರಮುಖ ಪಾತ್ರವಹಿಸುತ್ತದೆ.ಅದು ಜಗತ್ತಿನ ಎಲ್ಲ ರಾಷ್ಟ್ರಗಳ ಗಡಿಯನ್ನು ದಾಟಿದೆ. ಹಾಗಾಗಿ ಚಿತ್ರಕಲೆಗೆ ವಿಶ್ವಬಾಷೆಯ ಹಿರಿಮೆ ಇದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.

ಅವರು ಇಲ್ಲಿಯ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ‘ಶಾಲಾ ವಿದ್ಯಾರ್ಥಿಗಳಿಗೆ ನಕಲು ಮುಕ್ತ ಪರೀಕ್ಷೆ ಹಾಗೂ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಎಂಬ ವಿಷಯವಾಗಿ ನಗರದ ಆಯುಕ್ತರ ಕಚೇರಿ ಹಮ್ಮಿಕೊಂಡಿರುವ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ನಕಲು ಮುಕ್ತ ಪರೀಕ್ಷೆಗಳು ನಡೆದಾಗಲೇ ವಿದ್ಯಾರ್ಥಿಗಳ ನಿಖರವಾದ ಜ್ಞಾನಾರ್ಜನೆಯ ಕಲಿವಿನಫಲದ ಮಟ್ಟ ಗೋಚರವಾಗುತ್ತದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತಾಗ ಅವರು ರಾಷ್ಟ್ರಬಯಸುವ ಸತ್ಪ್ರಜೆಗ ಳಾಗಲು ಸಾಧ್ಯವಾಗುತ್ತದೆ ಎಂದೂ ಶಿಂತ್ರಿ ನುಡಿದರು.

ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಮಮತಾ ನಾಯಕ ಮಾತನಾಡಿ, ಎಲ್ಲಾ ಪರೀಕ್ಷೆಗಳ ಕುರಿತು ಇಲಾಖೆಗೆ ಗಂಭೀರ ಚಿಂತನೆ ಇದೆ. ವಿದ್ಯಾರ್ಥಿಗ ಳಲ್ಲಿ ನೈತಿಕತೆ ಬೆಳೆದಾಗ ಅವರೆಂದೂ ನಕಲು ಮಾಡುವದಿಲ್ಲ. ವಿದ್ಯಾರ್ಥಿಗಳ ಮನದ ಭಾವನೆ ಗಳ ಅಭಿವ್ಯಕ್ತಿಗೆ ಚಿತ್ರಕಲೆ ಸೂಕ್ತ ವೇದಿಕೆ ಎಂದರು

ಇಲಾಖೆಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಚಿತ್ರಕಲೆ ಮನಸ್ಸಿನ ಏಕಾಗ್ರತೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಚಿತ್ರಕಲೆಯನ್ನು ಪಠ್ಯಪೂರಕ ವಾಗಿ ಬಳಸಿಕೊಂಡಾಗ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು.

ಉಪನಿರ್ದೇಶಕ ಸಂಜೀವ ಬಿಂಗೇರಿ, ಸರಕಾರಿ ಚಿತ್ರಕಲಾ ಕಾಲೇಜು ಪ್ರಾಚಾರ್ಯ ಡಾ. ಬಿ.ಎಚ್. ಕುರಿ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ವೃತ್ತಿಶಿಕ್ಷಣದ ಹಿರಿಯ ಸಹಾಯಕ ನಿರ್ದೇಶಕ ಬಿ.ವೈ. ಭಜಂತ್ರಿ, ಹಿರಿಯ ಸಹಾಯಕ ನಿರ್ದೇಶಕಿ ಪಾರ್ವತಿ ವಸ್ತ್ರದ ಇತರರು ಇದ್ದರು.

ಇ-ಆಡಳಿತಾಧಿಕಾರಿ ಶಾಂತಾ ಮೀಸಿ ಸ್ವಾಗತಿಸಿ ದರು ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪೂರ ವಂದಿಸಿದರು.ಕುರುಬಗಟ್ಟಿ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಬಾಗಲಕೋಟ, ವಿಜಯಪೂರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಚಿಕ್ಕೋಡಿ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ಒಟ್ಟು 50 ಜನ ಚಿತ್ರಕಲಾ ಶಿಕ್ಷಕರು ಆಗಷ್ಟ 5 ರವರೆಗೆ ನಡೆಯುವ ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.