ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತಂತೆ ಈಗಾಗಲೇ ನಿಯಮಗಳು ಹೊರಬಿದ್ದರು ಕೂಡಾ ಇನ್ನೂ ಈವರೆಗೆ ವರ್ಗಾವಣೆ ಆರಂಭವಾಗಿಲ್ಲ ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ಅವೈಜ್ಞಾನಿ ಕವಾಗಿರುವ ಈ ಒಂದು ವರ್ಗಾವಣೆ ನೀತಿಯ ವಿರುದ್ದ ನಾಡಿನ ಶಿಕ್ಷಕ ಅಸಮಾಧಾನಗೊಂಡಿದ್ದು ಈ ಕುರಿತಂತೆ ಮುಂದೇನು ಮಾಡಬೇಕು ಎಂಬ ವಿಚಾರ ದಲ್ಲಿ ಒಂದು ಅಂತಿಮವಾದ ತಿರ್ಮಾನವನ್ನು ತಗೆದು ಕೊಂಡು ಹೋರಾಟಕ್ಕೆ ಸಿದ್ದರಾಗಿದ್ದು ಇನ್ನೇನು ಬೆಂಗಳೂರು ಚಲೋ ಸೇರಿದಂತೆ ಪ್ರತಿಭಟನೆ ಮಾಡಬೇಕು ಎನ್ನುವಷ್ಟರಲ್ಲಿ ಮುಖ್ಯಮಂತ್ರಿ ಶಿಕ್ಷಣ ಸಚಿವರು ಬದಲಾದರು.ಸಧ್ಯ ನೂತನ ಮುಖ್ಯಮಂ ತ್ರಿ ಬಂದಾಯಿತು ಇವತ್ತು ಇಲ್ಲವೇ ನಾಳೆ ಇಲಾಖೆಗೆ ಹೊಸ ಶಿಕ್ಷಣ ಸಚಿವರು ಕೂಡಾ ಬರುತ್ತಾರೆ ಹೀಗಾಗಿ ತುಂಬಾ ದಿನ ಕಾಯುತ್ತಿದ್ದರೆ ಉಪಯೋಗವಿಲ್ಲ ವೆಂದು ಈ ಒಂದು ಬೆಂಗಳೂರು ಚಲೋ ಹೋರಾಟ ಕುರಿತಂತೆ ಆಗಸ್ಟ್ 5 ರಂದು ವೆಬಿನಾರ್ ಸಭೆಯನ್ನು ಕರೆಯಲಾಗಿದೆ.
ಅಂದು ಸಂಜೆ 7 ಗಂಟೆಗೆ ನಡೆಯಲಿರುವ ಈ ಒಂದು ಸಭೆಯಲ್ಲಿ ವರ್ಗಾವಣೆಯ ನಿರೀಕ್ಷೆಯಲ್ಲಿರುವ ನಾಡಿನ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಪಾಲ್ಗೊ ಳ್ಳಲಿದ್ದು ಅಂದೇ ದಿನಾಂಕ ಮತ್ತು ಮುಂದಿನ ಹೋರಾಟದ ರೂಪರೇಷೆಗಳು ನಿರ್ಧಾರವಾಗಲಿದ್ದು ಶಿಕ್ಷಕರು ಬೆಂಗಳೂರು ಚಲೋ ವೇದಿಕೆಗೆ ಇಳಿಯುವ ಮುನ್ನವೇ ರಾಜ್ಯಕ್ಕೆ ನೂತನವಾಗಿ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಕ್ಷಕರ ವರ್ಗಾವಣೆ ಕುರಿತಂತೆ ಚರ್ಚಿಸಿ ಒಂದು ಒಳ್ಳೇಯ ತಿರ್ಮಾನವನ್ನು ತಗೆದುಕೊಳ್ಳೊದುಅವಶ್ಯಕವಿದೆ ಇಲ್ಲವಾದರೆ ಶಿಕ್ಷಕರು ದೊಡ್ಡ ಪ್ರಮಾಣದಲ್ಲಿ ಬೀದಿ ಗಿಳಿಯಲಿದ್ದಾರೆ.ಇದನ್ನು ವರ್ಗಾವಣೆಗಾಗಿ ಬೆಂಗಳೂರು ಚಲೋ ವೇದಿಕೆ ಹಮ್ಮಿಕೊಂಡಿದೆ