ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಅವೈಜ್ಞಾನಿಕವಾದ ಶಿಕ್ಷಕರ ವರ್ಗಾವಣೆಯ ನೀತಿ ಒಂದು ಕಡೆಯಾದರೆ ಇನ್ನೂ ಒಂದು ಕಡೆಗೆ ಹೆಂಡತಿ,ಮತ್ತೊಂದು ಕಡೆಗೆ ಪತಿ ಇನ್ನೊಂದು ಕಡೆಗೆ ಮಕ್ಕಳು ಆ ಕಡೆ ಮನೆ ಈ ಕಡೆ ಪೋಷಕರು ಹೀಗೆ ದಿಕ್ಕಾಪಾಲಾಗಿ ಸೇವೆಗೆ ಸೇರಿದಾಗಿ ನಿಂದ ಈವರೆಗೆ ಒಮ್ಮೆಯಾದರೂ ಎಲ್ಲಾ ಇಲಾಖೆಗಳ ಹಾಗೇ ಸ್ವತಂ ಜಿಲ್ಲೆಗೆ ಹೋಗುತ್ತವೆ ವರ್ಗಾವಣೆಯಾಗುತ್ತದೆ ಎಂದುಕೊಂಡಿದ್ದ ಶಿಕ್ಷಕರು ಕಾದು ಕಾದು ಬೇಸತ್ತ ಶಿಕ್ಷಕರು ಈಗ ಅಂತಿಮವಾಗಿ OTS ವಿಚಾರ ಕುರಿತಂತೆ ಹೋರಾಟ ಮಾಡಲು ಮುಂದಾಗಿದ್ದಾರೆ.

ಹೌದು ಬೇರೆ ವಿಧದಲ್ಲಿ ವರ್ಗಾವಣೆ ಹೊಂದಿ ನಮ್ಮ ನಮ್ಮ ಊರುಗಳಿಗೆ ಸೇರಲೇಬೇಕು ಎಂದಾದರೆ ನಾವು ನಿರಂ ತರವಾಗಿ ಹೋರಾಟವನ್ನ ಮಾಡಲೇಬೇಕು ಅದಕ್ಕಾಗಿ ಏಪ್ರಿಲ್ 16 ಕ್ಕೆ ತಪ್ಪದೇ ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿ ನಲ್ಲಿ ಸೇರೋಣ ಮೂರು ನಾಲ್ಕು ದಿನ ಈ ಹೋರಾಟಕ್ಕೆ ಮೀಸಲಿಡೋಣ ಹಾಗೇ ಸಧ್ಯ ಹೇಗೂ ರಜೆ ಇದೆ ಹೀಗಾಗಿ ಈ ಒಂದು ವಿಚಾರದಲ್ಲಿ ಯಾರು ಕೂಡಾ ಹಿಂದೆ ಮುಂದೆ ನೊಡದೇ ಬನ್ನಿ ಎಂದು ಶಿಕ್ಷಕರು ಸಾಮಾಜಿಕ ಜಾಲ ತಾಣಗ ಳಲ್ಲಿ ಕರೆ ನೀಡಿದ್ದಾರೆ. ಈ ಕುರಿತಂತೆ ಆಂದೋಲನ ಕೂಡಾ ಆಗುತ್ತಿದ್ದು ಹೋರಾಟಕ್ಕೆ ತೆರೆ ಮರೆಯಲ್ಲಿ ಸಿದ್ದರಾಗುತ್ತಿದ್ದು ಈ ಮಧ್ಯೆ ಹೋರಾಟದ ಕುರಿತಂತೆ ಪೈನಲ್ ತಿರ್ಮಾನ ವನ್ನು ತಗೆದುಕೊಳ್ಳಲು ನಾಳೆ ಪೂರ್ವಭಾವಿಯಾಗಿ ನಾಳೆ 7:45 ಕ್ಕೆ ಮೀಟಿಂಗ್ ಮಾಡಲಿದ್ದು ಇದರಲ್ಲಿ ಅಂತಿಮ ಚರ್ಚೆಯ ನಂತರ ಇತ್ತ ತಗೆದುಕೊಂಡ ನಿರ್ಧಾರಗಳನ್ನು ಮುಂದಿಟ್ಟುಕೊಂಡು ಹೋರಾಟ ಆರೆಂಭವಾಗಲಿದೆ.