ಬೆಂಗಳೂರು ಚಲೋ ಗೆ ಮಹೂರ್ತ ನಿಗದಿ – ತಮ್ಮ ದಿನಾಚರಣೆಯನ್ನು ಬಿಟ್ಟು ಹೋರಾಟಕ್ಕೆ ಮುಂದಾದರು ಗ್ರಾಮೀಣ ಶಿಕ್ಷಕರ ಸಂಘದ ನೇತ್ರತ್ವದಲ್ಲಿ…..

Suddi Sante Desk

ಬೆಂಗಳೂರು –

ಶಿಕ್ಷಕರ ಸಮಸ್ಯೆಗಳ ಕುರಿತಂತೆ ಕಳೆದ ಹಲವು ದಿನಗಳಿಂದ ಬೆಂಗಳೂರು ಚಲೋ ಮಾಡುವ ಕುರಿತಂತೆ ಚರ್ಚೆ ಆಗುತ್ತಲೆ ಇತ್ತು. ಕೊನೆಗೂ ಈ ಒಂದು ಹೋರಾಟಕ್ಕೆ ಮಹೂರ್ತ ಫೀಕ್ಸ್ ಆಗಿದೆ.

ಹೌದು ಇಂದು ಸಂಜೆ ನಡೆದ ವೆಬಿನಾರ್ ಸಭೆಯಲ್ಲಿ ಸಪ್ಬಂಬರ್ 5 ರಂದು ಬೆಂಗಳೂರಿನಲ್ಲಿ ಹೋರಾಟ ಮಾಡಲು ನಿರ್ಧಾರವನ್ನು ತಗೆದುಕೊಳ್ಳಲಾಯಿತು. ಹೌದು ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ನೇತ್ರತ್ವದಲ್ಲಿ ಈ ಒಂದು ಹೋರಾಟವನ್ನು ಮಾಡಲು ಒಮ್ಮತದ ತಿರ್ಮಾನವನ್ನು ತಗೆದುಕೊಳ್ಳಲಾಯಿತು.ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ನೇತ್ರತ್ವದಲ್ಲಿ ಈ ಒಂದು ಹೋರಾಟವನ್ನು ಮಾಡಲು ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಒಂದು ಬಾರಿ ವರ್ಗಾವಣೆ (OTS)

ಹೌದು ಸಾಮಾನ್ಯವಾಗಿ ನೌಕರಿ ಸೇರಿದಾಗಿನಿಂದ ಹಿಡಿದುಕೊಂಡು ಈವರೆಗೆ ರಾಜ್ಯದಲ್ಲಿ ಬಹುತೇಕ ಶಿಕ್ಷಕರು ನೌಕರಿ ಒಂದು ಕಡೆ ಮಾಡುತ್ತಿದ್ದಾರೆ ಹೆಂಡತಿ ಒಂದು ಕಡೆ ಮಕ್ಕಳು ಮತ್ತೊಂದು ಕಡೆಗೆ ತಂದೆ ತಾಯಿಗಳು ಇನ್ನೊಂದು ಕಡೆಗೆ ದಿಕ್ಕಿಗೊಬ್ಬರಾಗಿ ಇದ್ದುಕೊಂಡು ವೃತ್ತಿಯನ್ನು ಮಾಡುತ್ತಿದ್ದಾರೆ. ಊರು ತಂದೆ ತಾಯಿ ಬಂಧು ಬಳಗ ಕುಟುಂಬದವರನ್ನು ಮಕ್ಕಳನ್ನು ಹೀಗೆ ಎಲ್ಲರನ್ನೂ ಬಿಟ್ಟು ದಿಕ್ಕಾಪಾಲಾಗಿದ್ದಾರೆ ಶಿಕ್ಷಕರು. ಹೀಗಿರುವಾಗ ನಮಗೂ ಒಮ್ಮೆಯಾದರೂ ಕೇಳಿದಲ್ಲಿ ವರ್ಗಾವಣೆ ಕೊಡಿ ಕೊಡಿ ಎಂದು ಕೇಳಿ ಕೇಳಿ ಬೇಸತ್ತಿದ್ದಾರೆ ಶಿಕ್ಷಕ ಬಂಧುಗಳು

ಬೆಂಗಳೂರು ಚಲೋ ಗೆ ಮಹೂರ್ತ ಫೀಕ್ಸ್

ಹೌದು ಕಳೆದ ಹಲವಾರು ದಿನಗಳಿಂದ ಈಕುರಿತಂತೆ ಚರ್ಚೆಯಾಗುತ್ತಿತ್ತು ಕೊನೆಗೂ ದಿನಾಂಕ ನಿಗದಿಯಾಗಿದೆ.ಸಪ್ಟಂಬರ್ 5 ರಂದು ಬೆಂಗಳೂರಿಗೆ ತೆರಳಲು ನಿರ್ಧಾರವನ್ನು ಮಾಡಲಾಗಿದ್ದು ಮತ್ತ್ಯಾಕೆ ತಡ ನಿಮ್ಮ ಬೇಡಿಕೆಗಳ ಕುರಿತಂತೆ ನೀವು ಕೇಳೊದು ತಪ್ಪಾ ಬಂಧುಗಳೇ ಈಗಾಗಲೇ ಈ ಒಂದು ಹೋರಾಟಕ್ಕೆ ಮುಂದಾಗಿರುವ ಕೈಗಳಿಗೆ ಶಕ್ತಿ ತುಂಬಿ ಅಂದಾಗ ಮಾತ್ರ ಹೋರಾಟ ಯಶಶ್ವಿಯಾಗುತ್ತದೆ ಇಲ್ಲವಾದರೆ…….ಹಾಗೇ ಆಗೋದು ಬೇಡ ಏನೇ ಆಗಲಿ ಬೆಂಗಳೂರು ತಲುಪುವ ಮುನ್ನವೇ ಇನ್ನಾದರೂ ಎಚ್ಚೇತ್ತುಕೊಂಡು ಶಿಕ್ಷಣ ಸಚಿವರು ಈ ಕೂಡಲೇ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ,ಎಲ್ ಐ ಲಕ್ಕಮ್ಮನವರ ಮಲ್ಲಿಕಾರ್ಜುನ ಉಪ್ಪಿನ,ಆರ್ ನಾರಾಯಣಸ್ವಾಮಿ ಚಿಂತಾಮಣಿ.ಗುರು ತಿಗಡಿ,ಎಸ್ ಎಫ್ ಪಾಟೀಲ ಸೇರಿದಂತೆ ಸಂಘದ ಹಲವು ಹಿರಿಯರನ್ನು ಆಹ್ವಾನಿಸಿ ಸಮಸ್ಯೆಗಳ ಕುರಿತಂತೆ ಮಾತನಾಡಿ ಬಗೆ ಹರಿಸಲಿ ಇಲ್ಲವಾದರೆ ಶಿಕ್ಷಕರ ದಿನಾಚರಣೆ ದಿನ ದಂದು ಶಿಕ್ಷಕರು ಬೀದಿಗಿಳಿದು ಹೋರಾಟ ಮಾಡಿ ದರೆ ಇಲಾಖೆಗೆ ದೊಡ್ಡ ಸಮಸ್ಯೆಯಾಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.