ದಾವಣಗೆರೆ –
ಮಹಾಮಾರಿ ಕರೋನದ ಆತಂಕದ ನಡುವೆಯೂ ಆರಂಭಗೊಂಡ SSLC ಪರೀಕ್ಷೆಗೆ ಹೆದರಿಕೊಂಡು ಮನೆಯಲ್ಲೇ ಕುಳಿತ ವಿದ್ಯಾರ್ಥಿನಿಯನ್ನು ಕರೆದು ಕೊಂಡು ಬಂದು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಕರು ಪರೀಕ್ಷೆ ಬರೆಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ನಡೆದಿದೆ.ಸಂತೆಬೆನ್ನೂರಿನಲ್ಲಿ ರಜಿಯಾಭಾನು SSLC ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಹೋಗದೇ ಹೆದರಿ ಮನೆಯಲ್ಲೇ ಕುಳಿತಿದ್ದಳು.ಈ ಮಾಹಿತಿ ಸಿಕ್ಕ ತಕ್ಷಣ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ವಿದ್ಯಾರ್ಥಿನಿಯ ಮನೆಗೆ ತೆರಳಿ ವಿಚಾರಣೆ ನಡೆಸಿ ದರು.
ಪರೀಕ್ಷೆಗೆ ಹಾಜರಾಗದ ಬಗ್ಗೆ ಬಾಲಕಿ ಪೋಷಕರಿಂದ ಮಾಹಿತಿ ಪಡೆದರು.ಆಕೆ ಭಯದಿಂದ ಮನೆಯಲ್ಲೇ ಉಳಿದಿದ್ದಾಗಿ ಬಾಲಕಿಯ ಪೋಷಕರು ತಿಳಿಸಿದರು ಆಗ ಮಂಜುನಾಥ್‌ರವರು ರಜಿಯಾಭಾನುಗೆ ಬುದ್ಧಿ ವಾದ ಹೇಳಿ ಧೈರ್ಯ ತುಂಬಿದರು.ಆಕೆಯನ್ನು ಪರೀಕ್ಷೆ ಬರೆಯಲು ಒಪ್ಪಿಸಿ ತಾವೇ ತಮ್ಮ ವಾಹನ ದಲ್ಲಿ ಸಂತೆಬೆನ್ನೂರಿನ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಆಕೆಯಿಂದ ಪರೀಕ್ಷೆ ಬರೆಯಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು