ತುಮರಿ –
ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನು ನೀಡಿದ ಸಿಗಂದೂರಿನ ದೇವಸ್ಥಾನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾ ಗಿದೆ.ಹೌದು ಸಾಗರ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನು ಸಿಗಂದೂರು ದೇವಸ್ಥಾನ ಸಮಿತಿ ಯಿಂದ ನೀಡಲಾಗಿದೆ ಈ ಒಂದು ಸಾಮಾಜಿಕ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ ಅವರು ಮೆಚ್ಚುಗೆ ವ್ಯಕ್ತಪಡಿ ಸಿದ್ದಾರೆ.ಈ ಕುರಿತು ದೇವಸ್ಥಾನದ ಧರ್ಮಾಧಿಕಾರಿ ಎಸ್.ರಾಮಪ್ಪ ಅವರಿಗೆ ಪತ್ರವನ್ನು ಬರೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸರ್ಕಾರಿ ಶಾಲೆಗಳ ಉಳಿವಿಗೆ ದೇವಸ್ಥಾನ ಸಮಿತಿಯ ಕೊಡುಗೆ ಶ್ಲಾಘನೀಯ.ಈ ಮೂಲಕ ಸರ್ಕಾರಿ ಶಾಲೆಗಳು ಹೊಸತನ ಕಾಣಲು ಸಾಧ್ಯವಾಗಿದ್ದು, ದೇವಸ್ಥಾ ನದ ಕಾರ್ಯಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಸಿಗಂದೂರು ದೇವಸ್ಥಾನ ಸಮಿತಿಯು ತಾಲ್ಲೂಕಿನ ಕರೂರು ಹೋಬಳಿಯ ಆಯ್ದ ಸರ್ಕಾರಿ ಶಾಲೆಗಳನ್ನು ಅಂದಗೊಳಿಸಲು ಶ್ರಮಿಸಿತ್ತು.ಈ ಕಾರ್ಯಕ್ಕೆ ರಾಜ್ಯದಾ ದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಈ ಭಾಗದಲ್ಲಿ ಈಗಾಗಲೇ 6 ಸರ್ಕಾರಿ ಶಾಲೆಗಳ ಸುಣ್ಣ-ಬಣ್ಣ ಕಾರ್ಯ ಸಂಪೂರ್ಣವಾಗಿದೆ.ಪ್ರತಿ ತಿಂಗಳು ಒಂದು ಶಾಲೆಗೆ ಹೊಸ ರೂಪ ನೀಡಲಾಗುತ್ತಿದೆ.ಸದ್ಯ 7ನೇ ಶಾಲೆಗೆ ಹೊಸ ರೂಪ ನೀಡಲು ತಯಾರಿ ನಡೆದಿದೆ. ಇದಕ್ಕಾಗಿ ಇಲ್ಲಿನ 15 ಜನ ಶಿಕ್ಷಕರ ತಂಡ ಶ್ರಮಿಸುತ್ತಿದೆ.