ಚಿಕ್ಕಮಗಳೂರು –
ಶಿಕ್ಷಕರೊಬ್ಬರನ್ನು ಬೇರೊಂದು ಶಾಲೆಗೆ ನಿಯೋಜನೆ ಮಾಡಲು 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹೌದು ಈ ಒಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಹೌದು ಜಿಲ್ಲೆಯ ಕಡೂರಿನ ಬಿಇಒ ಕೆ ಎನ್ ಜಯಣ್ಣ ಅವರೇ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಕಡೂರು ತಾಲೂಕಿನ ಜಿ.ತಿಮ್ಮಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿದ್ದ ರಾಜಪ್ಪ ಅವರನ್ನು ಗರ್ಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಲು ಕ್ಷೇತ್ರ ಶಿಕ್ಷಣಾ ಕಾರಿಗಳು ಹಣದ ಬೇಡಿಕೆ ಇಟ್ಟಿದ್ದರು ಈ ಇಂದು ವಿಚಾರ ಕುರಿತಂತೆ ಶಿಕ್ಷಕ ಲೋಕಾಯುಕ್ತರಿಗೆ ದೂರನ್ನು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ಇತ್ತ ಈ ಸಂಬಂಧ ಶಿಕ್ಷಕ ರಾಜಪ್ಪ ಅವರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿ ತಿಮ್ಮಾಪುರ ಗೇಟ್‌ನಲ್ಲಿ 15 ಸಾವಿರ ಲಂಚ ತಗೆದುಕೊಳ್ಳು ವಾಗ ಸಿಕ್ಕಿ ಬಿದ್ದಿದ್ದಾರೆ.
ಹಣವನ್ನು ತಗೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಬಿಇಒ.ಶಿಕ್ಷಕರೊಬ್ಬರಿಂದ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಯಣ್ಣ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲೆಗೆ ಕೆಡವಿದ್ದು ಚಿಕ್ಕಮಗಳೂರು ಜಿಲ್ಲೆ ಕಡೂರು ಬಿಇಒ ಕೆ.ಎನ್. ಜಯಣ್ಣ ಅವರು ಶಾಲೆಗೆ ನಿಯೋಜನೆ ಮಾಡಲು ಶಿಕ್ಷಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಕರ ರಾಜಪ್ಪ ಅವರಿಂದ 15 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ. ಕಡೂರು ತಾಲೂಕಿನ ಜಿ. ತಿಮ್ಮಾಪುರ ಗೇಟ್ ಬಳಿ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮ ಲೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಸಧ್ಯ ಇವರನ್ನು ವಶಕ್ಕೆ ತಗೆದುಕೊಂಡಿರುವ ಲೋಕಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿದ್ದಾರೆ.