ಆಳಂದ –
ಸರ್ಕಾರಿ ಮತ್ತು ಅನುದಾನಿತ 1ರಿಂದ 8ನೇ ತರಗತಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಬಿಸಿ ಯೂಟದೊಂದಿಗೆ ವಾರಕ್ಕೆ ಎರಡು ಬಾರಿ ಕಡ್ಡಾಯವಾಗಿ ಮಕ್ಕಳ ಬೇಡಿಕೆಯಂತೆ ಮೊಟ್ಟೆ,ಚಿಕ್ಕಿ,ಬಾಳೆಹಣ್ಣು ವಿತರಿಸ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲ ಮಡಿ ತಾಲೂಕಿನ ಶಾಲಾ ಮುಖ್ಯಸ್ಥರಿಗೆ ಸೂಚಿಸಿದರು ಪಟ್ಟಣ ಹೊರವಲಯದ ಸಂಗೋಳಗಿ ಜಿ.ಪುನರ್ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದೊಂದಿಗೆ ವಾರಕ್ಕೆ ಎರಡು ಬಾರಿ ಮೊಟ್ಟೆ, ಬಾಳೆಹಣ್ಣು,ಚಿಕ್ಕೆ ವಿತರಿಸುವ ಸಂದರ್ಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬಿಸಿಯೂಟ ಯೋಜನೆ ಆರಂಭವಾಗಿದ್ದು ಈ ಪೈಕಿ ಬುಧವಾರದಿಂದ ವಾರಕ್ಕೆ ಎರಡು ಬಾರಿ 1ರಿಂದ 8ನೇ ತರಗತಿ ಮಕ್ಕಳಿಗೆ ಮೊಟ್ಟೆ, ಚಿಕ್ಕೆ, ಬಾಳೆಹಣ್ಣು ವಿತರಣೆಯನ್ನು ಎಲ್ಲ ಶಾಲೆ ಗಳಲ್ಲಿಯೂ ಆರಂಭಿಸಿ ಮಕ್ಕಳ ಬೇಡಿಕೆಗೆ ಅನುಸಾರವಾಗಿ ಮೊಟ್ಟೆ, ಬಾಳೆಹಣ್ಣು ಅಥವಾ ಚಿಕ್ಕಿ ಹೀಗೆ ಒಂದನ್ನು ಬಿಸಿ ಯೂಟದೊಂದಿಗೆ ಕಡ್ಡಾಯವಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಆಯಾ ಶಾಲೆಗಳ ಮುಖ್ಯಸ್ಥರು ಮಕ್ಕಳಿಗೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಕಡ್ಡಾಯವಾಗಿ ಸಕಾಲಕ್ಕೆ ಪೂರೈಸಲು ಹಿಂದೇಟು ಹಾಕಿದರೆ ಶಿಸ್ತು ಕ್ರಮ ಎದುರಿಸ ಬೇಕಾಗುತ್ತದೆ.ಸಮಯಕ್ಕೆ ಶಾಲೆಗೆ ಹೋಗಿ ಪಾಠ ಮಾಡು ವುದನ್ನು ರೂಡಿಸಿಕೊಳ್ಳಬೇಕು.ಮಕ್ಕಳ ಶೈಕ್ಷಣಿಕ ಗುಣಮ ಟ್ಟದ ಸುಧಾರಣೆಗೆ ಹೆಚ್ಚಿನ ನಿಗಾವಹಿಸಬೇಕು.ಇಲ್ಲದಿದ್ದರೆ ಮೇಲಧಿಕಾರಿಗಳಿಗೆ ಕ್ರಮ ಕೈಗೊಂಡ ವರದಿ ಸಲ್ಲಿಸಲಾಗು ವುದು ಎಂದು ಎಚ್ಚರಿಕೆ ನೀಡಿದರು.ಈಗಿನಿಂದಲೇ ಶಾಲೆ ಗಳ ಮುಖ್ಯಸ್ಥರು ಸರಿಯಾಗಿ ಕರ್ತವ್ಯ ನಿರ್ವಹಿಸಿ, ತಾಲೂ ಕಿನ ಶೈಕ್ಷಣಿಗ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಸಮನ್ವಯಾಧಿಕಾರಿ ಬಸವರಾಜ ದೊಡ್ಡಮನಿ, ಶಾಲೆ ಮುಖ್ಯ ಶಿಕ್ಷಕ ವಿಜಯ ರೆಡ್ಡಿ,ಕೋರಳ್ಳಿ ಸಿಆರ್‌ಪಿ ಅಂಬರಾಯ ಕಾಂಬಳೆ,ಜಿಡಗಾ ಸಿಆರ್‌ಪಿ ಸೈಫನ್ ಡಾಂಗೆ, ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.