ಬೆಂಗಳೂರು –
ಬಿಇಓ ರವಿ ಭಜಂತ್ರಿ ಅವರು ಬಹುಮುಖದ ಪ್ರತಿಭೆ ಅನ್ನೊದು ಮತ್ತೊಮ್ಮೆ ಸಾಕ್ಷಿಯಾಗಿದೆ.ಹೌದು ಕೇವಲ ಇಲಾಖೆಯಲ್ಲಿ ಅಧಿಕಾರಿ ಅಷ್ಟೇ ಆಗದೆ ಈಗಾಗಲೇ ಅವರು ತಮ್ಮ ಕಾರ್ಯದ ಮೂಲಕ ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿದ್ದು ಇದರೊಂ ದಿಗೆ ಹಾಸ್ಯದ ಮೂಲಕವೂ ಮನೆ ಮಾತಾಗಿದ್ದು ಈಗ ಹಾಡುಗಾರಿಕೆಯ ಮೂಲಕವು ಬಹುಮುಖದ ಪ್ರತಿಭೆ ಯಾಗಿ ವೈರಲ್ ಆಗಿದ್ದಾರೆ

ಹೌದು ಸಂಕ್ರಾಂತಿ ದಿನದಂದು ಇವರು ಹಾಡೊಂದನ್ನು ಹಾಡಿದ್ದು ತಂದೂರಿಯ ಈ ಒಂದು ಹಾಡು ಈಗ ಸಖತ್ ವೈರಲ್ ಆಗಿದೆ
ಇತ್ತೀಚೆಗೆ ಹೆಚ್ಚಾಗುತ್ತಿರುವ ತಂದೂರಿ ರೊಟ್ಟಿ ಕುರಿತಾದ ಅದ್ಭುತ ಹಾಡನ್ನು ಇವರು ಹಾಡಿದ್ದು ಇದರೊಂದಿಗೆ ಹಾಡು ಗಾರಿಕೆಯಲ್ಲೂ ನಾವೇನು ಕಡಿಮೆ ಇಲ್ಲ ಎಂಬೊಂದನ್ನು ತೋರಿಸಿಕೊಟ್ಟು ಇದರೊಂದಿಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ


ಬಹುಮುಖ ಪ್ರತಿಭಾವಂತರು,ಸರಳ ನುಡಿ,ಸೇವೆಯಲ್ಲಿ ಸರ್ವಸ್ವ ಕಾಣುತ್ತ ತಾಯಿ ಶಾರದೆಯ ಸೇವೆಯನ್ನು ಮಾಡುತ್ತ ಬೆಳಗಾವಿ ನಗರದ ಸರ್ವ ಶಿಕ್ಷಕರ ಪ್ರೇರಣಾ ಶಕ್ತಿ ಯಾಗಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವ BEO ರವಿ ಭಜಂತ್ರಿ ಅವರಿಗೆ ಅಭಿನಂದನೆಗಳು