ಹೆಬ್ಬಳ್ಳಿ –
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರ ಕನ್ನಡ ಮಾದರಿ ಹೆಣ್ಣು ಮಕ್ಕಳ ಶಾಲೆಯನ್ನು, ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಾದ ಉಮೇಶ ಬಮ್ಮಕ್ಕನವರ ಅವರ ಶಿಫಾರಸ್ಸಿನಿಂದಾಗಿ ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಹ ನಿರ್ದೇಶಕರು ಆಡಳಿತ ಮಾನ್ಯ ವಾಲ್ಟರ್ ಡಿ ಮೆಲೋ ಹಾಗೂ ರಾಜು ನಾಯ್ಕ ಪ್ರಾಚಾರ್ಯರು ಹಾಗೂ ಸಹ ನಿರ್ದೇಶಕರು ಅಭಿವೃದ್ಧಿ.CTE ಬೆಳಗಾವಿ ಹಾಗೂ ಮಾನ್ಯ ನಾಗರಾಜ ರೀಡರ್ CTE ಬೆಳಗಾವಿ ಹಾಗೂ ಎಸ್ ಡಿ ಗಾಂಜಿ ಪ್ರಾಚಾರ್ಯರು DIET ಗದಗ ಹಾಗೂ ಪ್ಯಾಟಿ ಬೈಲಹೊಂಗಲ ಬಿಇಒ.ಹಾಗೂ ವಿನೋದ ನಾಯ್ಕ ಶಿಕ್ಷಣಾ ಧಿಕಾರಿಗಳು ಅಕ್ಷರ ದಾಸೋಹ ಜಿಲ್ಲಾ ಪಂಚಾಯತ ಕಾರವಾರ ಹಾಗೂ ಚಳಿಗೇರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ತಾಲೂಕ ಪಂಚಾಯತ ಬೆಳಗಾವಿ ಇವರ ತಂಡ ಶಾಲೆಗೆ ಭೇಟಿ ನೀಡಿ ಭೌತಿಕ ಶೈಕ್ಷಣಿಕ ಪ್ರಗತಿ ಪರಿಶೀ ಲಿಸಿದರು.
ಶಾಲೆಯ ಎಲ್ಲಾ ತರಗತಿಗಳನ್ನು ಪರಿಶೀಲಿಸಿ ಮಕ್ಕಳ ಕಲಿಕೆ ಹಾಗೂ ಶಿಕ್ಷಕರು ಮಾಡಿಕೊಂಡ ಕಲಿಕಾ ಚೇತರಿಕೆ ಸೇರಿ ದಂತೆ ಎಲ್ಲಾ ಮಕ್ಕಳ ಕಲಿಕೆಯ ಮಾಹಿತಿಯನ್ನು ದಾಖಲಿ ಸಿಕೊಳ್ಳುವ ಮೂಲಕ ಶಾಲಾಭಿವೃದ್ದಿ ಸಮಿತಿಯ ಪದಾಧಿ ಕಾರಿಗಳ ಸಭೆಯನ್ನು ಸಹ ಜರುಗಿಸಿ ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳ ಸಲಹೆಗಳನ್ನು ಕ್ರೋಡೀಕರಿಸಿ ದರು.
ಶಾಲೆಯ ಸರ್ವಾಂಗೀಣ ಪ್ರಗತಿಯ ಕುರಿತು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ ತಂಡವು ಶಿಕ್ಷಕರ ಜೊತೆ ಸಹ ಶಿಕ್ಷಕರ ಜೊತೆಗೆ ಸಂವಾದವನ್ನು ನಡೆಸಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಉಮೇಶ ಬೊಮ್ಮಕ್ಕನವರ ಮತ್ತು ಸಿ ಆರ್ ಪಿ ಯವರಾದ ಎಮ್ ಎನ್ ಮುಲ್ಲಾನವರ ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಹಾಗೂ ಎಲ್ಲಾ ಶಿಕ್ಷಕರು ಹಾಜರಿದ್ದರು.