ಯಾದಗಿರಿ –
ಶಹಾಪುರ ತಾಲ್ಲೂಕಿನ ಗೋಗಿ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಪಾಲಕರು ಒತ್ತಾಯಿಸಿದ್ದಾರೆ. ಶಹಾಪುರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಅವರು ಶಾಲೆಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿ ನಿಯರಿಗೆ ಹಿಜಾಬ್ ತೆಗೆಯುವಂತೆ ಸೂಚಿಸಿದ್ದಾರೆ.ಈ ವಿಚಾರ ತಿಳಿದು ಶಾಲೆ ಬಳಿ ಜಮಾಯಿಸಿದ ಪೋಷಕರು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಏರು ಧ್ವನಿಯಲ್ಲಿ ಆಗ್ರಹಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಹೈಕೋರ್ಟ್ ಮಧ್ಯಂತರ ಆದೇಶ ಪಾಲನೆ ಮಾಡಬೇಕಾ ಗಿದೆ.ಶಿಕ್ಷಣ ಇಲಾಖೆಯ ಸುತ್ತೊಲೆ ಪಾಲನೆ ಮಾಡಬೇಕು. ಹಿಜಾಬ್ ತೆಗೆಯದಿದ್ದರೆ ವಾಪಾಸ್ ಹೋಗಿ ಎಂದರು ಹೀಗಾಗಿ ಅಸಮಾಧಾನಗೊಂಡ ಪೋಷಕರು ಅಧಿಕಾರಿ ಗಳಿಗೆ ಮುತ್ತಿಗೆ ಹಾಕಿದರು.

ಈ ವಿಚಾರವಾಗಿ ಸುಮಾರು 2 ಗಂಟೆ ವಾಗ್ವಾದ ನಡೆಯಿತು ಇನ್ನೂ ಸುದ್ದಿ ತಿಳಿದ ಗೋಗಿ ಠಾಣೆ ಸಿಪಿಐ ಚನ್ನಯ್ಯ ಹಿರೇ ಮಠ ಶಾಲೆಗೆ ಆಗಮಿಸಿ ಪರಿಸ್ಥಿತಿ ತಹಬಂದಿಗೆ ತಂದರು. ನಂತರ ಪಾಲಕರು ಮನೆಗೆ ತೆರಳಿದರು.ಶಾಲೆಗೆ ದಾಖಲಾಗಿ ರುವ 195 ವಿದ್ಯಾರ್ಥಿಗಳ ಪೈಕಿ ಮಂಗಳವಾರ 70 ಮಂದಿ ಮಾತ್ರವೇ ಹಾಜರಾಗಿದ್ದಾರೆ.