ಬೆಂಗಳೂರು –
ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಟಾನ ಮಾಡುವ ಜವಾಬ್ದಾರಿಯನ್ನು ಡಿಡಿಪಿಐ ಮತ್ತು ಬಿಇಒ ಗಳಿಗೆ ನೀಡಲಾಗಿದೆ.ಈ ಶೈಕ್ಷಣಿಕ ವರ್ಷ ಮೇ 16 ರಿಂದ ಪ್ರಾರಂಭವಾಗಲಿದ್ದು ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆ ಯನ್ನು ಸರಿದೂಗಿಸುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗದೆ ಎಂದು ಸಚಿವ ಬಿ ಸಿ ನಾಗೇಶ್ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಾಲಾ ಹಂತದಲ್ಲಿ ನಡೆಯಲಿರುವ ಕಲಿಕಾ ಚೇತರಿಕೆಯ ಮಾಹಿತಿ ಯನ್ನು ಸಿಆರ್ ಪಿಗಳ ಮೂಲಕ ತರಿಸಿಕೊಂಡು ಡಿಡಿಪಿಐ ಮತ್ತು ಬಿಇಒಗಳು ಪರಿಶೀಲಿಸಲಿದ್ದಾರೆ ಎಂದರು.
ಕಲಿಕಾ ಚೇತರಿಕೆ ಕಾರ್ಯಕ್ರಮ ಸರ್ಕಾರಿ,ಅನುದಾನಿತ ಅನುದಾನ ರಹಿತ ಶಾಲೆಗಳಿಗೂ ಅನ್ವಯಿಸಲಿದೆ.ಮೊದಲ ತಿಂಗಳು ಬ್ರಿಡ್ಜ್ ಕೋರ್ಸ್ ಮಾಡುವ ಮೂಲ ಹಿಂದಿನ ತರಗತಿಯಲ್ಲಿ ಕಲಿಯಬೇಕಿದ್ದ ಪ್ರಮುಖ ವಿಷಯವನ್ನು ತಿಳಿಸುವುದು.ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳು ಸರಳ ಮತ್ತು ಸುಲಲಿತವಾಗಿ ಓದುವುದು ಮತ್ತು ಬರೆಯುವು ದನ್ನು ಕಲಿಯಬೇಕಾಗಿದೆ.ಓದು ಬರಹ ಬರದಿದ್ದರೇ ಉನ್ನತ ತರಗತಿಗಳಲ್ಲಿ ಎಷ್ಟೇ ಪಾಠವನ್ನು ಬೋಧನೆಯನ್ನು ಮಾಡಿ ದರು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.ಹೀಗಾಗಿಯೇ ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಬುನಾದಿ ಶಿಕ್ಷಣ ಬಹಳ ಮುಖ್ಯ ಎಂದರು.