DDPI ಯಾಗಿ ಭಡ್ತಿ ಪಡೆದು ನಿವೃತ್ತರಾದ I B ಬೆನಕೊಪ್ಪ – L I ಲಕ್ಕಮ್ಮನವರ,ರಮೇಶ ಕಾಂಬಳೆ ಸೇರಿದಂತೆ ಹಲವರಿಂದ ಶುಭಹಾರೈಕೆ…..

Suddi Sante Desk
DDPI ಯಾಗಿ ಭಡ್ತಿ ಪಡೆದು ನಿವೃತ್ತರಾದ I B ಬೆನಕೊಪ್ಪ – L I ಲಕ್ಕಮ್ಮನವರ,ರಮೇಶ ಕಾಂಬಳೆ ಸೇರಿದಂತೆ ಹಲವರಿಂದ ಶುಭಹಾರೈಕೆ…..

ಹಾವೇರಿ

ಭಡ್ತಿ ಹೊಂದಿದ ದಿನವೇ ನಿವೃತ್ತಿಯಾದ ಬ್ಯಾಡಗಿ ಬಿಇಒ ಐ ಬಿ ಬೆನಕೊಪ್ಪ ಶುಭಹಾರೈಸಿದರು ಲಕ್ಕಮ್ಮನವರ ಹಾಗೂ ಹೆಬ್ಬಳ್ಳಿಯ ಕೆ ಜಿ ಎಸ್ ಶಾಲೆಯ ಮುಖ್ಯ ಶಿಕ್ಷಕ ರಮೇಶ ಕಾಂಬಳೆ.

ಹೌದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಐ ಬಿ ಬೆನಕೊಪ್ಪ ಮೇ 31 ನಿವೃತ್ತಿಯಾದರು ಮೇ 31 ರಂದು ಚಾಮರಾಜ ನಗರ ಉಪನಿರ್ದೇಶಕರಾಗಿ (ಅಭಿವೃದ್ಧಿ) ನಿವೃತ್ತಿ ಯಾದರು

ಒಳ್ಳೆಯ ಸಾಹಿತಿ ಬರಹಗಾರರು,ದಕ್ಷ ಅಧಿಕಾರಿ, ಪ್ರಾಮಾಣಿಕ ಅಧಿಕಾರಿ ಶೈಕ್ಷಣಿಕ ಅಭಿವೃದ್ಧಿಯ ಹರಿಕಾರರು ಇವರು ,ಸವಣೂರ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಇದ್ದಾಗ ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ತೃತೀಯ ಸ್ಥಾನ ಬರುವಲ್ಲಿ ಇವರು ತುಂಬಾ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನ ಇವರು ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿ ಗ್ರಾಮದವರು

ಸದ್ಯ ಗದಗದಲ್ಲಿ ವಾಸವಾಗಿದ್ದಾರೆ ಜನಶ್ನೇಹಿ ಅಧಿಕಾರಿ,ಅಪಾರ ಸ್ನೇಹಿತರನ್ನು ಹೊಂದಿರುತ್ತಾರೆ. ಎಂದು ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಕೆ ಜಿ ಎಸ್ ಶಾಲೆಯ ಮುಖ್ಯ ಶಿಕ್ಷಕ ರಮೇಶ ಕಾಂಬಳೆ ತಿಳಿಸಿದರು. ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಮಾತನಾಡಿ

ಬೆನಕೊಪ್ಪ ಅವರು ಸರಳ ಸಜ್ಜನ ವ್ಯಕ್ತಿ, ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಅಧಿಕಾರಿಗಳು‌ ಅಪರೂಪ ಮಕ್ಕಳ ಬಗೆಗಿನ ಇವರ ಕಳಕಳಿ‌ ಕಾಳಜಿ ತುಂಬಾ ಇದೆ, ಎಸ್ ಎಸ್ ಎಲ್ ಸಿ ಓದುತ್ತಿರುವ ಮಕ್ಕಳ ಪಾಲಕರ ಮನೆಮನೆಗೆ ಇವರು ಬೇಟಿನೀಡಿ, ಮಕ್ಕಳಿಗೆ ಓದುವ ಬಗ್ಗೆ ಪ್ರೇರಣೆ ನೀಡಿದರು,

ನೈತಿಕ ಶಿಕ್ಷಣದ ಕುರಿತು ಇವರು ತುಂಬಾ ಕಳಕಳಿ ಯನ್ನು ವ್ಯಕ್ತಪಡಿಸಿ, ನೈತಿಕ ಶಿಕ್ಷಣದ ಕುರಿತು ಶಿಕ್ಷಕರಿಗೆ ಸಲಹೆ ಮಾರ್ಗದರ್ಶನ ನೀಡಿದವರು ಇವರು ಎಂದು ತಿಳಿಸಿದರು, ಸಾವಿತ್ರಿ ಭಾ ಪುಲೆ ಸಂಘದ ರಾಜ್ಯ ಪ್ರಮುಖೆ ಶಮಾ ಪಾಟೀಲ ಸಹ ಇವರು ಮಕ್ಕಳ ಏಳಿಗೆಗೆ ಅದರಲ್ಲೂ ಬಡವರ ಬಗ್ಗೆ ಕಳಕಳಿ ತುಂಬಾ ಮೆಚ್ಚುವಂತದ್ದು ಎಂದರು

ಸುದ್ದಿ ಸಂತೆ ನ್ಯೂಸ್ ಬ್ಯಾಡಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.