ದೆಹಲಿ –
COVID ಲಸಿಕೆಯ ಹೆಸರಿನಲ್ಲಿ ಹೊಸ ಹಗರಣವೊಂದು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಆರಂಭವಾಗಿದೆಯಂತೆ.ಹೌದು ಹುಷಾರಾಗಿರಿ ಸಾರ್ವಜನಿಕರೆ ಅದು ಭಾರತದಲ್ಲಿ ಪ್ರಾರಂಭವಾಗಿದೆಯಂತೆ.

ಹಿರಿಯ ನಾಗರಿಕರಿಗೆ ಕಾಲ್ ಬರುತ್ತೇ “ಡ್ರಗ್ ಅಥಾರಿಟಿ ಆಫ್ ಇಂಡಿಯಾ” ದಿಂದ ಕರೆ ಮಾಡ್ತಿದಿವಿ. ನಿಮಗೆ “ಲಸಿಕೆ” ಹಂಚಿಕೆ ರೆಡಿಯಾಗಿದೆ ಎಂದು ಹೇಳಿ ಅವರ ಆಧಾರ್ ನಂಬರ್ ಮತ್ತು ಓಟಿಪಿ ಪಡೆದು ನಿಮ್ಮ ಬ್ಯಾಂಕ್ ನಲ್ಲಿನ ಹಣ ಲೂಟಿ ಮಾಡ್ತಾರಂತೆ.

ಹೌದು ನಮ್ಮ ಸ್ನೇಹಿತರ ತಂದೆಯೊಬ್ಬರು ಹೀಗೆ ಮೊಸದ ಕರೆಯಿಂದ ಒಬ್ಬರು 12 ಲಕ್ಷ ಕಳೆದುಕೊಂಡಿದ್ದಾರೆ. ದಯಮಾಡಿ ಇಂತಹ ಕರೆಗಳಿಗೆ ಉತ್ತರಿಸಲು ಹೋಗಬೇಡಿ ಎಂಬ ಸಂದೇಶವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಅಲ್ಲದೇ ಸಾಧ್ಯವಾದಷ್ಟು ನಿಮ್ಮವರಿಗೆ ಇದನ್ನು ಹಂಚಿ.ಎನ್ನುವ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಎನೇ ಆಗಲಿ ಈಗಾಗಲೇ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಮೋಸ ಮಾಡುವ ಖದೀಮರಿಗೆ ಈಗ ಮತ್ತೊಂದು ವಸ್ತು ಸಿಕ್ಕಿದ್ದು ಹುಷಾರಾಗಿರಿ ಸಾರ್ವಜನಿಕರೇ ನಿಮಗೂ ಹೀಗೆ ಯಾರಾದರೂ ಕರೆ ಮಾಡಿದರೆ ಮಾಹಿತಿ ನೀಡುವ ಮುನ್ನ ಸ್ವಲ್ಪ ಯೋಚನೆ ಮಾಡಿ.