ಬೆಂಗಳೂರು –
ಹೌದು ಸಧ್ಯ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರನ್ನು ಯಾವುದೇ ಪರೀಕ್ಷೆ ಇಲ್ಲದೇ ನಿಯುಕ್ತಿಗೊಳಿಸಲು ಇಲಾಖೆ ಮುಂದಾ ಗಿದೆಯಂತೆ.ಈ ಕುರಿತಂತೆ ಆರ್ಥಿಕ ಇಲಾಖೆಯ ಕಡತವು ಕೂಡಾ ಒಪ್ಪಿಗೆಯನ್ನು ನೀಡಿದ್ದು ಪದವೀ ಧರ ಶಿಕ್ಷಕರ ಪ್ರತಿಶತ 40 ರಷ್ಟು ಪ್ರಮಾಣದಲ್ಲಿ ಯಾವುದೇ ಪರೀಕ್ಷೆ ಇಲ್ಲದೇ ಅವರನ್ನು ನಿಯುಕ್ತಿ ಗೊಳಿಸಲು ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಈ ಒಂದು ಮಾಹಿತಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಪ್ರಧಾನ ಕಾರ್ಯ ದರ್ಶಿ ಚಂದ್ರಶೇಖರ ನುಗ್ಗಲಿ ಅಧಿಕೃತವಾದ ಮಾಹಿತಿಯನ್ನು ನೀಡಿದ್ದಾರೆ.ಈ ಒಂದು ವಿಚಾರ ಕುರಿತಂತೆ ಈಗಾಗಲೇ ಇಲಾಖೆಯ ಅಧಿಕಾರಿಗಳು ಕಡತಕ್ಕೆ ಒಪ್ಪಿಗೆಯನ್ನು ನೀಡಿದ್ದು ಎರಡು ಮೂರು ದಿನಗಳಲ್ಲಿ ಸಿಹಿ ಸುದ್ದಿ ಸಿಗಲಿದೆ ಎಂದು ಮಾಹಿತಿ ಯನ್ನು ನೀಡಿದ್ದಾರೆ.
ಇನ್ನೂ ಇದರೊಂದಿಗೆ ಆತಂಕದಲ್ಲಿದ್ದ ಸೇವಾ ನಿರತ ಪದವೀಧರ ಶಿಕ್ಷಕರಿಗೆ ನೆಮ್ಮದಿಯ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.