ಬೆಂಗಳೂರು –
ನೋಡಿದರೆ ಕಾಲಿಲ್ಲ ಅಯ್ಯೋ ಪಾಪ ಅನಿಸುತ್ತದೆ ಆತನನ್ನು ನೋಡಿದ್ರೆ. ಅಯ್ಯೋ ಪಾಪ ಅಂತ ಸುಮ್ಮನಿದ್ರೆ ಆಸಾಮಿ ಲಕ್ಷ ಲಕ್ಷ ರೂಪಾಯಿಗೆ ಬೇಡಿಕೆ ಮಾಡತಾನೆ. ಲಂಚ ಕಾಸಿನ ವಿಚಾರಕ್ಕೆ ಬಂದ್ರೆ ಐದು ಪೈಸೆಯೂ ಬಿಡಲ್ಲ ಯಾರನ್ನೂ ನಂಬಲ್ಲ ಇವತ್ತು 20 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೌದು ಬಿಬಿಎಂಪಿ ಯಲ್ಲಿ ಕುಂಟಣ್ಣ ಎಂದೇ ಖ್ಯಾತಿ ಪಡೆದಿರುವ ಬೊಮ್ಮನಹಳ್ಳಿ ವಲಯ ಕಚೇರಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೆಂದ್ರಪ್ಪ ಎಸಿಬಿ ಬಲೆಗೆ ಬಿದ್ದ ಕಥೆ ಇದು.

ವಾಣಿಜ್ಯ ಕಟ್ಟಡಕ್ಕೆ ಒಸಿ ನೀಡಲು 20 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬೊಮ್ಮನಹಳ್ಳಿ ವಲಯದ ನಗರ ಯೋಜನೆ ಸಹಾಯಕ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ಸ್ವೀಕರಿಸಿದ್ದ 20 ಲಕ್ಷ ರೂ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಸಿಗ್ಮೀಸ್ ಬ್ರೆವರೀಸ್ ಕಂಪನಿ ಖಾಸಗಿ ಕಂಪನಿ ಹುಳಿಮಾವು ಸಮೀಪ ಸಿಗ್ಮೀಸ್ ಘಟಕ ತೆಗೆಯಲು ಬೊಮ್ಮನಹಳ್ಳಿ ನಗರ ಯೊಜನೆ ವಿಭಾಗದದಲ್ಲಿ ಅರ್ಜಿ ಸಲ್ಲಿಸಿ ನಕ್ಷೆ ಮಂಜೂರಾತಿ ಪಡೆದಿತ್ತು. ಅದರಂತೆ ಕಟ್ಟಡ ನಿರ್ಮಾಣ ಮಾಡಿದ್ದು, ಒಸಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.ಇದನ್ನು ನೀಡಲು ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ 40 ಲಕ್ಷ ರೂಪಾಯಿ ಹಣ ಲಂಚ ನೀಡುವಂತೆ ಕಂಪನಿ ಮ್ಯಾನೇಜರ್ ಗೆ ಕೇಳಿದ್ದಾರೆ. ಈ ಕುರಿತು ಅರ್ಜಿದಾರರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಶುಕ್ರವಾರ ಮಧ್ಯಾಹ್ನ ಮೆಜೆಸ್ಟಿಕ್ ನ ಅಮರ್ ಹೋಟೆಲ್ ಸಮೀಪ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಡಿವೈಎಸ್ಪಿ ತಮ್ಮಯ್ಯ ಹಾಗೂ ಸುಬ್ರಮಣ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ರೆಡ್ ಹ್ಯಾಂಡ್ ಆಗಿ ದೇವೇಂದ್ರಪ್ಪ ಸಿಕ್ಕಿಬಿದ್ದಿದ್ದಾನೆ. ನಿಮ್ಮ ಕಾಲಿಗೆ ಬೀಳುತ್ತೇನೆ ಬಿಟ್ಟುಬಿಡಿ ಎಂದು ಎಸಿಬಿ ಪೊಲೀಸರನ್ನು ಕೇಳಿ ಕೊಂಡಿದ್ದಾನೆ. ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧ ದಾಖಲೆಗಳಿದ್ದರೂ ಸಹ 40 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೇವೇಂದ್ರಪ್ಪನ ಧನದಾಹ ಏನೆಂಬುದು ಕಂಡು ಬಂದಿದೆ.

ಇನ್ನೂ ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕ ದೇವೇಂದ್ರಪ್ಪನಿಗೆ ಒಂದು ಕಾಲು ಇಲ್ಲ. ಆದ್ರೆ ಕಾಸಿನ ವಿಚಾರದಲ್ಲಿ ರಾಜಿಯಾಗೊದಿಲ್ಲ. ಹೀಗಾಗಿ ಇಲಾಖೆಯಲ್ಲಿ ಚತುರ ಕುಂಟಣ್ಣ ಎಂದೇ ಹೆಸರು ಗಳಿಸಿದ್ದಾರೆ. ಸದ್ಯ ಭಾರಿ ಮೊತ್ತದ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ.