ಧಾರವಾಡ –
ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಭೂಮಿ ಪೂಜೆ – 2 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…..SP ಡಾ ಗೋಪಾಲ ಬ್ಯಾಕೋಡ,ಮಾಜಿ ಶಾಸಕ ಅಮೃತ ದೇಸಾಯಿ,ಶಾಸಕ NH ಕೋನರೆಡ್ಡಿ,KMF ಅಧ್ಯಕ್ಷ ಶಂಕರ ಮುಗದ,ಶಾಕಿರ ಸನದಿ ಸೇರಿದಂತೆ ಹಲವರು ಉಪಸ್ಥಿತಿ
ಧಾರವಾಡದ ಪೊಲೀಸ್ ಹೆಡ್ ಕ್ವಾಟರ್ಸ್ ನಲ್ಲಿರುವ ಎನ್ ಎ ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಮತ್ತು ಭೋಜನಾಲಯವನ್ನು ಆರಂಭಿಸಲಾಗುತ್ತಿದೆ ಹೌದು 2 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ಶಾಲೆಯ ಆವರಣ ದಲ್ಲಿ ಕೋಲ್ ಇಂಡಿಯಾ ಕಂಪನಿಯ ಸಿ.ಎಸ್.ಆರ್ ಅನುದಾನದಲ್ಲಿ ರೂ.2.00ಕೋಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ವಿದ್ಯಾರ್ಥಿ ವಸತಿ ನಿಲಯ ಮತ್ತು ಭೋಜನಾಲಯದ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಚಾಲನೆ ನೀಡಿದರು.ವಿಧಾನ ಪರಿಷಥ್ ಸಭಾಪತಿ ಬಸವರಾಜ ಹೊರಟ್ಟಿ,ಶಾಸಕರಾದ ಎನ್ ಹೆಚ್ ಕೋನರೆಡ್ಡಿ, ಅರವಿಂದ ಬೆಲ್ಲದ.ಮಾಜಿ ಶಾಸಕ ಅಮೃತ ದೇಸಾಯಿ, ಕೆಎಮ್ ಎಫ್ ಅಧ್ಯಕ್ಷ ಶಂಕರ ಮುಗದ,ಎಸ್ಪಿ ಡಾ ಗೋಪಾಲ ಬ್ಯಾಕೋಡ್, ಅವರೊಂದಿಗೆ ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕೇಂದ್ರ ಇಲಾಖೆಯ ಸಚಿವರ ಪ್ರಹ್ಲಾದ ಜೋಶಿಯವರು ಚಾಲನೆ ನೀಡಿದರು.
ಈ ಒಂದು ಸಂದರ್ಭದಲ್ಲಿ ಹು-ಧಾ ಡಿ.ಸಿ.ಪಿ. ನಾರಾಯಣ ನಂದಗವಿ, ಅಡಿಷನಲ್ ಎಸ್.ಪಿ ನಾರಾಯಣ ಭರಮಣಿ, ಡಿ.ವಾಯ್.ಎಸ್.ಪಿ ಧಾರವಾಡ ಗ್ರಾಮೀಣ ಎನ್.ನಾಗರಾಜ, ಡಿ.ವಾಯ್.ಎಸ್.ಪಿ ಶಿವಾನಂದ ಕಟಗಿ CNPS, ಡಿ.ವಾಯ.ಎಸ್.ಪಿ ಡಿ.ಎ.ಎರ್.ಶಿವಾನಂದ ಚಣ್ಣಬಸಪ್ಪನವರ, ಸಿ.ಪಿ.ಐ ಧಾರವಾಡ ಗ್ರಾ,ಶಿವಾನಂದ ಕಮತಗಿ, ಗರಗ ಸಿ.ಪಿ.ಐ ಸಮೀರ ಮುಲ್ಲಾ, ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸಮಿತಿಯ ಅಧ್ಯಕ್ಷರು ಶಾಕಿರ ಸನದಿ, ಕೆ.ಎಮ್.ಎಪ್ ಅಧ್ಯಕ್ಷರು ಶಂಕರ ಮುಗದ,
ಮಾಜಿ ಶಾಸಕರು ಶ ಅಮೃತ ದೇಸಾಯಿ, ಸಲಹಾ ಸಮಿತಿ ಅಧ್ಯಕ್ಣರು ಜಿ.ಆರ್.ಭಟ, ಹಿರಿಯ ನ್ಯಾಯವಾದಿ ಗಳು ಶ್ರೀಕಾಂತ್ ಪಾಟೀಲ, ಕಾರ್ಪೊರೇಟರ್ ಅನೀತಾ ಚಳ್ಳಗೇರಿ, ಪ್ರಾಚಾರ್ಯರು ಡಾ.ಎಸ್.ಒ.ಬಿರಾದಾರ, ಮುಖಂಡರು ವೀರನಗೌಡರ ಮರಿಗೌಡರ, ಸೇರಿದಂತೆ ಶಾಲಾ ಶಿಕ್ಷಣ ವಂದದವರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..