ಗೂಳಿ ಕಾಳಗ – ಮಧವೇರಿದ ಗೂಳಿಗಳಿಂದ ರಸ್ತೆ ಮಧ್ಯೆದಲ್ಲಿ ಬಿಗ್ ಪೈಟ್

Suddi Sante Desk

ಗದಗ –

ಮದುವೇರಿದ ಎರಡು ಗೂಳಿಗಳಿಂದ ರಸ್ತೆ ಮಧ್ಯೆ ಬಿಗ್ ಫೈಟ್ ನಡೆದ ಘಟನೆ ಗದಗ ನಲ್ಲಿ ನಡೆದಿದೆ. ಗದಗ ನಗರದ ಭೂಮರಡ್ಡಿ ಸರ್ಕಲ್ ನಲ್ಲಿ ಈ ಒಂದು ದೊಡ್ಡ ಕಾಳಗವೊಂದು ನಡೆದಿದೆ.

ಜಿದ್ದಿಗೆ ಬಿದ್ದ ಗೂಳಿಗಳಿಂದ 15 ಕ್ಕೂ ಹೆಚ್ಚು ನಿಮಿಷಗಳ ಕಾಲ ಎರಡು ಗೂಳಿಗಳು ರಸ್ತೆ ಮಧ್ಯದಲ್ಲಿಯೇ ಕಾದಾಟ ಮಾಡಿವೆ.

ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ ಗೂಳಿಗಳು ಭಯದಲ್ಲಿಯೇ ವಾಹನ ಸವಾರರು ಸಂಚಾರ ಮಾಡಿದರು.ಇನ್ನೂ ನಗರದಲ್ಲಿ ಅನೇಕ ಬಾರಿ ಈ ಬಗೆಯ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಹೀಗೆ ನಡೆಯುತ್ತಿದ್ದದ್ರೂ ಎಚ್ಚೆತ್ತುಕೊಳ್ಳದ ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳು ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ.

ರಸ್ತೆಯಲ್ಲೇ ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ನಗರಸಭೆ ವಿರುದ್ದ ಸಾರ್ವಜನಿಕರು ಬೇಸತ್ತಿದ್ದಾರೆ. ಅಲ್ಲದೇ ಈ ಕುರಿತಂತೆ ಸಾಕಷ್ಟು ಬಾರಿ ದೂರನ್ನು ನೀಡಿದರು ಸ್ಪಂದಿಸುತ್ತಿಲ್ಲ ಹೀಗಾಗಿ ನಗರದಲ್ಲಿ ಜಾನುವಾರಗಳ ಸಂಖ್ಯೆ ಹೆಚ್ಚಾಗಿದ್ದು ಇನ್ನಾದರೂ ನಿಯಂತ್ರಣಕ್ಕೆ ಮುಂದಾಗೊದು ಅವಶ್ಯಕವಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.